ಮುಂಬಯಿ: ಕೋವಿಡ್, ಭಾರತೀಯರ ಜೀವಿತಾವಧಿಯನ್ನೂ ಇಳಿಕೆ ಮಾಡಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಮುಂಬಯಿ ಮೂಲದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್(ಐಐಪಿಎಸ್) ನಡೆಸಿರುವ ವಿಶ್ಲೇಷಣೆಯ ವರದಿಯು ಈ ವಿಚಾರವನ್ನು ತಿಳಿಸಿದೆ.
ಸಾಂಕ್ರಾಮಿಕದಿಂದಾಗಿ ಭಾರತೀಯರ ಜೀವಿತಾವಧಿ 2 ವರ್ಷಗಳಷ್ಟು ಇಳಿಕೆಯಾಗಿದೆ. ಜನನ ಅವಧಿಯಲ್ಲಿ ಲೆಕ್ಕ ಹಾಕಲಾಗುವ ನಿರೀಕ್ಷಿತ ಜೀವಿತಾವಧಿ 2019ರಲ್ಲಿ ಪುರುಷರಿಗೆ 69.5 ವರ್ಷಗಳಾಗಿದ್ದರೆ, ಮಹಿಳೆಯರಿಗೆ 72 ವರ್ಷಗಳಾಗಿದ್ದವು. ಆದರೆ 2020 ರಲ್ಲಿ ಇದು ಪುರುಷರಿಗೆ 67.5 ವರ್ಷಗಳು ಮತ್ತು ಮಹಿಳೆಯರಿಗೆ 69.8 ವರ್ಷಗಳಿಗೆ ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
ಕೋವಿಡ್‌ದಿಂದಾಗಿ ಮೃತಪಟ್ಟವರಲ್ಲಿ 35-79ರ ವಯೋಮಾನದವರೇ ಅತೀ ಹೆಚ್ಚು. ಜೀವಿತಾವಧಿ ಇಳಿಕೆಯಾಗಲು ಈ ವಯೋಮಾನದ ಗುಂಪೇ ಕಾರಣ ಎಂದು ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ:ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ
ಇದೇ ವೇಳೆ, ದೇಶಾದ್ಯಂತ ಶುಕ್ರವಾರದಿಂದ ಶನಿವಾರಕ್ಕೆ 24 ಗಂಟೆಗಳಲ್ಲಿ 16,326 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 666 ಮಂದಿ ಸಾವಿಗೀಡಾ ಗಿದ್ದಾರೆ. ಕೇರಳ ಸರಕಾರವು ಈ ಹಿಂದೆ ಬಿಟ್ಟುಹೋಗಿದ್ದ ಮೃತರ ದತ್ತಾಂಶಗಳನ್ನು (292) ಶನಿವಾರದ ದತ್ತಾಂಶದಲ್ಲಿ ಸೇರ್ಪಡೆ ಮಾಡಿದ್ದೇ, ದೇಶದ ಒಟ್ಟಾರೆ ದೈನಂದಿನ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ.