ಹೊಸದಿಲ್ಲಿ : ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸವೀಗ ತೂಗುಯ್ನಾಲೆಗೆ ಸಿಲುಕಿದೆ. ಕಾರಣ, ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಕೊರೊನಾ ಕೇಸ್.
ಜುಲೈ ತಿಂಗಳಲ್ಲಿ ಭಾರತದ “ದ್ವಿತೀಯ ತಂಡ’ ಸೀಮಿತ ಓವರ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಇದು ಅಧಿಕೃತಗೊಂಡಿರಲಿಲ್ಲ. ಆದರೀಗ ಲಂಕಾದಲ್ಲಿ ಕೊರೊನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಈ ಸರಣಿ ನಡೆಯುವುದು ಅನುಮಾನ ಎನ್ನಲಾಗಿದೆ.
ಇನ್ನೊಂದೆಡೆ ಕೊರೊನಾ ಸೋಂಕಿನ ಹೊರತಾಗಿಯೂ ಈ ಸರಣಿಯನ್ನು ಯಶಸ್ವಿಯಾಗಿ ನಡೆಸಿಕೊಡಲಿದ್ದೇವೆ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆ್ಯಶ್ಲೇ ಡಿ ಸಿಲ್ವ ಹೇಳಿದ್ದಾರೆ. ಕೊರೊನಾ ಕಾಲದಲ್ಲೇ ತಾವು ಇಂಗ್ಲೆಂಡ್ ಸರಣಿಯನ್ನು ಯಶಸ್ವಿಯಾಗಿ ನಡೆಸಿರುವುದನ್ನು ಉಲ್ಲೇಖೀಸಿದ್ದಾರೆ.
ಇದನ್ನೂ ಓದಿ :ಕೋವಿಡ್ ವಿರುದ್ಧದ ಹೋರಾಟಕ್ಕೆ ಪಠಾಣ್ ಸೋದರರಿಂದ ಮತ್ತೆ ನೆರವು
ಲಂಕಾ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಜು. 13, 16 ಮತ್ತು 19ರಂದು ಏಕದಿನ; ಜು. 22, 24 ಮತ್ತು 27ರಂದು ಟಿ20 ಪಂದ್ಯ ನಡೆಯಬೇಕಿದೆ. ಎಲ್ಲ ಪಂದ್ಯಗಳ ತಾಣ ಕೊಲಂಬೊದ “ಆರ್. ಪ್ರೇಮದಾಸ ಸ್ಟೇಡಿಯಂ’.