ಚಿಕ್ಕಮಗಳೂರು: ಜೀವನಕ್ಕಿಂತ ಜೀವ ಮುಖ್ಯ.ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆಪಡೆದುಕೊಳ್ಳಬೇಕೆಂದು ಗೃಹ ಸಚಿವ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರಹೇಳಿದರು.ಸೋಮವಾರ ನಗರದ ಬೇಲೂರುರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜುಆವರಣದಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯಇಲಾಖೆಯಿಂದ ಆಯೋಜಿಸಿದ್ದ 15ರಿಂದ18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆಲಸಿಕಾಕರಣಕ್ಕೆ ಚಾಲನೆ ನೀಡಿ ಅವರುಮಾತನಾಡಿದರು.
ಕೋವಿಡ್ ಮೊದಲ ಮತ್ತು ಎರಡನೇಅಲೆ ನಮ್ಮನ್ನು ಸಾಕಷ್ಟು ಬಾಧಿಸಿದೆ. ಸಾವು-ನೋವು ಸಂಭವಿಸಿವೆ. ಒಮಿಕ್ರಾನ್ ನಮ್ಮನ್ನುಬಾಧಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕುಎಂದು ಹೇಳಿದರು.ಜಿಲ್ಲೆಯಲ್ಲಿ ಕೋವಿಡ್ ಮೊದಲ ಹಂತದಲಸಿಕೆ ಶೇ.97ರಷ್ಟು ನೀಡಲಾಗಿದೆ. 2ನೇ ಲಸಿಕೆಶೇ.81ರಷ್ಟು ನೀಡಲಾಗಿದೆ. ರಾಜ್ಯದಲ್ಲಿ ಉತ್ತಮಸಾಧನೆ ಮಾಡಲಾಗಿದೆ. ಲಸಿಕೆ ನೀಡಲುಶ್ರಮಿಸಿದ ಅಂಗನವಾಡಿ, ಆಶಾ ಕಾರ್ಯಕರ್ತರುಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಶ್ರಮಶ್ಲಾಘನೀಯ ಎಂದರು.
ಕೋವಿಡ್ 2ನೇ ಅಲೆ ಸಂದರ್ಭದಲ್ಲಿಶಾಲಾ- ಕಾಲೇಜುಗಳನ್ನು ಮುಚ್ಚಬೇಕಾಯಿತು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡಹೊಡೆತವಾಯಿತು. ಈಗ ನಿಧಾನಗತಿಯಲ್ಲಿಸೋಂಕು ಉಲ್ಬಣಿಸುತ್ತಿದ್ದು, ಪ್ರತಿಯೊಬ್ಬರೂಜಾಗ್ರತೆ ವಹಿಸಬೇಕು. ಶೈಕ್ಷಣಿಕ ಭವಿಷ್ಯದದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಲಸಿಕೆನೀಡಲಾಗುತ್ತಿದೆ. ಪ್ರತಿಯೊಬ್ಬರೂ ಲಸಿಕೆಪಡೆದುಕೊಳ್ಳುವಂತೆ ಮನವಿ ಮಾಡಿದರು.ಕೋವಿಡ್ ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ. ಸೋಂಕು ಕಡಿಮೆಯಾಗಿದೆಎಂದು ನಾವಿಂದು ಮೈಮರೆತ್ತಿದ್ದೇವೆ. ಯಾರೂಕೂಡ ಮೈಮರೆಯದೆ ಎಚ್ಚರ ವಹಿಸಬೇಕು.ಇಲ್ಲವಾದಲ್ಲಿ ಲಾಕ್‌ಡೌನ್ ವಿ ಧಿಸುವಅನಿವಾರ್ಯ ಪರಿಸ್ಥಿತಿ ಎದುರಾಗಬಹುದು.ಇದಕ್ಕೆ ಅವಕಾಶ ನೀಡಬೇಡಿ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯಸರ್ಕಾರ ಕೋವಿಡ್ ನಿರ್ಮೂಲನೆ ಮಾಡುವನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕಾಅಭಿಯಾನ ಆರಂಭಿಸಿದೆ. ಈ ಪೈಕಿ ಜಿಲ್ಲೆಯಲ್ಲಿ ಉತ್ತಮ ಲಸಿಕಾಕರಣವಾಗಿದೆ ಎಂದ ಅವರು,ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದುಜನತೆ ಹೆಚ್ಚು ನಿಗಾ ವಹಿಸಬೇಕು. ಕಡ್ಡಾಯವಾಗಿಕೋವಿಡ್ ನಿಯಮಗಳನ್ನು ಪಾಲಿಸುವಂತೆತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾ ಧಿಕಾರಿ ಡಾ|ಉಮೇಶ್ ಮಾತನಾಡಿ,ಜಿಲ್ಲೆಯಲ್ಲಿ ಇಂದಿನಿಂದ 15-18 ವಯೋಮಾನದಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ವಿತರಣೆಗೆ ಚಾಲನೆದೊರಕಿದ್ದು, ಜಿಲ್ಲೆಯಲ್ಲಿ 40,707 ಮಕ್ಕಳಿಗೆ ಲಸಿಕೆನೀಡುವ ಗುರಿ ಹೊಂದಲಾಗಿದೆ ಎಂದರು.ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್, ಜಿಪಂಸಿಇಒ ಜಿ.ಪ್ರಭು, ಜಿಲ್ಲಾ ಸರ್ಜನ್ ಡಾ|ಮೋಹನ್‌ಕುಮಾರ್, ಆರ್.ಸಿ.ಎಚ್. ಡಾ|ಭರತ್, ತಾಲೂಕು ವೈದ್ಯಾ ಧಿಕಾರಿ ಡಾ| ಸೀಮಾ,ಪ್ರಾಂಶುಪಾಲ ಲೋಕೇಶ್, ಎಸ್‌ಡಿ ಎಂಸಿ ಅಧ್ಯಕ್ಷೆಚೈತ್ರಾ ಆಚಾರ್ ಇತರರು ಇದ್ದರು.