ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ಮೃತ ಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 108ಕ್ಕೇರಿದೆ. ಇದುವರೆಗೆ ಗುಣಮುಖರಾದವರ ಸಂಖ್ಯೆ 10,000 ದಾಟಿದೆ. ಉಡುಪಿ ತಾಲೂಕಿನ 60 ವರ್ಷ ಪ್ರಾಯದ, ಕುಂದಾಪುರ ತಾಲೂಕಿನ 50 ವರ್ಷ ಪ್ರಾಯದ ಪುರುಷರಿಬ್ಬರು ಮೃತಪಟ್ಟಿದ್ದಾರೆ. ಅವರಿಗೆ ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಇತ್ಯಾದಿ ಸಮಸ್ಯೆಗಳಿದ್ದವು.
ಶುಕ್ರವಾರ 186 ಜನರಿಗೆ ಪಾಸಿಟಿವ್ ಮತ್ತು 1,005 ಜನರಿಗೆ ನೆಗೆಟಿವ್ ವರದಿಯಾಗಿದೆ. ಸೋಂಕಿತರಲ್ಲಿ ರೋಗ ಲಕ್ಷಣ ಇರುವ 69 ಪುರುಷರು, 51 ಮಹಿಳೆಯರು, ರೋಗ ಲಕ್ಷಣ ಇರದ 36 ಪುರುಷರು, 30 ಮಹಿಳೆಯರು ಇದ್ದಾರೆ. ಇವರಲ್ಲಿ 109 ಜನರು ಉಡುಪಿ ತಾಲೂಕಿನವರು, 42 ಮಂದಿ ಕುಂದಾಪುರ ತಾಲೂಕಿನವರು, 27 ಜನರು ಕಾರ್ಕಳ ತಾಲೂಕಿನವರು, ಎಂಟು ಮಂದಿ ಇತರ ಜಿಲ್ಲೆಯವರು. 1,172 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 247 ಮಾದರಿಗಳ ವರದಿಗಳು ಕೈಸೇರಬೇಕಾಗಿದೆ.
ಶುಕ್ರವಾರ 332 ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 996 ಮಂದಿ ಆಸ್ಪತ್ರೆಗಳಲ್ಲಿಯೂ, 971 ಮಂದಿ ಮನೆಗಳ ಐಸೊಲೇಶನ್ ಮೂಲಕವೂ ಒಟ್ಟು 1,967 ಜನರು ಶುಶ್ರೂಷೆ ಪಡೆಯುತ್ತಿದ್ದಾರೆ.