ಬೆಂಗಳೂರು: ಕೊರೊನಾ ತೀವ್ರತೆ ಹೆಚ್ಚಿರುವ ಜಿಲ್ಲೆಮತ್ತು ಗ್ರಾಮೀಣ ಭಾಗದಲ್ಲಿ ಹಾಸಿಗೆಗಳು ಸಿದ್ಧವಿದ್ದರೂ ಅವುಗಳಿಗೆ ಆಕ್ಸಿಜನ್ ನೀಡುವವರಿಲ್ಲದಂತಾಗಿದೆ. ಸ್ವಯಂ ಪ್ರೇರಿತವಾಗಿ ಕೊರೊನಾ ಚಿಕಿತ್ಸೆಗೆ ನೆರವಾಗಲು ಬಂದ ಉದ್ಯಮಿ, ಸ್ವಯಂ ಸೇವಕ ಸಂಘ,ರಾಜಕೀಯಮುಖಂಡರಿಗೆ ನಿರಾಸೆಯಾಗುತ್ತಿದೆ.
ರಾಜಧಾನಿಯಿಂದ ಕೊರೊನಾ ಸೋಂಕಿನತೀವ್ರತೆ ಗ್ರಾಮೀಣ ಭಾಗಕ್ಕೆ ವರ್ಗಾವಣೆಯಾಗಿದೆ.ನಿತ್ಯ ಶೇ.75 ಹೊಸ ಪ್ರಕರಣಗಳು ಜಿಲ್ಲೆಗಳಲ್ಲಿವರದಿಯಾಗುತ್ತಿವೆ. ಸೋಂಕು ತೀವ್ರಗೊಂಡಬೆನ್ನಲ್ಲೆ ಆಕ್ಸಿಜನ್ ಹಾಸಿಗೆಗಳ ಬೇಡಿಕೆ ಹೆಚ್ಚಿದ್ದು,ಹಾಸಿಗೆ ಸಿಗದೇ ಒಂದು ಜಿಲ್ಲೆಯಿಂದ ಮತ್ತೂಂದುಜಿಲ್ಲೆಗೆ ಸೋಂಕಿತರು ಅಲೆದಾಡುತ್ತಿದ್ದಾರೆ.ಹಣವಿದ್ದವರು ಖಾಸಗಿ ಆಸ್ಪತ್ರೆಯನ್ನುಅವಲಂಬಿಸಿದರೆ,ಬಡವರು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಸಿಗೆಗೆ ಸರತಿ ನೋಂದಣಿ ಮಾಡಿಜೀವಹಿಡಿದುಕೊಂಡುಕಾಯುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ¸ ಬೇಂಗಳೂರಿನ ಮಾದರಿಯಲ್ಲಿಯೇ ಗ್ರಾಮೀಣ ಮತ್ತು ಜಿಲ್ಲಾಕೇಂದ್ರಗ ಳಲ್ಲಿ ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆಗೆ ಸ್ಥಳೀಯ ಸಂಘ ಸಂಸ್ಥೆಗಳು, ಸೇವಾಸಂಸ್ಥೆ ಗಳು,ಉದ್ಯಮಿಗಳು, ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ರಾಜಕೀಯಮುಖಂಡರು ಮುಂದೆ ಬಂದಿದ್ದಾರೆ. ಆಕ್ಸಿಜನ್‌ಹಾಸಿಗೆ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ.
ಹಾಸ್ಟೆಲ್‌ಗಳು, ಶಿಕ್ಷಣ ಸಂಸ್ಥೆಗಳು, ಮಠಗಳು, ಆಸ್ಪತ್ರೆಗಳು,ಕಲ್ಯಾಣ ಮಂಟಪಗಳಿವೆ. ವೈದ್ಯಕೀಯಸಿಬ್ಬಂದಿಗಳಿದ್ದಾರೆ. ಅಗತ್ಯವಿರುವ ಆಕ್ಸಿಜನ್‌ಪೂರೈಸಿ ಎಂದು ದಾವಣಗೆರೆ, ವಿಜಯಪುರ,ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಹಾಸನ,ತುಮಕೂರು, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಜಿಲ್ಲಾಆರೋಗ್ಯಾಧಿಕಾರಿ ಮತ್ತು ತಾಲೂಕು ಅಧಿಕಾರಿಗಳಿಗೆ ಸಾಕಷ್ಟು ಮನವಿಬಂದಿವೆ. ಆದರೆ, ರಾಜ್ಯ ಸರ್ಕಾರವು ಜಿಲ್ಲೆಗಳಲ್ಲಿ ಸೀಮಿತ ಪ್ರಮಾಣದಲ್ಲಿ ಆಕ್ಸಿಜನ್‌ಪೂರೈಸುತ್ತಿರುವುದರಿಂದ ಸ್ವಯಂ ಪ್ರೇರಿತವಾಗಿಮುಂದೆ ಬಂದವರೊಂದಿಗೆ ಕೈಜೋಡಿಸಿ ಚಿಕಿತ್ಸಾಸೌಲಭ್ಯ ಒದಗಿಸಲು ಅಗತ್ಯ ಪ್ರಮಾಣದ ಆಕ್ಸಿಜನ್‌ದಾಸ್ತಾನು ಜಿಲ್ಲಾಡಳಿತಗಳ ಬಳಿ ಇಲ್ಲದಂತಾಗಿದೆ.ಕೇರ್ ಸೆಂಟರ್ ಆರಂಭಕ್ಕೆ ಓಲೈಕೆ:ಜೀವವಾಯು ಪೂರೈಸಿ ಜೀವ ಉಳಿಸಲು ಬಂದವರು ದಾಸ್ತಾನು ಕೊರತೆಯಿಂದ ಅನಿವಾರ್ಯವಾಗಿ ಕೋವಿಡ್ ಕೇರ್ ಸೆಂಟರ್‌ಆರಂಭಿಸಬೇಕಿದೆ.
