Advertisement

ಕೋವಿಡ್ ಅಲರ್ಟ್: ಆಕ್ಸಿಜನ್ ಆಮದು ಮೇಲಿನ ಅಬಕಾರಿ ಸುಂಕ, ಆರೋಗ್ಯ ಸೆಸ್ ಗೆ ವಿನಾಯ್ತಿ

05:10 PM Apr 24, 2021 | Team Udayavani |

ನವದೆಹಲಿ:ಕೋವಿಡ್ ಎರಡನೇ ಅಲೆ ದೇಶದಲ್ಲಿ ಕ್ಷಿಪ್ರವಾಗಿ ಹರಡುವ ಮೂಲಕ ಭೀತಿಯನ್ನು ಮೂಡಿಸಿದೆ. ಅಲ್ಲದೇ ಇದರೊಂದಿಗೆ ಜನರು ಹಲವಾರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಕೇಂದ್ರ ಸರ್ಕಾರ, ಆಕ್ಸಿಜನ್ ಆಮದಿನ ಮೇಲಿನ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಅನ್ನು ಮನ್ನಾ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ(ಏಪ್ರಿಲ್ 24) ಸಭೆಯಲ್ಲಿ, ಮೂರು ತಿಂಗಳ ಅವಧಿಗೆ ಆಮದು ಮಾಡಿಕೊಳ್ಳುವ ಕೋವಿಡ್ 19 ಲಸಿಕೆ ಮೇಲಿನ ಮೂಲ ಅಬಕಾರಿ ಸುಂಕಕ್ಕೆ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ಹೇಳಿದೆ.

ಅಬಕಾರಿ ಸುಂಕ ಹಾಗೂ ಸೆಸ್ ವಿನಾಯ್ತಿಯಿಂದ ಈ ವಸ್ತುಗಳು ಇನ್ನಷ್ಟು ಅಗ್ಗವಾಗಿ ಲಭ್ಯವಾಗಲಿದೆ. ಕೋವಿಡ್ ಗೆ ಸಂಬಂಧಿಸಿದ ಉಪಕರಣ ಆಮದು ಮೇಲಿನ ಸುಂಕಕ್ಕೂ ವಿನಾಯ್ತಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಆಸ್ಪತ್ರೆ ಮತ್ತು ಮನೆಗಳಲ್ಲಿರುವ ರೋಗಿಗಳಿಗೆ ತುರ್ತಾಗಿ ಮೆಡಿಕಲ್ ಆಕ್ಸಿಜನ್ ಮತ್ತು ಉಪಕರಣಗಳು ತುರ್ತಾಗಿ ಸರಬರಾಜು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಚಿವಾಲಯಗಳು, ಇಲಾಖೆಗಳು ತಕ್ಷಣವೇ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ಸಲಹೆ ನೀಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next