Advertisement

ಆರಿತೇ ಕೋವಿಡ್ ಬಿಸಿ? ಥರ್ಮಲ್‌ಸ್ಕ್ಯಾನರ್‌, ಸ್ಯಾನಿಟೈಸರ್‌ ಮಾಯ!

01:54 PM Aug 30, 2021 | Team Udayavani |

ಸಾಮಾನ್ಯವಾಗಿ ಅನುಭವ ಪಾಠ ಕಲಿಸುತ್ತದೆ. ಆದರೆ, ಸಾವು ಆ ಪಾಠವನ್ನು ಕಲಿತಂತಿಲ್ಲ. ಅದೇತಪ್ಪುಗಳು ಪುನರಾವರ್ತನೆಯಾಗುತ್ತಲೇ ಇವೆ. ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾದಂತೆ ಮುಂಜಾಗ್ರತಾ ಕ್ರಮಗಳು ಕೂಡ ಮರೆಯಾಗುತ್ತಾ ಹೋಗುತ್ತದೆ. ‌

Advertisement

ಆದರೆ,ನೆನಪಿರಲಿಸಾಂಕ್ರಾಮಿಕ ಮಹಾಮಾರಿ ಸಂದರ್ಭದಲ್ಲಿ “ಎಲ್ಲರೂಸುರಕ್ಷಿತವಾಗುವವರೆಗೂ, ಯಾರೊಬ್ಬರೂ ಸುರಕ್ಷಿತವಲ್ಲ’. ಎರಡು ಅಲೆಗಳು ನಮ್ಮನ್ನು ಅಪ್ಪಳಿಸಿ ಹೋದರೂ ಕನಿಷ್ಠ ಮುಂಜಾಗ್ರತಾ ಕ್ರಮಗಳಾದ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ಬಳಕೆ ಮರೀಚಿಕೆಯಾಗಿದೆ.ಅದರಲ್ಲೂ ನಿಯಮ ರೂಪಿಸಿಜಾರಿಗೊಳಿಸುವ ಸರ್ಕಾರಿ ಕಚೇರಿಗಳಲ್ಲೇಪಾಲಿಸದಿ ರುವುದನ್ನು ಕಾಣಬಹುದು. ನಗರದಪ್ರ ಮುಖಸಾರ್ವಜನಿಕ ತಾಣಗಳು, ಸರ್ಕಾರಿಕಚೇರಿಗಳು, ವಾಣಿಜ್ಯ ಮಳಿಗೆಗಳು,ಖಾಸಗಿಸಂಸ್ಥೆಗಳಲ್ಲಿ ಕೊರೊನಾ ಮುಂಜಾಗ್ರತಾಕ್ರಮಗಳ ಪಾಲನೆ ಕುರಿತು ರಿಯಾಲಿಟಿ ಚೆಕ್‌ ಈ ವಾರದ ಸುದ್ದಿ ಸುತ್ತಾಟ…

ಕೊರೊನಾ ಮಹಾಮಾರಿ ಆಗಮಿಸಿದ ನಂತರ ಸಾರ್ವಜನಿಕಸ್ಥಳಗಳು,ಕಚೇರಿ, ಸಂಸ್ಥೆಗಳ ಪ್ರದೇಶ ಸಂದರ್ಭದಲ್ಲಿ ಸೋಂಕಿನತೀವ್ರ ಲಕ್ಷಣ ಹೊಂದಿರುವವರ ಪತ್ತೆಗೆ ಥರ್ಮಲ್‌ ಸ್ಕ್ರೀನಿಂಗ್‌ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿಯೇ ಸರ್ಕಾರದಿಂದಲೂ ಅನುದಾನ ಮೀಸಲಿಟ್ಟು ಅಗತ್ಯ ಉಪಕರಣಗಳನ್ನುನೀಡಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವ ವ್ಯಕ್ತಿಯುಸೋಂಕನ್ನು ಹೆಚ್ಚು ಪ್ರಸರಿಸುತ್ತಾನೆ.ಈ ಉಪಕರಣವು ದೇಹದ ಉಷ್ಣಾಂಶವು ಸಾಮಾನ್ಯಕಿಂತಹೆಚ್ಚಿದ್ದರೆ(36.1 ಡಿಗ್ರಿ ಸೆಲ್ಸಿಯಸ್‌) ಪತ್ತೆ ಮಾಡುತ್ತದೆ.38 ಡಿಗ್ರಿಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಹೊಂದಿರುವ ವ್ಯಕ್ತಿಯುವೈದ್ಯರ ತಪಾಸಣೆಗೆ ಸೂಚಿಸಿ ಪ್ರವೇಶ ನಿರಾಕರಿಸಲಾಗುತ್ತದೆ.ಕೈಗಳ ಸ್ವತ್ಛತೆಯೂ ಸೋಂಕಿನಿಂದ ರಕ್ಷಣೆಗೆ ಪ್ರಮುಖವಾಗಿದ್ದು,ಈ ಹಿನ್ನೆಲೆ ಎಲ್ಲೆಡೆ ಸಾರ್ವಜನಿಕರಿಗೆ ಲಭ್ಯವಾಗುವಂತೆಕಚೇರಿಗಳ ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್‌ ವ್ಯವಸ್ಥೆಗೆಸೂಚಿಸಲಾಗಿತ್ತು. ಸಾಮಾಜಿಕ ಅಂತರ ಮತ್ತು ಮಾಸ್ಕ್ಕಡ್ಡಾಯಗೊಳಿಸಲಾಗಿತು

