Advertisement

ಪರಿಣಾಮಕಾರಿ ಲಸಿಕೆ ಸಂಶೋಧಿಸಲಿದೆ ಭಾರತ

06:22 PM Jun 22, 2021 | Team Udayavani |

ಬೆಂಗಳೂರು: ಭಾರತವು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಲಸಿಕೆ ಹಾಗೂಔಷಧ ಸಂಶೋಧಿಸಲಿದೆ ಎಂದು ಸ್ವಾಮಿ ವಿವೇಕಾನಂದ ಯೋಗ ಅನುಸಾಂಧಾನ ಸಂಸ್ಥಾನವಿಶ್ವವಿದ್ಯಾಲಯ(ಎಸ್‌-ವ್ಯಾಸ ವಿಶ್ವವಿದ್ಯಾಲಯ)ದ ಕುಲಾಧಿಪತಿ ಪದ್ಮಶ್ರೀ ಡಾ.ಎಚ್‌.ಆರ್‌.ನಾಗೇಂದ್ರ ಗುರೂಜಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ 7 ನೇಅಂತಾರಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಯೋಗ ಫಾರ್‌ ವೆಲೆ°ಸ್‌ ಮಾತ್ರವಲ್ಲ,ಯೋಗ ಫಾರ್‌ ಕಮ್ಯೂನಿಟಿ, ಯೋಗ ಫಾರ್‌ ಇಮ್ಯೂನಿಟಿ ಎಂಬುದನ್ನು ಸೇರಿಸಿಕೊಳ್ಳಬೇಕು.ಕೊರೊನಾಗೆ ಭಾರತವು ಅಲ್ಪಕಾಲದಲ್ಲಿಯೇ ವ್ಯಾಕ್ಸಿನ್‌ ಮತ್ತು ಮೆಡಿಸಿನ್‌ಗಳನ್ನು ಕಂಡುಹಿಡಿದುಯಶಸ್ವಿಯಾಗಿ ಜನಸಾಮಾನ್ಯರಿಗೆ ತಲುಪಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂಪರಿಣಾಮಕಾರಿಯಾದ ವ್ಯಾಕ್ಸಿನ್‌ ಮತ್ತು ಮೆಡಿಸಿನ್‌ಗಳನ್ನುಕಂಡುಹಿಡಿಯಲಿದೆ ಎಂದರು.

ಆದರೆ ಈ ಕಾರ್ಯಗಳಿಗೆ ಇನ್ನೂ ಹೆಚ್ಚು ಸಮಯಾವಕಾಶವು ಬೇಕಾಗಿರುವುದರಿಂದಜನಸಾಮಾನ್ಯರು ಆಯುರ್ವೇದ, ಯೋಗ ಪದ್ಧತಿಗಳನ್ನು ದೈನಂದಿನ ಜೀವನದಲ್ಲಿಅಳವಡಿಸಿಕೊಳ್ಳಬೇಕು. ಕೋವಿಡ್‌-19 ನಿಂದ ಭಾರತದಲ್ಲಿ ಹೆಚ್ಚು ವೈದ್ಯಕೀಯ ಸಂಶೋಧನೆನಡೆಯುತ್ತಿದ್ದು, ಇದರಿಂದ ಭಾರತವು ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ ಎಂದು ಹೇಳಿದರು.ಯೋಗ ಮತ್ತು ಯೋಗದ ಮಹತ್ವ ಸಮಾಜದ ಎಲ್ಲ ವರ್ಗದ ಜನಕ್ಕೆ ತಲುಪಿದಲ್ಲಿ ಸ್ವಾಸ್ಥ Âಭಾರತದ ನಿರ್ಮಾಣ ಸಾಧ್ಯ. ಯೋಗಕ್ಕೆ ಸಂಬಂಧಪಟ್ಟ ಸಂಶೋಧನೆಗಳು ನಡೆಯುತ್ತಿದ್ದು,ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳು ಯೋಗದ ಮಹತ್ವವನ್ನು ತಿಳಿದು ಯೋಗದಿನಾಚರಣೆಯನ್ನು ಆಚರಿಸುತ್ತಿದೆ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌.ಎಂ.ಜಯಕರ ಅವರು ಮಾತನಾಡಿ, ಪ್ರಧಾನಿ ನರೇಂದ್ರಮೋದಿಯವರು 2015 ರಲ್ಲಿ ಪ್ರಾರಂಭಿಸಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಈಗಾಗಲೇ175 ದೇಶಗಳಲ್ಲಿ ಆಚರಿಸಲಾಗುತ್ತಿದೆ. ನಾವೆಲ್ಲರೂ ನಮ್ಮ ಕುಟುಂಬಗಳಲ್ಲಿ, ಸಮಾಜದಲ್ಲಿಯೋಗದ ಮಹತ್ವದ ಬಗ್ಗೆ ಅರಿವನ್ನು ಮೂಡಿಸಬೇಕು ಎಂದರು.ಕುಲಸಚಿವ ಡಾ.ಎನ್‌. ರಾಮಕೃಷ` ರೆಡ್ಡಿ, ಉಪಕುಲಸಚಿವ ಡಾ.ಬಿ.ವಸಂತ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next