Advertisement

ನೂರಕ್ಕೂ ಅಧಿಕ ಶಿಕ್ಷಕರಲ್ಲಿ ಕೋವಿಡ್

11:58 PM Jan 06, 2021 | mahesh |

ಬೆಂಗಳೂರು: ರಾಜ್ಯದಲ್ಲಿ ನೂರಕ್ಕೂ ಅಧಿಕ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದ್ದು, ಬಹುತೇಕರು ಹೋಂ ಕ್ವಾರಂಟೈನ್‌, ಐಸೋ ಲೇಶನ್‌ಗೆ ಒಳಗಾಗಿದ್ದಾರೆ.

Advertisement

ಶಾಲೆಗೆ ಬರುವ ಪ್ರತೀ ಶಿಕ್ಷಕರು ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿ, ಅದರ ನೆಗೆಟಿವ್‌ ವರದಿ ಆಧಾರದಲ್ಲೇ ಶಾಲೆಗೆ ಬರಬೇಕು ಎಂದು ಈ ಹಿಂದೆಯೇ ಸರಕಾರ ಸ್ಪಷ್ಟಪಡಿಸಿತ್ತು. ಅದರಂತೆ ಬಹುತೇಕರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕೆಲವರ ವರದಿ ಈಗಾಗಲೇ ಬಂದಿದೆ. ಇನ್ನು ಕೆಲವರ ವರದಿ ಬರಬೇಕಿದೆ. ಸುಮಾರು ನೂರಕ್ಕೂ ಅಧಿಕ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುರಕ್ಷೆಗೆ ಸಂಬಂಧಿಸಿದ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಈಗಾಗಲೇ ಜಿಲ್ಲಾ ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಕೊರೊನಾ ದೃಢಪಟ್ಟ ಶಿಕ್ಷಕರು ಹೋಂ ಐಸೋಲೇಷನ್‌, ಕ್ವಾರಂಟೈನ್‌ ಆಗುತ್ತಿದ್ದಾರೆ. ಹೀಗಾಗಿ ಪಾಲಕರು ಅಥವಾ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಶಾಲಾ ತರಗತಿ, ವಿದ್ಯಾಗಮ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಶಿಕ್ಷಕರಲ್ಲಿ ಕೋವಿಡ್
ಜ. 1- 2 ಪಾಸಿಟಿವ್‌
ಜ. 2- 5 ಪಾಸಿಟಿವ್‌
ಜ. 4- 25 + ಪಾಸಿಟಿವ್‌
ಜ. 5- 50+
ಜ. 6-100+
ಹಾಸನ – 10 ಶಿಕ್ಷಕರಿಗೆ ಕೋವಿಡ್ ಈ ಶಿಕ್ಷಕರಿದ್ದ ಶಾಲೆಗಳಿಗೆ 3 ದಿನ ರಜೆ
ಚಿಕ್ಕಮಗಳೂರು – 11
ವಿದ್ಯಾರ್ಥಿಗಳು,
7 ಶಿಕ್ಷಕರಿಗೆ ಸೋಂಕು

ನಾಳೆ ಎರಡನೇ ಡ್ರೈ ರನ್‌
ಈಗಾಗಲೇ ದೇಶಾದ್ಯಂತ ಮೊದಲ ಹಂತದ ಡ್ರೈ ರನ್‌ ಅನ್ನು ಯಶಸ್ವಿಯಾಗಿ ಮುಗಿಸಿರುವ ಕೇಂದ್ರ ಸರಕಾರ, ಈಗ ಎರಡನೇ ಹಂತದ ಡ್ರೈ ರನ್‌ಗೂ ತಯಾರಾಗಿದೆ. ಶುಕ್ರವಾರ ದೇಶದ ಆಯ್ದ ಜಿಲ್ಲೆಗಳಲ್ಲೂ ಡ್ರೈ ರನ್‌ ನಡೆಯಲಿದೆ. ಜ.13 ರಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗುವ ಮಾತುಗಳ ಬೆನ್ನಲ್ಲೇ ಎರಡನೇ ಹಂತದ ಪ್ರಾತ್ಯಕ್ಷಿಕೆ ಆರಂಭಿಸಲು ಮುಂದಾಗಿದೆ.

Advertisement

ಎರಡನೇ ಹಂತದ ಡ್ರೈ ರನ್‌ ಜ. 8 ರಂದು ಉಡುಪಿ ಯಲ್ಲೂ ನಡೆ ಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next