ಶಕ್ತಿಸೌಧದಲ್ಲಿಯೇ ಕೊರೊನಾ ನಿಯಮ ಪಾಲನೆಯಾಗುತ್ತಿಲ್ಲ

ಕೊರೊನಾ ಎರಡು ಅಲೆಗಳ ಅಬ್ಬರ ತಣ್ಣಗಾಗುತ್ತಿದ್ದರೂ, ಮೂರನೇ ಅಲೆಯಭೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಬಗ್ಗೆ ತಜ್ಞರು ಸರ್ಕಾರಕ್ಕೆ ಎಚ್ಚರಿಕೆನೀಡುತ್ತಿದ್ದಾರೆ.ಆದರೆ, ರಾಜ್ಯ ಸರ್ಕಾರದ ಶಕ್ತಿ ಕೇಂದ್ರದಲ್ಲಿ ಮಾತ್ರ ಕೊರೊನಾಮೂಲ ನಿಯಮಗಳ ಪಾಲನೆ ಮಾಡದೇ ನಿರ್ಲಕ್ಷ್ಯ ತೋರುತ್ತಿರುವುದುಹೆಚ್ಚಾಗಿದೆ.ವಿಧಾನಸೌಧದ ನಾಲ್ಕೂದ್ವಾರಗಳಲ್ಲಿ ಸ್ಯಾನಿಟೈಸರ್‌ಮತ್ತುಥರ್ಮಲ್‌ಸ್ಕ್ರೀನಿಂಗ್‌ವ್ಯವಸ್ಥೆಕಲ್ಪಿಸಲಾಗಿದೆ.

Advertisement

ಅದಕ್ಕಾಗಿಒಬ್ಬ ಸಿಬ್ಬಂದಿಯನ್ನೂಕೂಡಿಸಲಾಗಿದೆ.ಆದರೆ, ಈ ಗೇಟ್‌ಗಳ ಬಳಿ ಹಾದು ಹೋಗುವ ಸಾರ್ವಜನಿಕರು ಹಾಗೂಶಾಸಕರು ಮತ್ತು ಸಚಿವರ ಕಡ್ಡಾಯ ತಪಾಸಣೆ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ಮಾಡದೇ ಬಿಡುವುದು ಸಾಮಾನ್ಯವಾಗಿದೆ. ವಿಕಾಸ ಸೌಧ ಹಾಗೂ ಬಹುಮಹಡಿಕಟ್ಟಡದಲ್ಲಿಯೂ ಯಾವುದೇ ರೀತಿಯ ಥರ್ಮಲ್‌ ಸ್ಕ್ರೀನಿಂಗ್‌ ಮಾಡದಿರುವುದುಕಂಡು ಬರುತ್ತಿದೆ. ಅಲ್ಲದೇ ಬಹುಮಹಡಿ ಕಟ್ಟಡದ ಕೆಲವು ಗೇಟ್‌ಗಳ ಬಳಿಸ್ಯಾನಿಟೈಸರ್‌ ವ್ಯವಸ್ಥೆಯನ್ನೂ ಮಾಡದಿರುವುದು ಕಂಡು ಬಂದಿದೆ.

