Advertisement

ಕೋವಿಡ್ ಕಳವಳ: ದಿನಕಳೆದಂತೆ ಸೋಂಕು ಗುಣಮುಖ ಪ್ರಮಾಣ ಸುಧಾರಣೆ

11:13 PM May 14, 2020 | Hari Prasad |

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಗುಣಮುಖ ಪ್ರಮಾಣ ಸುಧಾರಿಸುತ್ತಾ ಸಾಗಿದ್ದು, ಜಗತ್ತಿನಲ್ಲೇ ಅತಿ ಕಡಿಮೆ ಮರಣ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

Advertisement

ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ, ಗುಣಮುಖ ಪ್ರಮಾಣವೂ ಸುಧಾರಣೆಯಾಗುತ್ತಿದೆ. ದೇಶದಲ್ಲಿ ಈಗ ಗುಣಮುಖ ಪ್ರಮಾಣ ಶೇ.31.7ರಷ್ಟಿದೆ. ಜಾಗತಿಕ ಮರಣ ಪ್ರಮಾಣ ಶೇ.7ರಿಂದ 7.5ರಷ್ಟಿದೆ. ಭಾರತದಲ್ಲಿ ಇದು ಶೇ.3.2 ಎಂದು ಹರ್ಷವರ್ಧನ್‌ ಮಾಹಿತಿ ನೀಡಿದ್ದಾರೆ.

3,604 ಪ್ರಕರಣ: ಸೋಮವಾರ ಬೆಳಗ್ಗೆ 8ರಿಂದ‌ ಮಂಗಳವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ 3,604 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಅವಧಿಯಲ್ಲಿ 87 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮೃತ 87 ಮಂದಿಯಲ್ಲಿ 36 ಸಾವು ಮಹಾರಾಷ್ಟ್ರವೊಂದರಲ್ಲೇ ಸಂಭವಿಸಿದೆ.

 

ಆರೋಗ್ಯ ಸಿಬಂದಿಯ ಮುಕ್ತಸಂಚಾರಕ್ಕೆ ಸೂಚನೆ

Advertisement

ಲಾಕ್‌ಡೌನ್‌ ವೇಳೆ ವೈದ್ಯರು, ಆರೋಗ್ಯ ಕಾರ್ಯಕರ್ತರ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವಂತೆ ಕೋರಿ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಅಂತರ್‌ರಾಜ್ಯ ಗಡಿಗಳನ್ನು ಮುಚ್ಚಿದ ಪರಿಣಾಮ, ತೊಂದರೆಯಾಗಿತ್ತು.

ವೈದ್ಯರು, ಪ್ಯಾರಾಮೆಡಿಕಲ್‌ ಸಿಬಂದಿಗೆ ನಿರ್ಬಂಧ ಹೇರಬಾರದು. ಆರೋಗ್ಯ ಆವಶ್ಯಕತೆಗಾಗಿ ತುರ್ತು ಸೇವೆಯಲ್ಲಿರುತ್ತಾರೆ.ಖಾಸಗಿ ಚಿಕಿತ್ಸಾಲಯ, ನರ್ಸಿಂಗ್‌ ಹೋಮ್‌ ತೆರೆಯಲು ಅವಕಾಶಕೊಡದ್ದಕ್ಕೆ ಆಕ್ಷೇಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next