ಹುಬ್ಬಳ್ಳಿ: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರಿಗೆ ಜೋಡೋ ಯಾತ್ರೆಗೆ ಭಾರಿ ಬೆಂಬಲ ದೊರೆಯುತ್ತಿರುವುದರಿಂದ ಕೋವಿಡ್ ನೆಪ ಹೇಳಿ ಬಿಜೆಪಿ ಸರ್ಕಾರ ತಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಹೋದಲ್ಲಿ ಜನ ಬೆಂಬಲ ಹಾಗೂ ಪ್ರಚಾರ ದೊರೆಯುತ್ತಿದೆ. ಹೀಗಾಗಿ ಕೋವಿಡ್ ಬರುತ್ತಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಕಠಿಣ ಪದ ಬಳಕೆ ಮಾಡಬೇಕು, ಕುಲದೀಪ್ ರನ್ನು ಕೈಬಿಟ್ಟಿದ್ದು ನಂಬಲಸಾಧ್ಯ: ಗಾವಸ್ಕರ್ ಅಸಮಾಧಾನ
ನಾನು ಮೇಕೆದಾಟು ಯಾತ್ರೆ ಕೈಗೊಂಡ ಸಂದರ್ಭದಲ್ಲಿಯೂ ಸಹ ಈ ಸರ್ಕಾರ ತಡೆಯಲು ಪ್ರಯತ್ನ ಪಟ್ಟಿತ್ತು. ನನ್ನ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೂರ್ನಾಲ್ಕು ಪ್ರಕರಣ ಸಹ ದಾಖಲಿಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಮಾಡಬಾರದು ಎಂಬ ಉದ್ದೇಶ ಬಿಜೆಪಿ ಹೊಂದಿದೆ. ಆದರೆ ಕೋವಿಡ್ ಬಗ್ಗೆ ನನಗೆ ವೈಜ್ಞಾನಿಕ ಮಾಹಿತಿ ಇಲ್ಲ ಎಂದರು.
ಚುನಾವಣೆಯನ್ನೂ ಸಹ ಮುಂಚಿತವಾಗಿ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆ ಯಾವಾಗ ಮಾಡಿದರು ನಮ್ಮ ಪಕ್ಷ ಸಿದ್ಧವಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.