Advertisement

ಬರ್ತ್‌ಡೇ ಪಾರ್ಟಿಯಿಂದ ಹರಡಿತು ಕೋವಿಡ್‌

04:09 PM May 11, 2020 | sudhir |

ಕ್ಯಾಲಿಫೋರ್ನಿಯಾ: ಇಲ್ಲಿನ ಪಾಸಡೆನಾದಲ್ಲಿ ನಡೆದಿದ್ದ ಹುಟ್ಟುಹಬ್ಬದ ಸಂತೋಷ ಕೂಟದಿಂದಾಗಿ ಕೋವಿಡ್‌ ಹಬ್ಬುವಿಕೆ ಅಧಿಕಗೊಂಡು, ನಗರವೇ ಕೋವಿಡ್‌ ಮೂಲವಾಗಿ ಪರಿಣಮಿಸಿತು ಎಂದು ಪಾಸಡೆನಾ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಪಾಲ್ಗೊಂಡಿದ್ದೇ ಕ್ಯಾಲಿಫೋರ್ನಿಯಾವನ್ನು ಕೋವಿಡ್‌ ಬಲೆಯೊಳಗೆ ನರಳುವಂತೆ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆೆ.

Advertisement

ಲಾಕ್‌ಡೌನ್‌ನಲ್ಲೇ ಪಾರ್ಟಿ
ನಗರದಲ್ಲಿ ಲಾಕ್‌ಡೌನ್‌ ನಿರ್ಬಂಧ ಹೇರಲಾದ ಬಳಿಕ ಈ ಪಾರ್ಟಿ ನಡೆದಿತ್ತು. ಇದೇ ಕೋವಿಡ್‌ ಪ್ರಸರಣೆಗೆ ವೇದಿಕೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪಾರ್ಟಿಯಲ್ಲಿ ಒಬ್ಟಾತ ಮಾಸ್ಕ್ ಧರಿಸದೆ ಕೆಮ್ಮತ್ತಲೇ ಇದ್ದ. ಯಾರೊಬ್ಬರೂ ಸಾಮಾಜಿಕ ಕನಿಷ್ಠ ಅಂತರವನ್ನೂ ಪಾಲಿಸಿರಲಿಲ್ಲ. ಲಾಕ್‌ಡೌನ್‌ ಘೋಷಣೆಯಾದ ಬಳಿಕವೂ ಇಷ್ಟು ನಿರ್ಲಕ್ಷ್ಯ ತೋರಿದ್ದು ಕ್ಯಾಲಿಫೋರ್ನಿಯ ನಗರವನ್ನೇ ಕೋವಿಡ್‌ ಕೇಂದ್ರವನ್ನಾಗಿಸಿದೆ. ತನಿಖಾಧಿಕಾರಿಗಳು ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡವರ ಸಂಪರ್ಕವನ್ನು ಪತ್ತೆ ಹಚ್ಚುತ್ತಾ ಹೋದಂತೆ ಕೋವಿಡ್‌ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡ ಐವರಲ್ಲಿ ಆರಂಭಿಕ ಹಂತದಲ್ಲೇ ಕೋವಿಡ್‌ ವೈರಸ್‌ ಪತ್ತೆಯಾಗಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕ್ಯಾಲಿಫೋರ್ನಿಯಾದಲ್ಲಿ ಈಗಾಗಲೇ 66,550ಕ್ಕೂ ಹೆಚ್ಚು ಜನರು ವೈರಸ್‌ ಸೋಂಕಿಗೆ ಒಳಗಾಗಿದ್ದು, ಕನಿಷ್ಠ 2,687 ಮಂದಿ
ಸಾವನ್ನಪ್ಪಿದ್ದಾರೆ ಎಂದು ಜಾನ್ಸ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಲಾಕ್‌ಡೌನ್‌ ನಿರ್ಬಂಧ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿದ್ದರೆ ಇಷ್ಟೊಂದು ಕಷ್ಟದ ಪರಿಸ್ಥಿತಿ ಕ್ಯಾಲಿಫೋರ್ನಿಯಾಕ್ಕೆ ಬರುತ್ತಿರಲಿಲ್ಲ. ಈಗ ಅಂತೂ ಇಲ್ಲಿನವರು “ಮನೆಯಲ್ಲಿ ಮಾತ್ರ ಸುರಕ್ಷೆ’ ಎಂಬುದನ್ನು ನಂಬಿದ್ದಾರೆ. ಹೊರಗೆ ಬರಲೂ ಭಯಪಡುತ್ತಿದ್ದಾರೆ. ಒಂದೇ ಮನೆಯಲ್ಲಿ ವಾಸಿಸದವರ ಸಣ್ಣ ಭೇಟಿಯನ್ನೂ ಇಲ್ಲಿ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next