Advertisement
ಮುಜರಾಯಿ ಮೇಳಗಳ ಕಲಾವಿದರಿಗೆ ಸರಕಾರ ಸಂಬಳ ನೀಡಲು ಆದೇಶಿಸಿದೆ. ಆದರೆ ಖಾಸಗಿ ಸಂಚಾಲಕತ್ವದ ಮೇಳಗಳ ಕಲಾವಿದರ ಪರಿಸ್ಥಿತಿ ದುಸ್ತರವಾಗಿದೆ. ತೆಂಕು, ಬಡಗು ತಿಟ್ಟಿನ 20ಕ್ಕೂ ಅಧಿಕ ಮೇಳಗಳು ಖಾಸಗಿ ಸಂಚಾಲಕತ್ವದ ಮೂಲಕ ನಡೆಯಲ್ಪಡು ತ್ತಿವೆ. ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಮೇಳದ ಯಜಮಾನರಿಗೂ ಲಕ್ಷಾಂತರ ರೂ. ನಷ್ಟವಾಗಿರು ವುದರಿಂದ ಕಲಾವಿದರಿಗೆ ರಜೆಯ ವೇತನ ನೀಡುವ ಸ್ಥಿತಿಯಲಿಲ್ಲ.
ಪ್ರತಿ ಬಾರಿ ಕಲಾವಿದರು ಬೇಸಗೆ ತಿರುಗಾಟ ಮುಗಿಯುತ್ತಿದಂತೆ ಮುಂದಿನ ವರ್ಷದ ತಿರುಗಾಟಕ್ಕೆ ಯಾವುದಾದರು ಮೇಳದೊಂದಿಗೆ ಒಪ್ಪಂದ ಮಾಡಿಕೊಂಡು ಮುಂಗಡ ಹಣ ಪಡೆದು ಹಾಗೂ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸಿ ಆರು ತಿಂಗಳು ಜೀವನ ಸಾಗಿಸುತ್ತಾರೆ. ಆದರೆ ಈ ಬಾರಿ ಕಲಾವಿದರಿಗೆ ಮುಂಗಡ ಹಣ ನೀಡಿ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಯಜಮಾನರಿಲ್ಲ. ಹೆಚ್ಚಿನ ಕಲಾವಿದರಿಗೆ ಅನ್ಯ ಉದ್ಯೋಗ ತಿಳಿದಿಲ್ಲ. ಎರಡೂವರೆ ತಿಂಗಳು ಕೆಲಸ
ವಿಲ್ಲದೆ ಕಳೆದಿರುವ ಅವರಿಗೆ ಮುಂದೆ ಮಳೆ ಗಾಲದ ಜೀವನ ಹೇಗೆ ಎನ್ನುವುದೇ ಚಿಂತೆಯಾಗಿದೆ. ಮೇಳ ನಡೆಸುವುದೇ ಸವಾಲು
ತಿರುಗಾಟದ ಆರಂಭದಿಂದಲೇ ಹರಕೆ ಆಟ ಹಾಗೂ ಬುಕ್ಕಿಂಗ್ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿ ನಷ್ಟವಾಗಿತ್ತು. ಇದೀಗ ಪ್ರದರ್ಶನ ಸಂಪೂರ್ಣ ಸ್ಥಗಿತವಾಗಿರುವುದರಿಂದ ಮತ್ತಷ್ಟು ನಷ್ಟವಾ ಗಿದ್ದು ಕಲಾವಿದರಿಗೆ ರಜೆಯ ಸಂಬಳ ನೀಡುವ ಸ್ಥಿತಿ ಇಲ್ಲ. ಮುಂದಿನ ದಿನಗಳಲ್ಲಿ ಮೇಳ ನಡೆಸುವುದೇ ಸವಾಲಾಗಲಿದೆ.
ವಿಟ್ಟಲ ಪೂಜಾರಿ, ಗೋಳಿಗರಡಿ ಮೇಳದ ಸಂಚಾಲಕರು
Related Articles
ಸ್ಟಾರ್ ಕಲಾವಿದರು ಹೊರತು ಪಡಿಸಿ ಬಹುತೇಕರು ಮಳೆಗಾಲದ ಆರು ತಿಂಗಳು ಮೇಳದ ಮುಂಗಡ ಹಣ, ಬೆರಳೆಣಿಕೆಯ ಮಳೆಗಾಲದ ಪ್ರದರ್ಶನ ನಂಬಿ ಜೀವನ ಸಾಗಿಸುತ್ತೇವೆ. ಈ ಬಾರಿ ಎಲ್ಲವೂ ಆಯೋಮಯವಾಗಿದ್ದು, ನಮ್ಮನ್ನೇ ನಂಬಿರುವ ಸಂಸಾರ ಸಂಕಷ್ಟದಲ್ಲಿದೆ. ರಾಜ್ಯ ಸರಕಾರವು ಮೇಳಗಳ ಕಲಾವಿದರಿಗೂ ಸಹಕಾರ ನೀಡಬೇಕು.
ನಾರಾಯಣ ಉಳ್ಳೂರು, ಸೌಕೂರು ಮೇಳದ ಹಿರಿಯ ಕಲಾವಿದ
Advertisement
ಸಹಾಯಧನ ನೀಡಲು ಚಿಂತನೆಮುಜರಾಯಿ ಮೇಳಗಳ ಕಲಾವಿದರಿಗೆ ಸಂಪೂರ್ಣ ವೇತನ ನೀಡಲು ಸೂಚಿಸಲಾಗಿದೆ ಹಾಗೂ ಮುಜರಾಯಿ ದೇವಸ್ಥಾನದ ಹೆಸರಲ್ಲಿ ನಡೆಯುವ ಖಾಸಗಿ ಸಂಚಾಲಕತ್ವದ ಮೇಳ ಗಳ ಕಲಾವಿದರಿಗೂ ಸಹಕಾರ ನೀಡುವ ಯೋಚನೆ ಇದೆ. ಆ ದೇಗುಲಗಳಲ್ಲಿ ಪೂರಕ
ಆದಾಯವಿಲ್ಲದಿರುವುದೇ ಸಮಸ್ಯೆ. ಎಲ್ಲರಿಗೆ ಆಹಾರ, ಸಹಾಯಧನ ನೀಡುವ ಕುರಿತು ಯಕ್ಷಗಾನ ಅಕಾಡೆಮಿ, ಕನ್ನಡ-ಸಂಸ್ಕೃತಿ ಇಲಾ ಖೆಯೊಂದಿಗೆ ಮಾತುಕತೆ ನಡೆಯುತ್ತಿದೆ.
– ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು