Advertisement

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರಿಗೆ ಕೋವಿಡ್ ಪಾಸಿಟಿವ್

07:36 PM Aug 13, 2020 | Mithun PG |

ಉಡುಪಿ: ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರಿಗೆ ಗುರುವಾರ ಕೋವಿಡ್ ದೃಢಪಟ್ಟಿದ್ದು, ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Advertisement

ಶಾಸಕರ ಆಪ್ತ ಕಾರ್ಯದರ್ಶಿಗೆ ಕಳೆದ ವಾರ ಸೋಂಕು ಧೃಡಪಟ್ಟಿದ್ದು, ಆ ಬಳಿಕ ಶಾಸಕರು ಸ್ವಯಂ ಕ್ವಾರಂಟೈನ್ ನಿಯಮಾವಳಿಗೊಳಗಾಗಿದ್ದರು. ವಾರದ ಬಳಿಕ ಪರೀಕ್ಷೆಗೊಳಗಾದ ಶಾಸಕರಲ್ಲಿ ಸೋಂಕು ಧೃಡಪಟ್ಟಿದ್ದರೂ, ಅವರಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಕೂಡಾ ಸರಕಾರದ ನಿಯಮಾವಳಿಯಂತೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಶೂಶ್ರುಷೆ ಪಡೆಯಲು ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸ್ವತಃ ಶಾಸಕರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದು, ಆಪ್ತ ಕಾರ್ಯದರ್ಶಿಯೋರ್ವರಿಗೆ ಕೋವಿಡ್ 19  ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ 7 ದಿನಗಳಿಂದ ಹೋಂ ಕಾರಂಟೈನ್‌ನಲ್ಲಿದ್ದು ಮುಂಜಾಗೃತಾ ಕ್ರಮವಾಗಿ ಸ್ವಯಂ ಪರೀಕ್ಷೆಗೊಳಗಾದಾಗ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕು ಪತ್ತೆ ಕಾರಣದಿಂದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಶೂಶ್ರುಷೆ ಪಡೆಯುತ್ತಿದ್ದೇನೆ. ಈ ಬಗ್ಗೆ ಕ್ಷೇತ್ರದ ಜನತೆ, ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಯಾವುದೇ ಕಾರಣಕ್ಕೂ ಗೊಂದಲಕ್ಕೊಳಗಾಗುವ ಅವಶ್ಯಕತೆಯಿಲ್ಲ. ಮುಂದಿನ ಸೋಮವಾರದಿಂದ ಶಾಸಕರ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಅಗತ್ಯ ಕಾರ್ಯಗಳಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಶಾಸಕ ಲಾಲಾಜಿ ಆರ್. ಮೆಂಡನ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next