ನಂಜನಗೂಡು: ರಾಜ್ಯಾದ್ಯಂತ ಕೊರೊನಾಬಾಧೆಯಿಂದಾಗಿ ಹಳ್ಳಿಗಳು ಸಂಕಷ್ಟ ಅನು ಭವಿಸುತ್ತಿರುವ ನಡುವೆ ಕೊರೊನಾ ಪ್ರಕರಣವೇ ಇಲ್ಲದ ತಾಲೂಕಿನ ಹರದನಹಳ್ಳಿ ಗ್ರಾಪಂನ ಉಚ್ಚಗಣಿಹಾಗೂ ಕಾಟೂರು ಎಂಬ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದುಳಿದ ವರ್ಗಗಳೇ ಹೆಚ್ಚಾಗಿರುವ ಈಎರಡೂ ಗ್ರಾಮಗಳ ಜನಸಂಖ್ಯೆ 2.800. ಇಲ್ಲಿ ಈವರೆಗೂ ಕೊರೊನಾ ಪಾಸಿಟಿವ್ ಪ್ರಕರಣಕಂಡು ಬಂದಿಲ್ಲ.ಇಂಥಹ ಅಪರೂಪದ ಗ್ರಾಮಕ್ಕೆ ಮೈಸೂರುಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಹರ್ಷವರ್ಧನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯತ್ ಭೇಟಿ ನೀಡಿ ಕೊರೊನಾ ಕಾಣಿಸದೇ ಇರಲು ಈ ಗ್ರಾಮದಲ್ಲಿರಬಹುದಾದ ಕಾರಣಗಳಕುರಿತು ಪರಿಶೀಲಿಸಿದರು.
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಶಾಸಕರಿಗೆ ಇಲ್ಲಿನ ಪರಿಸ್ಥಿತಿ ವಿವರಿಸಿದ ಗ್ರಾಮಸ್ಥರುನಾವ್ಯಾರೂ ಬೇರೆ ಗ್ರಾಮಕ್ಕೆ ಹೋಗಿಲ್ಲ. ಬೇರೆಯವರೂ ಬಾರದಂತೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದೇವೆ. ಅದನ್ನು ಕಟ್ಟು ನಿಟ್ಟಾಗಿಪಾಲಿಸುತ್ತಿದ್ದೇವೆಎಂದರು.ನಮ್ಮಈನಿರ್ಧಾರಕ್ಕೆಇಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಕುಂಡಿಮಹದೇವಸ್ವಾಮಿ ಕಾರಣವಾಗಿದ್ದು ಸರ್ಕಾರಅವರನ್ನೇಕೆ ಕಡ್ಡಾಯ ರಜೆ ಮೇಲೆ ಕಳಿಸಿದೆ ಎಂದು ಗ್ರಾಮಸ್ಥರು ನೇರವಾಗಿ ಜಿಲ್ಲಾಧಿಕಾರಿ,ಶಾಸಕರನ್ನು ಪ್ರಶ್ನಿಸಿದರು. ಉತ್ತರಿಸಲಾರದ ಜಿಲ್ಲಾಧಿಕಾರಿ ಅವರಿಗೆ ಕೋವಿಡ್ ಬಂದಿದೆ.ಗುಣವಾದ ನಂತರ ಬರುತ್ತಾರೆ ಎಂದಾಗಇದನ್ನುಒಪ್ಪದ ಗ್ರಾಮಸ್ಥರು,ಅವರನ್ನು ರಜೆಯಮೇಲೆ ಕಳಿಸಿದ್ದು ಯಾವಾಗ, ಕೋವಿಡ್‌ಬಂದಿದ್ದು ಯಾವಾಗ ಎಂದಾಗ, ಉತ್ತರಿಸಲಾರದ ಸ್ಥಿತಿ ಜಿಲ್ಲಾಧಿಕಾರಿ, ಶಾಸಕರದ್ದಾಯಿತು.
ನಂತರ ಕೊರೊನಾ ತಡೆಗಟ್ಟಲು ನೀವು ತೆಗೆದುಕೊಂಡಿರುವ ತೀರ್ಮಾನ ಬೇರೆ ಗ್ರಾಮಗಳಿಗೆಮಾದರಿಯಾಗಿದೆ ಎಂದ ಜಿಲಾಧಿಕÉ ಾರಿ, ಇನ್ನೂಕೆಲವು ದಿನ ನೀವೂ ಇದನ್ನೇ ಮುಂದುದುವರಿಸಿಗ್ರಾಮದ ಎಲ್ಲರ ಆರೋಗ್ಯ ಕಾಪಾಡಿಕೊಳ್ಳಿಎಂದರು. ರಾಜ್ಯದ ಎಲ್ಲಾ ಗ್ರಾಮದವರೂ ಇದೇರೀತಿ ತೀರ್ಮಾನಕೈಗೊಂಡರೆ ಎಷ್ಟು ಚೆನ್ನಾಗಿರುತ್ತೆಎಂದು ಉಧ^ರಿಸುತ್ತ ಅವರು ಉಚಗc ಣಿಯಿಂದಕಾಟೂರಿನತ್ತ ಪ್ರಯಾಣ ಬೆಳೆಸಿದರು. ತಹಶೀಲ್ದಾರ್ ಮೋಹನಕುಮಾರಿ, ಇಒ ಶ್ರೀನಿವಾÓ,ಟಿಎಚ್‌ಒ ಈಶ್ವರ ಮತ್ತಿತರರಿದ್ದÃು.