Advertisement
ಏನಿದು ಎಚ್ಎಂಪಿವಿ?ಹ್ಯೂಮನ್ ಮೆಟಾನ್ಯುಮೋ ವೈರಸ್ (ಎಚ್ಎಂಪಿವಿ) ಎಂದು ಕರೆಯಲ್ಪಡುವ ಈ ವೈರಸ್, ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕನ್ನು ಹರಡುತ್ತದೆ. ಎಲ್ಲ ವಯೋಮಾನದವರಲ್ಲೂ ಈ ಸೋಂಕು ಕಂಡುಬಂದರೂ ಮಕ್ಕಳು ಮತ್ತು ಅನಾರೋಗ್ಯ ಹೊಂದಿರುವ ಹಿರಿಯರಲ್ಲಿ ಇದು ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ.
ಎಚ್ಎಂಪಿವಿ ಹೇಗೆ ಹರಡುತ್ತದೆ?
ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸೀನು ಮತ್ತು ಕೆಮ್ಮಿನ ಮೂಲಕ ಗಾಳಿ ಮುಖಾಂತರ ಇದು ಮತ್ತೂಬ್ಬ ವ್ಯಕ್ತಿಗೆ ಹರಡುತ್ತದೆ. ಕೈ ಕುಲುಕುವುದರಿಂದ, ಕಲುಷಿತ ಸ್ಥಳಗಳನ್ನು ಮುಟ್ಟಿದ ಬಳಿಕ ಮೂಗು, ಬಾಯಿ ಮುಟ್ಟಿಕೊಳ್ಳುವ ಮೂಲಕ ಈ ಸೋಂಕು ಹರಡುತ್ತದೆ.
ಈ ಸೋಂಕಿಗೆ ತುತ್ತಾದವರು ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಉಬ್ಬಸ, ಉಸಿರಾಟ ತೊಂದರೆಗೆ ತುತ್ತಾಗಲಿದ್ದಾರೆ.
ಸೋಂಕು ತಡೆಗಟ್ಟುವುದು ಹೇಗೆ?
ಕೋವಿಡ್ ಸೋಂಕು ಕಾಣಿಸಿಕೊಂಡಿದ್ದ ಸಮಯದಲ್ಲಿ ಆಚರಣೆಗೆ ತಂದಿದ್ದ, ಆಗಾಗ್ಗೆ ಕೈ ತೊಳೆಯುವುದು, ತೊಳೆಯದ ಕೈಗಳಲ್ಲಿ ಮೂಗು ಮುಟ್ಟದಿರುವುದು, ಸೋಂಕಿಗೆ ತುತ್ತಾಗಿರುವವರಿದಂದ ಅಂತರ ಕಾಯ್ದುಕೊಳ್ಳುವುದರ ಮೂಲಕ ಸೋಂಕು ಹರಡದಂತೆ ತಡೆಗಟ್ಟಬಹುದು. ಈ ವೈರಸ್ಗೆ ಲಸಿಕೆ ಇದೆಯೇ?
2001ರಲ್ಲಿ ಮೊದಲ ಬಾರಿಗೆ ಈ ವೈರಸ್ಸನ್ನು ಗುರುತಿಸಲಾಗಿತ್ತು. ಆದರೂ ಇಲ್ಲಿಯವರೆಗೆ ಇದಕ್ಕೆ ಯಾವುದೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ರೋಗ ಲಕ್ಷಣಗಳಿಗೆ ನೀಡುವ ಔಷಧವನ್ನೇ ಇದಕ್ಕೆ ನೀಡಲಾಗುತ್ತದೆ.
Related Articles
ಕೋವಿಡ್ ಮಾದರಿ ಸೋಂಕು ಹರಡುತ್ತಿದೆ ಎಂಬುದನ್ನು ಚೀನ ಸರಕಾರ ಅಲ್ಲಗಳೆದಿದೆ. ಅಲ್ಲದೇ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸೋಂಕಿನ ಪ್ರಮಾಣ ಕಡಿಮೆ ಇದೆ. ವಿದೇಶಿ ಗರು ಧೈರ್ಯವಾಗಿ ಚೀನಕ್ಕೆ ಆಗಮಿಸಬಹುದು ಎಂದು ಚೀನ ಸರಕಾರ ಹೇಳಿದೆ.
Advertisement
ಏಷ್ಯಾದಲ್ಲಿ ಕಟ್ಟೆಚ್ಚರಚೀನದಲ್ಲಿ ಹೊಸ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳು
ಕಟ್ಟೆಚ್ಚರ ಕೈಗೊಂಡಿವೆ. ಜಪಾನ್, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ದೇಶಗಳು ಎಚ್ಚರ ವಹಿಸುವಂತೆ ಸೂಚನೆ ನೀಡಿವೆ.