ಪಣಜಿ: ಗೋವಾ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಮತ್ತು ಕೋವಿಡ್ ನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಕಳೆದ ಕೆಲ ದಿನಗಳಿಂದ ನಿಯಂತ್ರಣಕ್ಕೆ ಬಂದಿರುವುದು ರಾಜ್ಯದ ಜನತೆಯ ಭೀತಿ ದೂರವಾಗುವಂತೆ ಮಾಡಿದೆ.
ರಾಜ್ಯದಲ್ಲಿ ಸದ್ಯ ಕೋವಿಡ್ ಸೋಂಕಿನ ಪ್ರಮಾಣ ಶೇ 32 ರಷ್ಟಿದ್ದು, ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಶೇ 85 ಕ್ಕೆ ತಲುಪಿದೆ.
ರಾಜ್ಯದಲ್ಲಿ ಕಫ್ರ್ಯೂ ಜಾರಿಯಾಗುವ ಮುನ್ನ ಕೋವಿಡ್ ಸೋಂಕಿನ ಪ್ರಮಾಣ ಶೇ. 52 ಕ್ಕೆ ತಲುಪಿತ್ತು. ಆದರೆ ಇದೀಗ ಪ್ರಮಾಣ ಶೇ 32 ಕ್ಕೆ ಇಳಿಕೆಯಾಗಿದೆ. ಇಷ್ಟೇ ಅಲ್ಲದೆಯೇ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಶೇ. 70 ಕ್ಕೆ ಇಳಿಕೆಯಾಗಿತ್ತು, ಇದು ಸದ್ಯ ಶೇ 85 ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ನೀಡಿರುವ ಈ ಎಲ್ಲ ಅಂಕೆ ಸಂಖ್ಯೆಗಳು ರಾಜ್ಯದಲ್ಲಿಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಕಂಡುಬರುತ್ತಿದೆ.
ರಾಜ್ಯದಲ್ಲಿ ಕಫ್ರ್ಯೂ ಜಾರಿಯಾಗುವ ಮುನ್ನ ಪ್ರತಿದಿನ ಸುಮಾರು 4500 ಜನರಿಗೆ ಕರೋನಾ ಸೋಂಕು ದೃಢಪಟ್ಟಿತ್ತು, ಆದರೆ ಸದ್ಯ ರಾಜ್ಯದಲ್ಲಿ ಪ್ರತಿದಿನ ಸುಮಾರು 1500 ಜನ ಕರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 19,328 ಕರೋನಾ ಸಕ್ರಿಯ ಪ್ರಕರಣಗಳಿವೆ.
ಅಷ್ಟೇನೂ ಟಫ್ ರೂಲ್ಸ್ ಇಲ್ಲದೆಯೇ ಕೋವಿಡ್ ಸೋಂಕು ಇಳಿಕೆ :
ಹೌದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಅಂತಹ ಯಾವುದೇ ಟಫ್ ರೂಲ್ಸ್ ಜಾರಿಗೊಳಿಸಿದೆಯೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಕಂಡುಬರುತ್ತಿದೆ. ರಾಜ್ಯದಲ್ಲಿ ಎಲ್ಲ ಇಂಡಸ್ಟ್ರಿಗಳು ಮತ್ತು ಪ್ರಮುಖ ಕಛೇರಿಗಳು ಆರಂಭದಲ್ಲಿದೆ.
ರಾಜ್ಯದಲ್ಲಿ ಜನರ ಓಡಾಟ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಇತರ ರಾಜ್ಯಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಿ ಅತ್ಯಂತ ಟಫ್ ರೂಲ್ಸ್ ಜಾರಿಯಾಗಿ ಹಲವು ದಿನಗಳು ಕಳೆದರೂ ಇದುವರೆಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಗೋವಾ ಸರ್ಕಾರ ಅಂತದ್ದೇನು ಫಾರ್ಮುಲಾ ಬಳಸಿ ಸೋಂಕು ನಿಯಂತ್ರಿಸಿದೆ ಎಂಬುದು ಅಚ್ಚರಿ ಮೂಡಿಸುವಂತೆ ಮಾಡಿದೆ.