Advertisement

ಸರ್ಕಾರದ ಮಾರ್ಗಸೂಚಿ ಗಾಳಿಗೆ ತೂರಿ ಶಾಲಾ ಆವರಣದಲ್ಲಿಯೇ ತರಗತಿ

11:36 AM Aug 27, 2020 | sudhir |

ಕೆಜಿಎಫ್: ಸರ್ಕಾರದ ಮಾರ್ಗಸೂಚಿಯನ್ನು ಬಿಟ್ಟು, ಶಾಲೆಯ ಆವರಣದಲ್ಲಿಯೇ ಶಿಕ್ಷಕರು ತರಗತಿ ನಡೆಸುತ್ತಿದ್ದಾರೆ. ಇದರಿಂದ ಪೋಷಕರಲ್ಲಿ ಕೋವಿಡ್ ಎಲ್ಲಿ ಹರಡುವುದೋ ಎಂಬ ಆತಂಕ ಕಾಡುತ್ತಿದೆ.

Advertisement

ಮಸ್ಕಂನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾಗಮ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳಿಗೆ ಮಾಸ್ಕ್ ಇಲ್ಲ, ಸ್ಯಾನಿಟೈಸರ್‌ ಇಲ್ಲ. ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಶಾಲೆ ಆವರಣ ಮತ್ತು ಕೊಠಡಿಯಲ್ಲಿ ವಿದ್ಯಾಗಮ ತರಗತಿ ಮಾಡಬಾರದು. ಬೇರೆ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳನ್ನು ಇರಿಸಿಕೊಳ್ಳದೆ ತರಗತಿಯನ್ನು ನಡೆಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ, ಮಸ್ಕಂ ಶಾಲೆಯ ಸಿಬ್ಬಂದಿ ಎಲ್ಲವನ್ನೂ ಗಾಳಿಗೆ ತೂರಿ, ಕೋವಿಡ್ ಅವಧಿಯಲ್ಲಿ ಮಾರ್ಗ ಸೂಚಿಯನ್ನು ಧಿಕ್ಕರಿಸಿ, ಸಾಂಕ್ರಾಮಿಕ ರೋಗ ಹರಡುವುದಕ್ಕೆ ಕಾರಣವಾಗುತ್ತಿದ್ದಾರೆ ಎಂದು ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next