Advertisement

ಕೊರೊನಾ: ಸಹಾಯಕ್ಕಾಗಿ ಜ್ಯೋತಿ ಗಣೇಶ್‌ ಮನವಿ

09:11 PM May 29, 2021 | Team Udayavani |

ತುಮಕೂರು: ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಇರುವ ಇಂತಹಕಠಿಣ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಪಾಲಿಕೆಗೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಮಾಡುವಂತೆ ನಗರ ಶಾಸಕ ಜ್ಯೋತಿಗಣೇಶ್‌ ಮನವಿ ಮಾಡಿದರು.

Advertisement

ನಗರದಲ್ಲಿ ಸಂಸ್ಥೆಯ ನಿರ್ದೇಶಕಿ ದಯಾಶೀಲಾ ಅವರಿಗೆ ಮನವಿನೀಡಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮಗಳುನಡೆದಿದ್ದು, ಅವೆಲ್ಲವೂ ಸಾರ್ವಜನಿಕರಿಗೆ ಉತ್ತಮವಾದಂತಹರೀತಿಯಲ್ಲಿ ಉಪಯುಕ್ತವಾಗಿವೆ.

ಜಿಲ್ಲೆಯಲ್ಲಿ ಕೋವಿಡ್‌ನಿಂದಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರದಿಂದ ಹತ್ತುಹಲವಾರು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಮತ್ತಷ್ಟು ಅಶಕ್ತರಿಗೆಬೇರು ಮಟ್ಟದಲ್ಲಿ ಸಹಾಯದ ಅವಶ್ಯಕತೆಯಿದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕಿ ದಯಾಶೀಲಾ ಮಾತನಾಡಿ, ಈಗಾಗಲೇ ಕೋವಿಡ್‌ನಿಂದ ಮೃತಪಟ್ಟವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಿಗೆ 2 ಲಕ್ಷ ರೂ.ವಿಮೆಯನ್ನುಸಂಸ್ಥೆಯಿಂದ ನೀಡಲಾಗುತ್ತಿದ್ದು, ಪ್ರತಿ ತಿಂಗಳು ನೀಡುವ ವಿವಿಧಮಾಸಾಶನಗಳನ್ನು ಚಾಚು ತಪ್ಪದೇಸಂಸ್ಥೆಯ ವತಿಯಿಂದ ಫ‌ಲಾನುಭವಿಗಳ ಮನೆಗೆ ತಲುಪಿಸುವ ಕೆಲಸವನ್ನು ಸಂಸ್ಥೆಮಾಡುತ್ತಿದೆ ಎಂದರು. ಯೋಜನಾಧಿಕಾರಿ ಚನ್ನಕೇಶವ, ಸುನಿತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next