Advertisement

ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ರಾಜ್ಯ ಸರಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

10:40 PM Apr 16, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಂತೆ ರಾಜ್ಯದಲ್ಲಿ ನಡೆಸುವ ಸಾರ್ವಜನಿಕ ಸಮಾರಂಭಗಳು, ಆಚರಣೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳಿಗೆ ಹೆಚ್ಚಿನ ಮಿತಿಯನ್ನು ಹೇರಲಾಗಿದೆ. ಈ ಹೊಸ ಮಾರ್ಗಸೂಚಿಯು ಏಪ್ರಿಲ್ 30 ರ ವರೆಗೆ ಜಾರಿಯಲ್ಲಿರಲಿದೆ.

Advertisement

ಮಾರ್ಗಸೂಚಿಗಳು :
– ತೆರೆದ ಪ್ರದೇಶದಲ್ಲಿ ನಡೆಸುವ ಮದುವೆ ಕಾರ್ಯಕ್ರಮಗಳಲ್ಲಿ 200 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಹಾಗೂ ಕಲ್ಯಾಣ ಮಂಟಪ, ಹಾಲ್ ಹಾಗೂ ಸಭಾಂಗಣಗಳಲ್ಲಿ ನಡೆಸುವ ಮದುವೆಗೆ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
– ಹುಟ್ಟು ಹಬ್ಬ ಆಚರಣೆ ಹಾಗೂ ಇತರ ಸಂಭ್ರಮಾಚರಣೆಗಳಲ್ಲಿ ತೆರೆದ ಪ್ರದೇಶದಲ್ಲಿ 50 ಮಂದಿಗೆ ಹಾಗೂ ಸಭಾಂಗಣ ಮತ್ತು ಹಾಲ್ ಗಳಲ್ಲಿ 25 ಮಂದಿಗೆ ಅವಕಾಶ.
– ನಿಧನರಾದವರ ಅಂತಿಮ ದರ್ಶನಕ್ಕೆ 50 ಜನರಿಗೆ ಮಾತ್ರ ಅವಕಾಶ, ಹಾಗೂ ಅಂತ್ಯಕ್ರೀಯೆಯಲ್ಲಿ ಭಾಗವಹಿಸಲು 25 ಮಂದಿಗೆ ಮಾತ್ರ ಅವಕಾಶ.
– ಇತರ ಸಮಾರಂಭಗಳಲ್ಲೂ 50 ಮಂದಿಯನ್ನು ಮೀರದಂತೆ ಕಾರ್ಯಕ್ರಮಗಳನ್ನು ನಡೆಸಲು ಮಿತಿ ಹೇರಲಾಗಿದೆ.

ಇದನ್ನೂ ಓದಿ :ಸಿಡಿ ಪ್ರಕರಣ : ಏ.20ರಂದು ವಿಚಾರಣೆಗೆ ಹಾಜರಾಗುವಂತೆ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್‌

ಧಾರ್ಮಿಕ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ಪ್ರಕಟಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next