Advertisement

ಕೋವಿಡ್‌ ನಕಲಿ ವರದಿ ಮಾರಾಟ: ಇಬ್ಬರ ಬಂಧನ

11:12 AM Jan 09, 2022 | Team Udayavani |

ಬೆಂಗಳೂರು: ಸ್ವಾಬ್‌ ಸ್ಯಾಂಪಲ್‌ ಸಂಗ್ರಹಿಸದೆ ಅಕ್ರಮವಾಗಿ ಕೋವಿಡ್‌ ಪರೀಕ್ಷಾ ವರದಿ ನೀಡುತ್ತಿದ್ದ ಖಾಸಗಿ ಲ್ಯಾಬ್‌ ಮಾಲೀಕ ಸೇರಿ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ಡಿ.ಜಿ.ಹಳ್ಳಿಯ ಕಾವಲಭೈರಸಂದ್ರ ನಿವಾಸಿಗಳಾದ ರೆಹಾನ್‌(31) , ಸುಭೇರ್‌(35) ಬಂಧಿತರು. ಆರೋಪಿಗಳಿಂದ 50ಕ್ಕೂ ಅಧಿಕ ನಕಲಿ ಕೋವಿಡ್‌ ವರದಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸುಭೇರ್‌ ಕಾವಲಭೈರಸಂದ್ರದಲ್ಲಿ ಸ್ಕೈಲೈನ್‌ ಡಯಾಗ್ನಸ್ಟಿಕ್‌ ನಡೆ ಸುತ್ತಿದ್ದಾನೆ. ಮತ್ತೂಬ್ಬ ಆರೋಪಿ ರೆಹಾನ್‌ ಅದರಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿದ್ದಾನೆ.

ರಾಜ್ಯ ಸರ್ಕಾರ ಕೋವಿಡ್‌ ನಿಯಂತ್ರಣಕ್ಕಾಗಿ ಕಠಿಣ ನಿರ್ಬಂಧ ಮತ್ತು ಮುಂಜಾಗ್ರತೆ ವಹಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರ ರಾಜ್ಯಕ್ಕೆ ಹೋಗಲು, ಹೊರ ರಾಜ್ಯದಿಂದ ಬರಲು ಹಾಗೂ ಇತರೆ ಉದ್ದೇಶಗಳಿಗಾಗಿ ಕೋವಿಡ್‌ ಪರೀಕ್ಷಾ ವರದಿ ಅವಶ್ಯವಿದೆ. ಅದನ್ನೇ ಆರೋಪಿಗಳು ದುರ್ಬಳಕೆ ಮಾಡಿಕೊಂಡು, ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ, ತಮ್ಮ ಲ್ಯಾಬ್‌ ಹೆಸರಿನಲ್ಲಿ ಕೋವಿಡ್‌ ಪರೀಕ್ಷಾ ವರದಿ ಬೇಕಿರುವವರನ್ನು, ಪರಿಚಿತರಿಂದ ಸಂಪರ್ಕಿಸುತ್ತಿದ್ದರು. ಗೂಗಲ್‌ ಪೇ, ನಗದು ರೂಪದಲ್ಲಿ ಹಣ ಪಡೆದುಕೊಂಡು ಯಾವುದೇ ಸ್ವಾಬ್‌ ಸ್ಯಾಂಪಲ್‌ ಸಂಗ್ರಹಿಸದೆ ನೇರವಾಗಿ ಕೋವಿಡ್‌ ಪರೀಕ್ಷಾ ವರದಿಗಳನ್ನು ನೀಡುತ್ತಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರತಿ ವರದಿಗೆ 2-8 ಸಾವಿರ ರೂ.: ಸಾರ್ವಜನಿಕರ ಅಗತ್ಯಕ್ಕೆ ಅನುಗುಣ ವಾಗಿ ಆರೋಪಿಗಳು ಎರಡು ಸಾವಿರ ರೂ.ನಿಂದ ಎಂಟು ಸಾವಿರ ರೂ. ವರೆಗೆ ಪ್ರತಿ ವರದಿಗೆ ಹಣ ಪಡೆದು ನಕಲಿ ವರದಿ ನೀಡುತ್ತಿದ್ದರು. ಬೆಂಗಳೂರಿನ ನಿವಾಸಿಗಳಿಗೆ ಒಂದು ದರ, ನೆರೆ ರಾಜ್ಯದಿಂದ ಬರುವವರಿಗೆ, ಹೋಗುವವರಿಗೆ ಮತ್ತೂಂದು ದರ ನಿಗದಿ ಮಾಡಿ ಹಣ ಪಡೆದು ಪ್ರಮಾಣ ಪತ್ರ ನೀಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next