ರಾಜ್ಯದಮೂಲೆ ಮೂಲೆಗಳಿಂದ ಬಹುಮಹಡಿ ಕಟ್ಟಡ, ವಿಕಾಸಸೌಧ ಹಾಗೂವಿಧಾನಸೌಧಕ್ಕೆ ನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಇಲ್ಲಿಯೇಮುಂಜಾಗ್ರತಾ ಕ್ರಮ ಪಾಲನೆಯಾಗದಿರುವುದು ಸೋಂಕಿಗೆ ದಾರಿಮಾಡಿಕೊಟ್ಟಂತಾಗುತ್ತಿದೆ. ನಿಯಮ ರೂಪಿಸುವ, ಆದೇಶ ಮಾಡಿರುವಸ್ಥಳದಲ್ಲಿಯೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಕೊರೊನಾ ಮುಂಜಾಗ್ರತಾಕ್ರಮಗಳ ಪಾಲನೆ ಮರೆ

ನಗರದ ಹೃದಯಭಾಗ ಹಾಗೂ ಅತಿ ಹೆಚ್ಚು ಜನಸಂದಣಿ ಇರುವ “ಹಾಟ್‌ಸ್ಪಾಟ್‌’ಗಳಲ್ಲೇಕೊರೊನಾ ಮುಂಜಾಗ್ರತಾಕ್ರಮಗಳ ಪಾಲನೆ ಮರೆಯಾಗಿದೆ!ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಮತ್ತುಬಿಎಂಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ, ಬಿಎಂಟಿಸಿಯ ಯಶವಂತಪುರ,ಬನಶಂಕರಿ, ಶಾಂತಿನಗರ ಸೇರಿದಂತೆ ಪ್ರಮುಖ ಟಿಟಿಎಂಸಿಗಳಲ್ಲಿ ನಿತ್ಯಸಾಮಾನ್ಯವಾಗಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುತ್ತದೆ. ಅಲ್ಲೆಲ್ಲಾ ಥರ್ಮಲ್‌ಸ್ಕ್ಯಾನರ್‌ ಆಗಲಿ, ಸ್ಯಾನಿಟೈಸರ್‌ ಆಗಲಿ ಬಳಕೆ ಮಾಡುತ್ತಲೇ ಇಲ್ಲ. ಇದುಸೋಂಕಿಗೆ ರಹದಾರಿ ಆಗಿ ಪರಿಣಮಿಸುವ ಸಾಧ್ಯತೆ ಇದೆ.ರೈಲು ನಿಲ್ದಾಣ ಹಾಗೂ ಆಯ್ದಕೆಲ ಬಸ್‌ ನಿಲ್ದಾಣಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆಮಾಡಿರುವುದು ಕಂಡುಬರುತ್ತದೆ. ಆದರೆ, ಬಳಕೆ ಮರೀಚಿಕೆಯಾಗಿದೆ. ಇನ್ನುಬಸ್‌ಗಳಲ್ಲಿಪೀಕ್‌ಅವರ್‌ನಲ್ಲಿ ನಿಯಮಗಳಪಾಲನೆ ಸರಿಯಾಗಿಆಗದಿರುವುದು ರಿಯಾಲಿಟಿ ಚೆಕ್‌ ವೇಳೆ ಕಂಡುಬಂತು.

