Advertisement

ರೋಗಗ್ರಸ್ತ ಆಸ್ಪತ್ರೆಗಳಿಗೆ  ಕೊರೊನಾ ಮದ್ದು

02:06 PM Aug 16, 2021 | Team Udayavani |

ಜಾಗತಿಕ ಮಹಾಮಾರಿ ಕೊರೊನಾದಿಂದ ಹಲವು ಆರೋಗ್ಯ ಮತ್ತು ಆರ್ಥಿಕ ಸಮಸ್ಯೆ ಉಂಟಾಯಿತು. ಲಕ್ಷಾಂತರ ಜೀವಹಾನಿಯಾಯಿತು. ಆರೋಗ್ಯ ತುರ್ತುಪರಿಸ್ಥಿತಿ ನಿರ್ಮಾಣವಾಯ್ತು.ಮರುವಲಸೆ ಆಯ್ತು.

Advertisement

ಈ ಎಲ್ಲಾ ನಕಾರಾತ್ಮಕ ಅಂಶಗಳ ನಡುವೆಯೂ ಹಲವು ಸಕಾರಾತ್ಮಕ ಬೆಳವಣಿಗೆಗೆಇದು ಸಾಕ್ಷಿಯಾಗಿದೆ. ಅತ್ಯಂತಪ್ರಮುಖವಾಗಿ ಇಡೀ ನಮ್ಮ ಆರೋಗ್ಯವ್ಯವಸ್ಥೆಯೇ ಮೇಲ್ದರ್ಜೆಗೇರಲುಕಾರಣವಾಗಿದೆ. ಸಾವಿರಾರು ಕೋಟಿರೂ.ಸರ್ಕಾರದಿಂದ ಅನುದಾನ, ನೂರಾರು ಕೋಟಿರೂ. ಕಾರ್ಪೋರೆಟ್‌ ಸಾಮಾಜಿಕ ಹೊಣೆಗಾಗಿಗೆ(ಸಿಎಸ್‌ಆರ್‌) ನಿಧಿ ಹರಿದುಬಂದಿದೆ.

ಇದರಿಂದಮೂಲಸೌಕರ್ಯ ಹೆಚ್ಚಿದ್ದು, ಅತ್ಯಾಧುನಿಕಚಿಕಿತ್ಸಾ ಸೌಲಭ್ಯಗಳು ದೊರೆತಿವೆ. ನಗರಕ್ಕೆಸೀತವಾಗಿದ್ದ ವೈದ್ಯಕೀಯ ಸೇವೆ ದೂರದಊರುಗಳಲ್ಲಿಯೂಸಿಗುವಂತಾಗಿದೆ. ಇದಕ್ಕೆಬೆಂಗಳೂರು ಕೂಡಾ ಹೊರತಾಗಿಲ್ಲ. ನಗರದಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿಐಸಿಯು,ಆಕ್ಸಿಜನ್‌ ಸೇರಿದಂತೆ ವೈದ್ಯಕೀಯಮೂಲಸೌಕರ್ಯ, ಸೌಲಭ್ಯಗಳು ಸಾಮರ್ಥ್ಯನಾಲ್ಕಾರು ಪಟ್ಟು ಹೆಚ್ಚಳವಾಗಿದೆ.ಪ್ರಮುಖ ಆಸ್ಪತ್ರೆಗಳಲ್ಲಿ ಕೊರೊನಾ ಕಾಲಿಟ್ಟನಂತರ ಕಂಡುಬಂದ ಬೆಳವಣಿಗೆಗಳ ಸುತ್ತ ಈಬಾರಿಯ ಸುದ್ದಿ ಸುತ್ತಾಟ

 ಆಸ್ಪತ್ರೆಗಳಿಗೆ ಹರಿದು ಬಂತು ಸಿಎಸ್ಆರ್ನಿಧಿ: ಕೊರೊನಾಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ದೊಡ್ಡಖಾಸಗಿ ಸಂಸ್ಥೆಗಳು ಕೈಜೋಡಿಸಿವೆ. ನೂರಾರು ಕೋಟಿಕಾರ್ಪೋರೆಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಆಸ್ಪತ್ರೆ ಗಳಿಗೆ ಸಿಕ್ಕಿದೆ.

ನಗರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲೂ ಒಂದಲ್ಲ ಒಂದು ಮೂಲಸೌಕರ್ಯವುಸಿಎಸ್‌ಆರ್‌ ನಿಧಿಯಿಂದ ಲಭಿಸಿದೆ. ಆಕ್ಸಿಜನ್‌ ಘಟಕಗಳನಿರ್ಮಾಣ, ಹಾಸಿಗೆ ಹೆಚ್ಚಳ, ವೈದ್ಯಕೀಯ ಸಲಕರಣೆಗಳಖರೀದಿ, ಕಟ್ಟಡಗಳ ನಿರ್ಮಾಣ, ಸಿಬ್ಬಂದಿ ನೆರವನ್ನು ವಿಪ್ರೋಅಜೀಂ ಪ್ರೇಂ ಜೀ ಫೌಂಡೇಷನ್‌, ಎಲ್‌ ಅಂಡ್‌ ಟಿ,ಇನ್ಫೋಸಿಸ್‌, ಪಿಎಂ ಗ್ರೂಪ್ಸ್‌ ಸೇರಿದಂತೆ ಹಲವುಕಂಪನಿಗಳುನೀಡಿವೆ.

Advertisement

ಸರ್ಕಾರ ಅಭಿವೃದ್ಧಿಗಿಂತಲೂ ಖಾಸಗಿ ಕಂಪನಿಗಳನೆರವು ಹೆಚ್ಚಿದೆ ಎನ್ನುತ್ತಾರೆ ಆಸ್ಪತ್ರೆ ಆಡಳಿತ ವಿಭಾಗದಅಧಿಕಾರಿಗಳು.

ದಶಕದ ಅಭಿವೃದ್ಧಿ ಒಂದೂವರೆ ವರ್ಷದಲ್ಲಿ!: ಕೊರೊನಾಸೋಂಕು ಆರಂಭದಲ್ಲಿ ವೈದ್ಯಕೀಯ ವ್ಯವಸ್ಥೆಗೆ ಕನ್ನಡಿಹಿಡಿಯಿತು. ಕೂಡಲೇ ಹೆಚ್ಚೆತ್ತುಕೊಂಡು ಸರ್ಕಾರವುಬಲಪಡಿಸಲು ಮುಂದಾದವು. ಸರ್ಕಾರ ಮತ್ತು ದಾನಿಗಳನೆರವಿನಿಂದ ನಗರದ ಬಹುತೇಕ ಆಸ್ಪತ್ರೆಗಳ ಚಿತ್ರಣವೇಬದಲಾಗಿದೆ.

ಮುಂದಿನ ಒಂದು ದಶಕದಲ್ಲಿ ಆಗಬೇಕಿದ್ದಅಭಿವೃದ್ಧಿಯು ಒಂದೂವರೆ ವರ್ಷದಲ್ಲಿ ಆಗಿದೆ ಎಂಬಮಾತುಗಳನ್ನು ಸ್ವತಃ ವೈದ್ಯರು, ಮುಖ್ಯಸ್ಥರುಹೇಳುತ್ತಿದ್ದಾರೆ.

ತಜ್ಞರು, ಸಿಬ್ಬಂದಿಯದ್ದೇ ಈಗ ಸಮಸ್ಯೆ: ಸದ್ಯ ಆಸ್ಪತ್ರೆಗೆಅತ್ಯವಶ್ಯಕ ಸೌಕರ್ಯಗಳು ಬಂದಿವೆಯಾದರೂ ಅವುಗಳನಿರ್ವಹಣೆಗೆ ಬೇಕಾದ ಸಿಬ್ಬಂದಿ ಕೊರತೆ ಇದೆ. ಇಂದಿಗೂ ಹೊರಗುತ್ತಿಗೆ ವೈದ್ಯರು, ಸಿಬ್ಬಂದಿನ್ನೇ ಅವಲಂಭಿಸಿವೆ. ಶೀಘ್ರದಲ್ಲಿಯೇ ವಿವಿಧ ವಿಭಾಗಗಳ ತಜ್ಞ ವೈದ್ಯರು,ಸಿಬ್ಬಂದಿ ನೀಡಬೇಕು ಎಂಬ ಕೂಗು ವ್ಯಕ್ತವಾಗಿದೆ.

ಪ್ರಮುಖವಾಗಿ ಜಯನಗರ ಜನರಲ್‌, ಕೆ.ಸಿ.ಜನರಲ್‌,ಸಿ.ವಿ.ರಾಮನ್‌, ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗಳಿಗೆಜನರಲ್‌ ಫಿಜಿಶಿಯನ್‌, ಅರವಳಿಕೆ ತಜ್ಞರು, ಮಕ್ಕಳತಜ್ಞರು, ಐಸಿಯು ನಿರ್ವಹಣೆ ವೈದ್ಯರಿಗೆ ಬೇಡಿಕೆ ಇದೆ.

