Advertisement

ಕೋವಿಡ್‌: ಸಂಪಾದನೆ ಹಾದಿಹಿಡಿದ ಶೇ.30 ಮಕ್ಕಳು!

02:38 PM Aug 07, 2021 | Team Udayavani |

ಬೆಂಗಳೂರು: ಕೋವಿಡ್‌ ಸಂದಿಗ್ಧತೆ ಲಾಕ್‌ಡೌನ್‌ ಹಾಗೂ ಇದರ ಪರಿಣಾಮವಾಗಿ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭವಾಗದೇ ಇದ್ದರೂ ಶೇ.70ರಷ್ಟು ಮಕ್ಕಳು ಒಂದಲ್ಲೊಂದು ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿದ್ದರೆ, ಶೇ.30ರಷ್ಟು ಮಕ್ಕಳು ಸಂಪಾದನೆಯಲ್ಲಿ ತೊಡಗಿದ್ದರು
ಎಂಬ ಆತಂಕಕಾರಿ ಮಾಹಿತಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸಮೀಕ್ಷೆಯಲ್ಲಿ
ಬಹಿರಂಗಪಡಿಸಿದೆ.

Advertisement

ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಯಿಂದ ಒಟ್ಟು 3,672 ಶಾಲೆಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಡಿಎಸ್‌ಇಆರ್‌ಟಿ ಸಮೀಕ್ಷೆ
ನಡೆಸಿದೆ. ಶೇ.70ರಷ್ಟು ವಿದ್ಯಾರ್ಥಿಗಳು ಮೊಬೈಲ್‌, ಟಿವಿ, ಲ್ಯಾಪ್‌ ಟಾಪ್‌ ಮೊದಲಾದ ತಾಂತ್ರಿಕ ಉಪಕರಣಗಳನ್ನು ಬಳಸಿ ಒಂದಲ್ಲೊಂದು
ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೇಳಿದ ಖಾತೆ ಸಿಗದೆ ಇದ್ದರೆ ಶಾಸಕನಾಗಿಯೇ ಇರುತ್ತೇನೆ: ಆನಂದ್ ಸಿಂಗ್ ಅಸಮಾಧಾನ

ಈ ಪೈಕಿ ಶೇ 45ರಷ್ಟು ಮಕ್ಕಳು ಪಾಠದ ಜತೆಗೆ ಮೊಬೈಲ್‌ನಲ್ಲಿ ಆಟದಲ್ಲೂ ಸಕ್ರಿಯರಾಗಿದ್ದಾರೆ. ಶೇ. 50ರಷ್ಟು ಮಕ್ಕಳು ಇತರ
ಕಾರ್ಯಕ್ರಮಗಳನ್ನೂ ವೀಕ್ಷಿಸಿದ್ದಾರೆ. ಉಳಿದ ಶೇ.30ರಷ್ಟು ಮಕ್ಕಳು ಕಲಿಕೆಬಿಟ್ಟು ಕೆಲಸ, ಕೂಲಿ,ಪೋಷಕರಿಗೆ ನೆರವಾಗಲು ಸಂಪಾದನೆಯಲ್ಲಿ
ತೊಡಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಅಂಶ ಎಂದು ಡಿಎಸ್‌ಇಆರ್‌ಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೋವಿಡ್‌ ಅವಧಿಯಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಲಿಕೆ, ಕೌಶಲ್ಯಗಳಿಕೆ, ಆಟೋಟ, ಸುತ್ತಾಟ, ಮಾತುಕತೆಗಳಲ್ಲಿ ಅತ್ಯಂತ ಹೆಚ್ಚು ತೊಡಗಿಸಿ ಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಸ್ವ ಕಲಿಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಖಾಸಗಿ ಶಾಲೆಗಳ ಮಕ್ಕಳು ಶಿಕ್ಷಣ ಅಥವಾ ಕಲಿಕೆಗಾಗಿ ಮೊಬೈಲ್‌ ಸೇರಿದಂತೆ ಇತರೆ ಉಪಕರಣಗಳ ಮೂಲಕ ಶಿಕ್ಷಕರು ಮತ್ತು ಹಿರಿಯರನ್ನು ಆಶ್ರಯಿದ್ದಾರೆ ಎಂಬುದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next