ಹಾಸಿಗೆ, ವೈದ್ಯಕೀಯಸಹಕಾರ ನೀಡಲು ಮುಂದೆ ಬಂದವರಿಗೆ ಆಕ್ಸಿಜನ್ ಪೂರೈಕೆ ಸಮಸ್ಯೆ ಇದ್ದು, ಸದ್ಯ ಕೇರ್‌ಸೆಂಟರ್‌ಗಳನ್ನು ಆರಂಭಿಸಿ ಆನಂತರ ಆಕ್ಸಿಜನ್‌ಪೂರೈಕೆ ಆ« ರಿಸಿ ಆಕ್ಸಿಜನ್ ಹಾಸಿಗೆಯಾಗಿಪರಿವರ್ತನೆ ಮಾಡೋಣ ಎಂದು ಆರೋಗ್ಯಾಧಿಕಾರಿಗಳು ಓಲೈಸುತ್ತಿದ್ದಾರೆ. ಹೀಗಾಗಿಯೇ ಸಾಕಷ್ಟು ಜಿಲ್ಲೆಗಳಲ್ಲಿ ಸಾರ್ವಜನಿಕ ವಲಯದ ಸಹಕಾರ ಕೇರ್ ಸೆಂಟರ್‌ಗೆ ಮಾತ್ರ ಸೀಮಿತವಾಗಿದೆ.
ನಿಗದಿಪಡಿಸಿದಷ್ಟು ಪೂರೈಕೆಯಾಗುತ್ತಿಲ್ಲ!: ರಾಜ್ಯಸರ್ಕಾರವು ನಿತ್ಯ 1,300 ಮೆಟ್ರಿಕ್ ಟನ್ ಆಕ್ಸಿಜನ್‌ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರದಿಂದ 1015ಮೆ.ಟನ್ ಪೂರೈಕೆ ನಿಗದಿಯಾಗಿತ್ತು. ಆದರೆ, ರಾಜ್ಯಕ್ಕೆ ಮೇ 11ರಂದು ಮಾತ್ರ 1049 ಮೆ.ಟನ್‌ಆಕ್ಸಿಜನ್‌ಪೂರೈಕೆಯಾಗಿದ್ದು,ಆನಂತರಇಳಿಕೆಯಾಗುತ್ತಾ ಸಾಗಿ ಮೇ 25ರವರೆಗೂ ಸರಾಸರಿ 800ಮೆ.ಟನ್ ಪೂರೈಕೆ ಮಾಡಲಾಗಿದೆ. ಪೂರೈಕೆಗೆನಿಗದಿ ಪಡಿಸಿದ್ದ 15 ರಾಜ್ಯದ ಕೈಗಾರಿಕೆಗಳು ನಿಗದಿಪಡಿಸಿದ್ದಕ್ಕಿಂತ ಕಡಿಮೆ ಆಕ್ಸಿಜನ್ ನೀಡುತ್ತಿವೆ.ಹೀಗಾಗಿ 200 ಮೆ.ಟನ್‌ನಷ್ಟು ಕಡಿಮೆ ಆಕ್ಸಿಜನ್‌ಲಭ್ಯವಾಗುತ್ತಿದೆ. ಬೇಡಿಕೆಗಿಂತ 500 ಮೆ.ಟನ್‌ಆಕ್ಸಿಜನ್ ಪೂರೈಕೆಯಾಗುತ್ತಿರುವುದರಿಂದ ಜಿಲ್ಲಾಕೇಂದ್ರಗಳಿಗೆ ಹೆಚ್ಚು ಆಕ್ಸಿಜನ್ ನೀಡಲುಸಾಧ್ಯವಾಗುತ್ತಿಲ್ಲ.
ಜಯಪ್ರಕಾಶ್ ಬಿರಾದಾರ್