Advertisement

ಸೋಂಕು ಪರೀಕ್ಷಾ ವರದಿ 24 ಗಂಟೆಯ ಒಳಗೆ ಕೊಡಬೇಕು : ಗೌರವ್‌ಗುಪ್ತ

09:54 PM Apr 27, 2021 | Team Udayavani |

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಬಿಯು ಸಂಖ್ಯೆ ವಿಳಂಬ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಕೊರೊನಾ ಸೋಂಕು ಪರೀಕ್ಷೆಗೆ ಒಳಪಟ್ಟವರ ಪರೀಕ್ಷಾ ಫ‌ಲಿತಂಶವನ್ನು ಕಡ್ಡಾಯವಾಗಿ 24 ಗಂಟೆಯ ಒಳಗಾಗಿ ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಅವರು ಪುನರುಚ್ಚರಿಸಿದರು.

Advertisement

ಈ ಸಂಬಂಧ ಆರೋಗ್ಯಾಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಆಯುಕ್ತರು, ಸೋಂಕು ಪರೀಕ್ಷಾ ವರದಿ ವಿಳಂಬಕ್ಕೆ ಕಡಿವಾಣ ಹಾಕಿ ಎಂದು ನಿರ್ದೇಶನ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆ ಮಾಡುವ ವೇಳೆ, ಕೋವಿಡ್‌ ಸ್ವಾಬ್‌ ಸಂಗ್ರಹಗಾರರು ಪೋರ್ಟ್‌ಲ್‌ನಲ್ಲಿ ಪರೀಕ್ಷೆಗೆ ಒಳಪಡುವವರ ನಿಖರವಾದ ಮೊಬೈಲ್‌ ಸಂಖ್ಯೆ, ವಿಳಾಸ ಹಾಗೂ ಕಡ್ಡಾಯವಾಗಿ ಪಿನ್‌ಕೋಡ್‌ ನಮೂದಿಸಬೇಕು. ತಪ್ಪು ಮಾಹಿತಿ ದಾಖಲಿಸಿದರೆ, ಸೋಂಕಿತರ ಟ್ರೇಸಿಂಗ್‌ ಮಾಡಲು ಕಷ್ಟವಾಗುತ್ತದೆ ಎಂದರು.

ಇದನ್ನೂ ಓದಿ :ಮೇ ತಿಂಗಳಲ್ಲಿ ಬ್ಯಾಂಕ್‌ ನೌಕರರಿಗೆ 12 ದಿನ ರಜೆ! ಕರ್ನಾಟಕದ ಉದ್ಯೋಗಿಗಳಿಗೆ 9ದಿನ ಮಾತ್ರ ರಜೆ

ಖಾಸಗಿ ಲ್ಯಾಬ್‌ಗಳಿಗೆ ಮತ್ತೂಮ್ಮೆ ಎಚ್ಚರಿಕೆ: ಕೊರೊನಾ ಸೋಂಕು ಪರೀಕ್ಷೆಗೆ ಒಳಪಡುವವರ ವರದಿಯನ್ನು ಖಾಸಗಿ ಪ್ರಯೋಗಾಲಯಗಳು 24 ಗಂಟೆಯ ಒಳಗಾಗಿ ನೀಡಬೇಕು. ಈ ಮೂಲಕ ತ್ವರಿತವಾಗಿ ಬಿಯು ಸಂಖ್ಯೆ ರಚಿಸಲು ಕ್ರಮವಹಿಸಬೇಕು. ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುವವರ ಮೇಲೆ ಕ್ರಮಕೈಗೊಳ್ಳಿ ಎಂದರು.

ಕೋವಿಡ್‌ ಪರೀಕ್ಷೆ ಮಾಡಿದ ನಂತರ ಲ್ಯಾಬ್‌ಗಳು ತಡವಾಗಿ ಫ‌ಲಿತಾಂಶ ನೀಡುತ್ತಿರುವುದರಿಂದ ಸಾಕಷ್ಟು ಮಂದಿಗೆ ಬಿಯು ಸಂಖ್ಯೆ ಸಕಾಲದಲ್ಲಿ ಸಿಗದೆ ಸಮಸ್ಯೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದಗ್ರಗಳಲ್ಲಿ ಅವಶ್ಯಕ ಔಷಧ ಸಂಗ್ರಹ ಮಾಡಿಕೊಳ್ಳುವಂತೆ ಆಯುಕ್ತರು ಸೂಚಿಸಿದರು.

Advertisement

ವಲಯ ಪ್ರಾ ಥ ಮಿಕ ಆರೋಗ್ಯ ಕೇಂದ್ರ ಸಂಖ್ಯೆ
ದಾಸರಹಳ್ಳಿ 6
ರಾಜರಾಜೇಶ್ವರಿ ನಗರ 12
ಯಲಹಂಕ ವಲಯ 10
ಬೊಮ್ಮನಹಳ್ಳಿ 13
ಪೂರ್ವ 28
ಪಶ್ಚಿಮ 29
ದಕ್ಷಿಣ 27
ಮಹದೇವಪುರ 14

Advertisement

Udayavani is now on Telegram. Click here to join our channel and stay updated with the latest news.

Next