ಮಣಿಪಾಲ: ಭಾರತೀಯ ರೈಲ್ವೇ ಸುಮಾರು 20 ಸಾವಿರ ಕೋಚ್‌ಗಳನ್ನು ಕೋವಿಡ್ 19 ವಾರ್ಡ್‌ಗಳಾಗಿ ಪರಿವರ್ತಿಸಲು ಸೂಚನೆ ನೀಡಿದೆ.
ಸೋಮವಾರ ಭಾರತೀಯ ರೈಲ್ವೇ ಎಲ್ಲ ವಲಯಗಳಿಗೆ ಈ ಕುರಿತು ಪತ್ರವನ್ನು ಬರೆದಿದೆ. ಮೊದಲು 5 ಸಾವಿರ ಕೋಚ್ ಗಳನ್ನು ಪರಿವರ್ತನೆ ಮಾಡುವ ಉದ್ದೇಶ ಹೊಂದಲಾಗಿತ್ತು. ಈಗ ಅದನ್ನು ವಿಸ್ತರಿಸಲಾಗಿದ್ದು, 20 ಸಾವಿರ ಕೋಚ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳಾಗಿ ಪರಿವರ್ತಿಸಲಾಗುತ್ತದೆ.
ಒಂದೇ ಮಾದರಿಯ ವಾರ್ಡ್‌ಗಳು ದೇಶದ ಎಲ್ಲ 5 ರೈಲ್ವೇ ವಲಯದಲ್ಲಿ ಒಂದೇ ಮಾದರಿಯ ವಾರ್ಡ್‌ಗಳು ನಿರ್ಮಾಣವಾಗಲಿವೆ. ಕೆಲವು ಕೋಚ್‌ಗಳನ್ನು ಕ್ವಾರಂಟೈನ್ ಗಾಗಿ ಮಾತ್ರ ಮೀಸಲಾಗಿಡಲಾಗುತ್ತದೆ. ಹವಾನಿಯಂತ್ರಣ ರಹಿತ ಕೋಚ್‌ಗಳನ್ನು ಮಾತ್ರ ವಾರ್ಡ್ ಗಳಾಗಿ ಪರಿವರ್ತನೆ ಮಾಡಲು ಬಳಕೆ ಮಾಡಲಾಗುತ್ತದೆ. ಐಸೋಲೇಶನ್ ವಾರ್ಡ್‌ಗಳನ್ನು ನಿರ್ಮಿಸಬೇಕು ಎಂದು ಪತ್ರದಲ್ಲಿ ಭಾರತೀಯ ರೈಲ್ವೇ ಹೇಳಿದೆ.
ವಾರ್ಡ್‌ಗಳಿಗೆ ಬೇಕಾದ ಆಕ್ಸಿಜನ್ ಸಿಲಿಂಡರ್‌ಗಳನ್ನು ಆರೋಗ್ಯ ಇಲಾಖೆಯು ಸರಬರಾಜು ಮಾಡಲಿದೆ. ಕೋಚ್‌ಗಳಲ್ಲಿ ಮಧ್ಯದಲ್ಲಿರುವ ಬರ್ತ್‌ಗಳನ್ನು ತೆಗೆದುಹಾಕಲಾಗುತ್ತದೆ. ಪ್ರತಿ ಕ್ಯಾಬಿನ್‌ನಲ್ಲಿ ರೋಗಿಗಳಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಕೋಚ್‌ಗಳ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಲಾಗುತ್ತದೆಯಂತೆ. ರೈಲು ಬೋಗಿಗಳನ್ನು ಅತ್ಯಾಧುನಿಕ ಪ್ರತ್ಯೇಕ ವಾರ್ಡ್‌ಗಳನ್ನಾಗಿ ಮಾಡಲು ಬೋಗಿಯನ್ನು ಮಾರ್ಪಾಡು ಮಾಡಲಾಗಿದೆ. ಫ್ಲೈವುಡ್ ಜೋಡಿಸಿ ಆಸ್ಪತ್ರೆಯ ರೀತಿ ವಾರ್ಡ್ ಮಾಡಲಾಗುತ್ತದೆ. ಪ್ರತಿ ಬೋಗಿಯಲ್ಲಿರುವ ನಾಲ್ಕು ಶೌಚಾಲಯ ಗಳು ಎರಡು ಬಾತ್ ರೂಂಗಳು ಇರಲಿವೆ. ಅಲ್ಲಿ ಹ್ಯಾಂಡ್ ಶವರ್, ಬಕೆಟ್ ಮತ್ತು ಮಗ್‌ಗಳನ್ನು ಇಡಲಾಗುತ್ತದೆ. ಒಟ್ಟಿನಲ್ಲಿ ಈ ಕೊರೊನಾ ಮಹಾಮಾರಿಯನ್ನು ಎದುರಿಸಲು ಭಾರತೀಯ ರೈಲ್ವೇ ನೆರವಿಗೆ ಬಂದಿದೆ.