ಚಿಕ್ಕಬಳ್ಳಾಪುರ: ಮೇ 20 ರಿಂದ 23 ವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ ಹಿನ್ನೆಲೆ 4ದಿನಗಳಿಗೆ ಅಗತ್ಯವಾದ ದಿನಸಿಮತ್ತು ತರಕಾರಿ ಖರೀದಿಸಲು ಜನಮುಗಿಬಿದ್ದಿದ್ದರಿಂದ ಸಾಮಾಜಿಕ ಅಂತರ ಮತ್ತುಕೊರೊನಾ ಸೋಂಕನ್ನೇ ಮರೆತಂತಿತ್ತು.
ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮತ್ತಿತರರು ಇತ್ತೀಚಿಗೆ ಸುದ್ಧಿಗೋಷ್ಠಿ ನಡೆಸಿ ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ರ ಸೂಚನೆ ಮೇರೆಗೆ ಕೊರೊನಾ ಸೋಂಕು ನಿಯಂತ್ರಿಸಲು ಮೇ20 ರಿಂದ23 ವರೆಗೆ 4ದಿನ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಿದ್ದು ನಾಗರಿಕರು ಸಹಕರಿಸಬೇಕೆಂದುಕೋರಿದ್ದರು.ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆ,ಮೆಡಿಕಲ್ ಸ್ಟೋರ್ ಹೊರತುಪಡಿಸಿ ಅಗತ್ಯ ವಸ್ತು ಖರೀದಿಗೂ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿ ಹಾಲಿನ ಮಳಿಗೆ ಮಾತ್ರ ಬೆಳಗ್ಗೆ6ಗಂಟೆಯಿಂದ 10 ಗಂಟೆವರೆಗೆ ಮತ್ತು ರೋಗಿಗಳ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆ ಹಾಗೂ ಎಲ್ಲಾತಾಲೂಕು ಆಸ್ಪತ್ರೆಗಳ ಸಮೀಪ ಇರುವ ಫಲಹಾರ ಮಂದಿರಗಳಲ್ಲಿ(ಹೋಟೆಲ್)ಗಳಲ್ಲಿ ಪಾರ್ಸೆಲ್‌ಗೆಮಾತ್ರ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ್ ಹೊರತುಪಡಿಸಿ ನಗರ ಪ್ರದೇಶದ ಪೆಟ್ರೋಲ್ ಬಂಕ್,ಬ್ಯಾಂಕು ಸಂಪೂರ್ಣವಾಗಿ ಮುಚ್ಚಿರುತ್ತದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಬುಧವಾರ ಬೆಳಗ್ಗೆಯೇ 4ದಿನಕ್ಕೆಮನೆಗೆ ಬೇಕಾದ ದಿನಸಿ-ತರಕಾರಿಇನ್ನಿತರೆ ಸಾಮಗ್ರಿಖರೀದಿ ಮಾಡಲು ಹೋಲ್‌ಸೆಲ್ ಅಂಗಡಿ,ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿತ್ತು.ಸಾಮಾಜಿಕ ಅಂತರ ಜಿಲ್ಲೆಯಲ್ಲಿ ಪಾಲನೆಯಾಗದೇಜಿಲ್ಲೆಯಲ್ಲಿ ಕೊರೊನಾ ಸೋಂಕು ಇಲ್ಲವೇನೋಎಂಬ ವಾತಾವರಣಕಂಡು ಬಂದಿತ್ತು.
ಕಾರ್ಯಾಚರಣೆ: ಜಿಲ್ಲೆಯಲ್ಲಿ ಗುರುವಾರ ಸಂಪೂರ್ಣವಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿನಸಿ-ತರಕಾರಿ ಖರೀದಿಸಲು ಜನಜಂಗುಳಿ ಸೇರಿದೆಸಾಮಾಜಿಕ ಅಂತರವನ್ನು ಮೈಮರೆತ್ತಿದ್ದಾರೆ ಎಂದುಮಾಹಿತಿ ಅರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಜಿ.ಕೆ.ಮಿಥುನ್ ಕುಮಾರ್‌ರ ಸೂಚನೆ ಮೇರೆಗೆಜಿಲ್ಲಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿನಿರ್ಲಕ್ಷ Â ವಹಿಸಿದ ನಾಗರಿಕರು ಮತ್ತು ಅಂಗಡಿಮಾಲಿಕರಿಗೆ ದಂಡ ವಿಧಿಸಿದರು.
ಆಟೋ ಮೂಲಕ ಜನತೆಗೆ ಪ್ರಚಾರ: ಜಿಲ್ಲೆಯಲ್ಲಿ ಜನತಾ ಕಫೂÂì, ಮಿನಿ ಲಾಕ್‌ಡೌನ್‌ಜಾರಿಯಲ್ಲಿದ್ದರೂ ಸೋಂಕಿತರ ಸಂಖ್ಯೆಹೆಚ್ಚಳವಾಗುತ್ತಿರುವ ವಿಚಾರವನ್ನು ಗಂಭೀರವಾಗಿಪರಿಗಣಿಸಿದ ಜಿಲ್ಲಾಡಳಿತ ಮೇ 20 ರಿಂದಸಂಪೂರ್ಣವಾಗಿ ಲಾಕ್‌ಡೌನ್ ಮಾಡಲುಘೋಷಣೆ ಮಾಡಿತು. ಈ ಕುರಿತು ಜಿಲ್ಲಾದ್ಯಂತವ್ಯಾಪಕವಾಗಿ ಪ್ರಚಾರ ನಡೆಸಲು ಜನರಲ್ಲಿ ಅರಿವುಮೂಡಿಸಲು ಆಟೋಗಳ ಮೂಲಕ ಮಾಹಿತಿನೀಡಲಾಗಿದೆ. ಕೆಲ ಮಸೀದಿಗಳಲ್ಲಿಯೂ ಲಾಕ್‌ಡೌನ್ ಇದ್ದು ಯಾರೂ ಅನಗತ್ಯವಾಗಿ ಹೊರಹೋಗುವುದು ನಿಷೇಧಿಸಲಾಗಿದೆ. ಸೋಂಕುನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಿಲಾಕ್‌ಡೌನ್ ಯಶಸ್ವಿಗೊಳಿಸಬೇಕೆಂದು ಮನವಿಮಾಡಿದ್ದಾರೆ.