Advertisement

ಜಾಗೃತಿಗೂ ಎಚ್ಚೆತ್ತಿಲ್ಲ ಜನ

04:25 PM Apr 02, 2021 | Team Udayavani |

ಮೂಡಲಗಿ: ಸಾರ್ವಜನಿಕರ ಬೇಕಾಬಿಟ್ಟಿ ವರ್ತನೆಯಿಂದಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ. ಹಲವಾರು ಬಾರಿ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ.ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರ ಕಡಿವಾಣಕ್ಕೆಕಠಿಣ ಕ್ರಮದ ಅವಶ್ಯಕತೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ನುಡಿದರು.

Advertisement

ಗುರುವಾರ ಪುರಸಭೆ ಕಾರ್ಯಾಲಯ, ಪೊಲೀಸ್‌ ಠಾಣೆ, ಪತ್ರಕರ್ತರ ಬಳಗ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಪುರಸಭೆ ಆವರಣದಲ್ಲಿ ಕೋವಿಡ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ಜಾಗೃತರಾಗಬೇಕು.ಕೋವಿಡ್ ನಿಯಮ ಪಾಲನೆಯೇ ಸುರಕ್ಷಾ ಮಂತ್ರವಾಗಿದೆ.ಜನ ಎಚ್ಚೆತ್ತುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಪಿಐ ಸತೀಶ ಕಣಿಮೇಶ್ವರ ಮಾತನಾಡಿ, ತಾಲೂಕಾದ್ಯಂತಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ ತಮ್ಮ ಜೀವದಜೊತೆಗೆ ತಮ್ಮ ಕುಟುಂಬದ ರಕ್ಷಣೆ ಮಾಡಬೇಕೆಂದುಮನವಿ ಮಾಡಿದರು. ಮೊದಲನೇ ಕೋವಿಡ್ ಅಲೆಯಲ್ಲಿಮೂಡಲಗಿ ತಾಲೂಕಿನಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳು ಕಂಡು ಬಂದಿವೆ. ಆದರೆ ಈಗ ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರುಜಾಗೃತರಾಗಬೇಕು ಎಂದು ಹೇಳಿದರು.

ಜಾಗೃತಿ ಜಾಥಾ ಪಟ್ಟಣದ ಪ್ರಮುಖ ವೃತ್ತಗಳಲ್ಲಿಸಂಚರಿಸಿ ಜಾಗೃತಿ ಮೂಡಿಸಿತು. ಪಿಎಸ್‌ಐ ಎಚ್‌.ವೈ.ಬಾಲದಂಡಿ, ವೈದ್ಯಾಕಾರಿ ಭಾರತಿ ಕೋಣಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮತ್ತು ಪ್ರತಕರ್ತರು, ಆಶಾ ಕಾರ್ಯಕರ್ತೆಯರು, ಪುರಸಭೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಕೋವಿಡ್ ಮುನ್ನೆಚ್ಚರಿಕೆ ವಹಿಸಿ: ಕವಟಗಿಮಠ

Advertisement

ಚಿಕ್ಕೋಡಿ: ಕೋವಿಡ್ ಮುನ್ನೆಚ್ಚರಿಕೆಯಾಗಿ 45 ವರ್ಷ ಮೇಲ್ಪಟ್ಟ ಹಿರಿಯರು, ವೈದ್ಧರು ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ಹಾಗೂ ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕೆಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕೋವಿಡ್ ಸೋಂಕು ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲುಎಲ್ಲ ಇಲಾಖೆ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ| ವಿಠ್ಠಲ ಶಿಂಧೆ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 60ವರ್ಷ ಮೇಲ್ಪಟ್ಟವರಲ್ಲಿ 7523 ಜನರು ಹಾಗೂ 45 ರಿಂದ 59 ವರ್ಷ ಒಳಗಿನವರು 2301ಜನರಂತೆ ಒಟ್ಟು 9824 ಜನರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಒಟ್ಟಾರೆ ಶೇ. 26.3 ಜನ ವ್ಯಾಕ್ಸಿನ್‌ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಯುಕೇಶಕುಮಾರ,ತಹಶೀಲ್ದಾರ್‌ ಪ್ರವೀಣ ಜೈನ, ಅಪರ ಜಿಲ್ಲಾಆರೋಗ್ಯಾಧಿಕಾರಿ ಡಾ|ಎಸ್‌.ಎಸ್‌. ಗಡಾದ,ತಾಪಂ ಕಾರ್ಯನಿರ್ವಾಹಕ ಅಧಿಕಾರಿಮಲ್ಲಿಕಾರ್ಜುನ ಉಳ್ಳಾಗಡ್ಡಿ, ಪಶು ಸಂಗೋಪನಾಇಲಾಖೆ ಉಪನಿರ್ದೇಶಕ ಡಾ| ಸದಾಶಿವಉಪ್ಪಾರ, ಡಿಡಿಪಿಐ ಗಜಾನನ ಮನ್ನಿಕೇರಿ, ಸಿಪಿಐ ಆರ್‌. ಆರ್‌. ಪಾಟೀಲ, ಸಿಡಿಪಿಒ ಅಧಿಕಾರಿಗಳಾದ ದೀಪಾ ಕಾಳೆ ಮತ್ತು ಸುಮಿತ್ರಾ, ತಾಲೂಕಾ ಶಿಕ್ಷಣ ಕ್ಷೇತ್ರ ಅಧಿಕಾರಿ ಮೇಕನಮರಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next