ಅನುಭವದಿಂದ ಪಾಠ; ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣಕೊರೊನಾ ಎರಡನೇ ಅಲೆ ಆರಂಭದಲ್ಲಿಯೇ ಸರ್ಕಾರಿ ಆಸ್ಪತ್ರೆಗಳ ಹಾಸಿಗೆಗಳು ಭರ್ತಿಯಾಗಿ ಖಾಸಗಿ ಆಸ್ಪತ್ರೆಗಳಅವಲಂಬನೆ ಅನಿವಾರ್ಯವಾಗಿತ್ತು. ಮೇ ಮೊದಲ ಎರಡು ವಾರ ಬೆಂಗಳೂರಿನಲ್ಲಿ 25 ಸಾವಿರ ಹಾಸಿಗೆ ಬೇಡಿಕೆಇತ್ತು.ಆದರೆ, ಸರ್ಕಾರಿಮತ್ತುಖಾಸಗಿಆಸ್ಪತ್ರೆ ಸೇರಿ ಕೇವಲ17 ಸಾವಿರ ಹಾಸಿಗೆಗಳುಮಾತ್ರಲಭ್ಯವಾಗಿದ್ದವು.

ಶೇ.30ರಷ್ಟುಹಾಸಿಗೆಕೊರತೆಉಂಟಾಗಿತ್ತು.ಆ ಸಂದರ್ಭದಲ್ಲಿಹಾಸಿಗೆ ಲಭ್ಯವಾಗದೇ ನೂರಾರು ಸೋಂಕಿತರುಆ್ಯಂಬುಲೆನ್ಸ್‌,ರಸ್ತೆ ಬದಿಯಲ್ಲಿಯೇ ಪ್ರಾಣಬಿಟ್ಟಿದ್ದರು. ಇದರಿಂದ ಪಾಠ ಕಲಿತ ಸರ್ಕಾರವು ಕೊರೊನಾ ಮೂರನೇ ಅಲೆಗೆ ಸಿದ್ಧತೆಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಗರದ ಪ್ರಮುಖಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣವಾಗುತ್ತಿದೆ.

ಎದುರಾದ ಸವಾಲುಗಳನ್ನುಅವಕಾಶವಾಗಿ ಬಳಕ ಕೊರೊನಾ ಹಿನ್ನೆಲೆ ಎದುರಾದ ಸವಾಲುಗಳನ್ನು ಅವಕಾಶಗಳನ್ನಾಗಿ ತೆಗೆದುಕೊಂಡು ಆರೋಗ್ಯ ವ್ಯವಸ್ಥೆಯ ಸುಧಾರಣೆಗೆಕ್ರಮಕೈಗೊಳ್ಳಲಾಗಿದೆ.

ಸರ್ಕಾರಿ ಆಸ್ಪತ್ರೆಗಳ ಮೂಲ ಸೌಲಭ್ಯಗಳನ್ನು ಗಮನಾರ್ಹ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.ಹಾಗೆಯೇ ದಾಖಲೆ ಪ್ರಮಾಣದಲ್ಲಿ ವೈದ್ಯರು ಮತ್ತು ತಜ್ಞರ ನೇಮಕ ಮಾಡಲಾಗಿದೆ. ತಾಂತ್ರಿಕ, ಅರೆ ವೈದ್ಯಕೀಯ, ಶುಶ್ರೂಷಕಸಿಬ್ಬಂದಿ ನೇಮಕಕ್ಕೂ ಚಾಲನೆ ನೀಡಲಾಗಿದೆ. ಯಾವುದೇ ಹು¨ªೆ ಖಾಲಿ ಆಗುತ್ತಿದ್ದಂತೆ ತಕ್ಷಣ ನೇಮಕ ಮಾಡುವ ವ್ಯವಸ್ಥೆರೂಪಿಸುವಚಿಂತನೆ ನಡೆದಿದೆ. ರಾಜ್ಯದಲ್ಲಿಮೊದಲಬಾರಿಗೆಆರೋಗ್ಯವ್ಯವಸ್ಥೆಯಲ್ಲಿಕ್ರಾಂತಿಕಾರಿಬದಲಾವಣೆಗಳು ಆಗುತ್ತಿದ್ದು,ಮುಂದಿನ ದಿನಗಳಲ್ಲಿ ಜನತೆಗೆಇದರಲಾಭದೊರಕಲಿದೆ ಎಂದುಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಸಚಿವಡಾ.ಕೆ.ಸುಧಾಕರ್‌ ತಿಳಿಸಿದರು.

ಜಯಪ್ರಕಾಶ್ಬಿರಾದಾರ್

 

Advertisement

Udayavani is now on Telegram. Click here to join our channel and stay updated with the latest news.

Next