Advertisement

ಜಿಲ್ಲೆಗಳಲ್ಲಿ ಶೂನ್ಯಕ್ಕಿಳಿದ ಕೋವಿಡ್‌

05:43 PM Nov 04, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕು ಪತ್ತೆಯಲ್ಲಿರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಗಣಿನಾಡುಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಕಳೆದಎರಡು ದಿನಗಳಿಂದ ಸೋಂಕು ಪತ್ತೆಶೂನ್ಯಕ್ಕಿಳಿದ್ದು, ಉಭಯ ಜಿಲ್ಲೆಗಳ ಜನರುನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವಮಹಮ್ಮಾರಿ ಸೋಂಕು, ಬಳ್ಳಾರಿ/ವಿಜಯನಗರಜಿಲ್ಲೆಗಳಲ್ಲೂ 1689 ಜನರನ್ನು ಬಲಿಪಡೆದುಕೊಂಡಿದೆ. ಮೊದಲ ಅಲೆಗಿಂತಲೂಎರಡನೇ ಅಲೆಯಲ್ಲಿ ಉಭಯ ಜಿಲ್ಲೆಗಳಲ್ಲಿಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದನಾಲ್ಕೈದು ತಿಂಗಳುಗಳಿಂದ ಸೋಂಕುಪತ್ತೆ, ಸಾವಿನ ಪ್ರಮಾಣವೂ ಗಣನೀಯಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತಿದಿನ 1, 2ಅಥವಾ 10ರೊಳಗಿನ ಸಂಖ್ಯೆಯಲ್ಲಿ ಸೋಂಕುಪತ್ತೆಯಾಗುತ್ತಿದೆ. ಇನ್ನುಸಾವಿನ ಪ್ರಮಾಣಅಂದಾಜು ಎರಡು ಮೂರುತಿಂಗಳಿಂದ ಸೋಂಕಿಗೆಒಬ್ಬರೂ ಬಲಿಯಾಗಿರುವ ಕುರಿತು ವರದಿಯಾಗದೆ ಶೂನ್ಯಕ್ಕಿಳಿದಿದೆ.

ಇನ್ನು ಕೋವಿಡ್‌ ಸೋಂಕು ಎರಡನೇಅಲೆ ಇಳಿಮುಖವಾಗುತ್ತಿದ್ದಂತೆ ಸೆಪ್ಟೆಂಬರ್‌,ಅಕ್ಟೋಬರ್‌ ತಿಂಗಳಲ್ಲಿ ಸಂಭವನೀಯಮೂರನೇ ಅಲೆ ಆವರಿಸಲಿದೆ ಎಂಬಮಾತುಗಳು ಕೇಳಿಬಂದಿದ್ದವು. ಇದು ಜನರಲ್ಲಿಮತ್ತಷ್ಟು ಆತಂಕ ಸೃಷ್ಟಿಸಿತ್ತಾದರೂ, ಎರಡುತಿಂಗಳು ಕಳೆದರೂ ಸೋಂಕು ಪತ್ತೆಯ ಪ್ರಮಾಣಹೆಚ್ಚಾಗದಿರುವುದು ಉಭಯ ಜಿಲ್ಲೆಗಳ ಜನರಲ್ಲಿ ನೆಮ್ಮದಿ ಮೂಡಿಸಿದೆ.

ಈ ನಡುವೆ ಕಳೆದ ಎರಡುದಿನಗಳಿಂದ ಅ. 2,3 ರಂದುಸೋಂಕು ಪತ್ತೆ ಶೂನ್ಯಕ್ಕಿಳಿದ್ದು,ಎರಡು ದಿನಗಳಲ್ಲಿ ತಲಾಇಬ್ಬರು ಒಟ್ಟು ನಾಲ್ಕುಜನರು ಸೋಂಕಿನಿಂದಗುಣ ಮುಖರಾಗಿಬಿಡುಗಡೆ ಯಾಗಿದ್ದಾರೆ.ಇನ್ನು ಬಳ್ಳಾರಿ 58, ಸಂಡೂರು 9, ಸಿರುಗುಪ್ಪ9, ಕೂಡ್ಲಿಗಿ 2, ಹಡಗಲಿ 8, ಹೊಸಪೇಟೆ 4,ಹ.ಬೊ.ಹಳ್ಳಿ 9, ಹರಪನಹಳ್ಳಿ 8, ಇತರೆ ರಾಜ್ಯ2, ಇತರೆ ಜಿಲ್ಲೆ 1 ಸೇರಿ ಒಟ್ಟು 110 ಸಕ್ರಿಯಪ್ರಕರಣಗಳಿವೆ. ಈವರೆಗೆ ಒಟ್ಟು 97767ಜನರಲ್ಲಿ ಸೋಂಕು ಪತ್ತೆಯಾಗಿದ್ದು, 95968ಜನರು ಗುಣಮುಖರಾಗಿದ್ದಾರೆ. 1689ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದುಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್‌ ಟೆಸ್ಟ್‌ ಇಳಿಕೆ: ಬಳ್ಳಾರಿ/ವಿಜಯನಗರಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು ನಿಧಾನವಾಗಿಇಳಿಕೆಯಾಗುತ್ತಿದ್ದಂತೆ ಕೋವಿಡ್‌ ಟೆಸ್ಟ್‌ಪ್ರಮಾಣವೂ ಕಡಿಮೆಯಾಗಿದೆ. ಈ ಮೊದಲುಪ್ರತಿದಿನ 2 ರಿಂದ 3 ಸಾವಿರಕ್ಕೂ ಹೆಚ್ಚು ಜನರನ್ನುಟೆಸ್ಟಿಂಗ್‌ ಮಾಡಲಾಗುತ್ತಿತ್ತು. ಆದರೆ, ಇದೀಗರ್ಯಾಪಿಡ್‌ ಆಂಟಿಜೆನ್‌ 534, ಆರ್‌ಟಿಪಿಸಿಆರ್‌532 ಸೇರಿ ಪ್ರತಿದಿನ 1066 ಜನರಿಗೆ ಟೆಸ್ಟ್‌ಮಾಡಲಾಗಿದೆ. ಈವರೆಗೆ ರ್ಯಾಪಿಡ್‌ ಆಂಟಿಜೆನ್‌3,46,409, ಆರ್‌ಟಿಪಿಸಿಆರ್‌ 8,29,579ಸೇರಿ ಒಟ್ಟು 11,75,988 ಜನರಿಗೆ ಟೆಸ್ಟ್‌ಮಾಡಲಾಗಿದೆ. ಇನ್ನು ಉಭಯ ಜಿಲ್ಲೆಗಳಲ್ಲಿಇವರೆಗೆ 17,26,822 ಜನರಿಗೆ ಪ್ರಥಮ,8,36,378 ಜನರಿಗೆ ಎರಡನೇ ಡೋಸ್‌ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾಡಳಿತಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next