ಮುಖಗವಸು ಬಹುತೇಕ ಪ್ರಯಾಣಿಕರುಬಳಕೆ ಮಾಡುತ್ತಿರುವುದು ಸಮಾಧಾನಕರ ಸಂಗತಿ.ಇನ್ನು ನಮ್ಮ ಮೆಟ್ರೋದಲ್ಲಿ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಆಗುತ್ತಿದೆ.ಪ್ರವೇಶಕ್ಕೆ ಮುನ್ನ ದೇಹದ ತಾಪಮಾನ ತಪಾಸಣೆ ಮಾಡಿಕೊಂಡು ಹೋಗಬೇಕು.ನಂತರ ಸ್ಯಾನಿಟೈಸರ್‌ ಸಿಂಪಡಣೆ ಮಾಡಲಾಗುತ್ತದೆ. ತದನಂತರ ಪ್ಲಾಟ್‌ಫಾರಂಪ್ರವೇಶಕ್ಕೆ ಅವಕಾಶ ಇದೆ. ಆದರೆ, ಟೋಕನ್‌ ಬಳಕೆ ಇರುವುದರಿಂದ ಸೋಂಕಿನಸಾಧ್ಯತೆ ಇದೆ ಎಂದೂ ಕೆಲ ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಬಿಬಿಎಂಪಿಕೇಂದ್ರಕಚೇರಿಯಲ್ಲೇಕೋವಿಡ್‌-19ನಿಯಮಗಳು ಕೇವಲ ಸೂಚನಾ ಫ‌ಲಕಕ್ಕೆಸೀಮಿತವಾಗಿದೆ.

ಅಧಿಕಾರಿಗಳು, ಕಚೇರಿಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಂದಕೋವಿಡ್‌ ನಿಯಮಗಳುಪಾಲನೆಯಾಗುತ್ತಿಲ್ಲ. ಈ ಬಗ್ಗೆ ಬಿಬಿಎಂಪಿಮುಖ್ಯ ಆಯುಕ್ತರು ಹಾಗೂ ವಿಶೇಷಆಯುಕ್ತ(ಆರೋಗ್ಯ)ರು ಗಮನಹರಿಸದೆಇರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಪಾಲಿಕೆಮುಖ್ಯದ್ವಾರದಲ್ಲಿ ದೇಹದ ಉಷ್ಣಾಂಶ ತಪಾಸಣೆಮಾಡುತ್ತಿಲ್ಲ. ಕಚೇರಿಯ ಮುಖ್ಯ ಬಾಗಿಲುಸೇರಿದಂತೆ ವಿಶೇಷ ಆಯುಕ್ತರ ಕಚೇರಿ ಬಾಗಿಲ ಬಳಿಸ್ಯಾನಿಟೈಸರ್‌ಬಾಟಲ್‌ಇಡಲಾಗಿದೆ.ಆದರೆ, ಸಾರ್ವಜನಿಕರುಇದರ ಉಪಯೋಗವನ್ನೇ ಮಾಡುತ್ತಿಲ್ಲ. ಸಿಬ್ಬಂದಿ ಸಹ ಸ್ಯಾನಿಟೈಸರ್‌ಬಳಸುವಂತೆ ಅರಿವು ಮೂಡಿಸುತ್ತಿಲ್ಲ.

ಉಳಿದಂತೆ, ಪಾಲಿಕೆ ವ್ಯಾಪ್ತಿಯ ಎಂಟುವಲಯಗಳ ಜಂಟಿ ಆಯುಕ್ತರಕಚೇರಿಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ.11ನಗರಜಿಪಂನಲ್ಲಿ ಪರೀಕೆÒಮಾಡುವವರೇ ಇಲ್ಲ!

ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯ ಕಚೇರಿಯಲ್ಲಿ ತೀವ್ರ ತಪಾಸಣೆಕಾರ್ಯ ನಡೆಯಿತಿತ್ತು.ಕಚೇರಿಯ ಅಧಿಕಾರಿಗಳು ಸೇರಿದಂತೆ ಆಡಳಿತ ವರ್ಗದ ಎಲ್ಲಾ ಅಧಿಕಾರಿಗಳನ್ನು ಪ್ರವೇಶದ್ವಾರದಲ್ಲಿ ಥರ್ಮಲ್‌ ಸ್ಕ್ಯಾನರ್‌ಗೆ ಒಳಪಡಿಸಲಾಗುತ್ತಿತ್ತು.ಅದಕ್ಕಾಗಿಯೇ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಈಗ ಪ್ರವೇಶ ದ್ವಾರದಲ್ಲಿ ತಪಾಸಣಾ ಮಾಡುವ ಸಿಬ್ಬಂದಿಯೇ ಇಲ್ಲ. ಹೀಗಾಗಿ ಥರ್ಮಲ್‌ ಸ್ಕ್ಯಾನರ್‌ ತಪಾಸಣಾ ಕಾರ್ಯಕ್ಕೂ ಎಳ್ಳು ನೀರು ಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next