Advertisement

ಕರ್ಫ್ಯೂ; ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್‌

01:01 PM May 13, 2021 | Team Udayavani |

ಲೋಕಾಪುರ: ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದಬಸವೇಶ್ವರ ವೃತ್ತದಲ್ಲಿ ಪೊಲೀಸರು ಅನಗತ್ಯವಾಗಿತಿರುಗಾಡುವ ದ್ವಿಚಕ್ರ ವಾಹನ ವಶಪಡಿಸಿಕೊಂಡುಸೀಜ್‌ ಮಾಡಿದ್ದಾರೆ.ಪಿಎಸ್‌ಐ ಶಿವಶಂಕರ ಮುಕರಿ ನೇತೃತ್ವದಲ್ಲಿಠಾಣೆಯ ಎಲ್ಲ ಎಎಸ್‌ಐ ಸೇರಿದಂತೆ ಕಾನ್ಸ್‌ಸ್ಟೇಬಲ್‌ಗಳೂ ಸೇರಿ ಕರ್ಫ್ಯೂ ನಿಯಮ ಉಲ್ಲಂಘಿಸಿದವರವಿರುದ್ಧ ದಂಡದ ಅಸ್ತ್ರ ಉಪಯೋಗಿಸಿದ್ದಾರೆ.

Advertisement

ಸೀಜ್‌ಮಾಡಿದ ವಾಹನ ಕರ್ಫ್ಯೂ ಮುಗಿಯುವವರೆಗೂಬಿಡಲಾಗುವುದಿಲ್ಲ ಎಂದು ಸವಾರರಿಗೆ ತಿಳಿಸಿದ್ದಾರೆ.ಕೊರೊನಾ ಎರಡನೇ ಅಲೆ ತುಂಡರಿಸಲು ಸರ್ಕಾರಮೇ 24ರವರೆಗೆ ಕಠಿಣ ಕರ್ಫ್ಯೂ ಜಾರಿ ಮಾಡಿದ್ದು,ಪೊಲೀಸ್‌ ಇಲಾಖೆ ಅನಗತ್ಯವಾಗಿ ಓಡಾಟಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಿದೆ.ಪ್ರಮುಖ ಬೀದಿಗಳಲ್ಲಿ ಅನಗತ್ಯವಾಗಿರಸ್ತೆಗಿಳಿದವರಿಗೆ ಲಾಠಿ ರುಚಿ ತೋರಿಸಿ ದಾಖಲೆಪರಿಶೀಲಿಸಿ ಬೈಕ್‌ಗಳನ್ನು ಸೀಜ್‌ ಮಾಡಿದ್ದಾರೆ.

ವಿನಾಕಾರಣ ರಸ್ತೆಗಿಳಿದು ಪೊಲೀಸರ ಕೈಗೆಸಿಕ್ಕಿಬಿದ್ದವರು ಗೋಗರೆಯುತ್ತಿರುವುದು ಕಂಡುಬಂತು. ಬೆಳಗ್ಗೆ 10ರವರೆಗೆ ದಿನಸಿ ಹಾಗೂ ವಸ್ತುಗಳಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು . 10 ಗಂಟೆನಂತರ ಸ್ವಯಂ ಪ್ರೇರಿತವಾಗಿ ಅಂಗಡಿಗಳನನ್ನುಬಂದ್‌ ಮಾಡಿ ಅಂಗಡಿಕಾರರು ಮಾರ್ಗಸೂಚಿಪಾಲಿಸಿ ಕರ್ಫ್ಯೂ ಬೆಂಬಲಿಸಿದ್ದಾರೆ.ಈ ವೇಳೆ ಎಎಸ್‌ಐ ಎಸ್‌.ಎಸ್‌. ಹೆಳವರ,ಎಲ್‌.ಪಿ. ಲಮಾಣಿ, ಐ.ಆರ್‌. ಮಾದರ, ಪೊಲೀಸ್‌ಸಿಬ್ಬಂದಿ ಅಶೋಕ ಪರೀಟ, ಎಸ್‌.ಎಸ್‌. ಗಂಗಾಯಿ,ಮೌನೇಶ ಪತ್ತಾರ, ಮಹಾಂತೇಶ ಸಕ್ರಿ, ವಿಠuಲಉಪ್ಪಾರ, ನಾಗೇಶ ಭಜಂತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next