Advertisement

ಮಾರಕ ಕೋವಿಡ್ 19 ವಿರುದ್ಧ ಹೋರಾಡಲು ಯುದ್ಧ ಸಮಯದ ಯೋಜನೆ ಅಗತ್ಯ: ವಿಶ್ವಸಂಸ್ಥೆ

09:45 AM Mar 28, 2020 | Nagendra Trasi |

ವಿಶ್ವಸಂಸ್ಥೆ:ಮಾರಣಾಂತಿಕ ಕೋವಿಡ್ 19 ವೈರಸ್ ಸೋಂಕಿಗೆ ಜಗತ್ತಿನಾದ್ಯಂತ ಸಾವನ್ನಪ್ಪಿದ್ದವರ ಸಂಖ್ಯೆ 23 ಸಾವಿರಕ್ಕೆ ಏರಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲಿ ಆರ್ಥಿಕವಾಗಿ ಮುಂದುವರಿದ ದೇಶಗಳು ಕೋವಿಡ್ 19 ವಿರುದ್ಧ ಯುದ್ದೋಪಾದಿಯಲ್ಲಿ ಯೋಜನೆ ರೂಪಿಸಬೇಕಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೊ ಗುಟೇರಸ್ ಶುಕ್ರವಾರ ಕರೆ ನೀಡಿದ್ದಾರೆ.

Advertisement

ನಾವು ವೈರಸ್ ಜತೆ ಯುದ್ಧ ನಡೆಸಬೇಕಾಗಿದೆ. ಆದರೆ ಇದು ಗೆಲುವು ಅಲ್ಲ ಎಂದು ಗುಟೇರಸ್ ಜಿ20 ಶೃಂಗದ ಮುಖಂಡರನ್ನು ಉದ್ದೇಶಿಸಿ ಮಾತನಾಡುತ್ತ, ಈ ಯುದ್ಧಕ್ಕೆ ಯುದ್ಧದ ಸಮಯದ ಯೋಜನೆ ಬೇಕಾಗಿದೆ ಎಂದರು.

ವಿಶ್ವಾದ್ಯಂತ ಕೋವಿಡ್ 19 ಸೋಂಕಿನ 100,000 ಲಕ್ಷ ಪ್ರಕರಣವನ್ನು ದೃಢಪಡಿಸಲು ಮೂರು ತಿಂಗಳು ಬೇಕಾಯಿತು. ಮುಂದಿನ 12 ದಿನಗಳಲ್ಲಿ ಮತ್ತೆ 100,000 ಪ್ರಕರಣಗಳು ಬೆಳಕಿಗೆ ಬಂದವು. ನಂತರ ನಾಲ್ಕು ದಿನಗಳಲ್ಲಿಯೇ ಒಂದು ಲಕ್ಷ ದೃಢಪಟ್ಟಿತ್ತು. ನಾಲ್ಕನೆಯ ಬಾರಿ ಕೇವಲ ಒಂದೂವರೆ ದಿನಗಳಲ್ಲಿ ಪತ್ತೆಯಾಗಿತ್ತು ಎಂದು ಹೇಳಿರುವುದಾಗಿ ಕ್ಸಿನ್ ಹುವಾ ವರದಿ ಮಾಡಿದೆ.

ಕೋವಿಡ್ 19 ಮಹಾಮಾರಿಯಿಂದಾಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲವಾದ ಹೊಡೆತ ಬಿದ್ದಿದೆ. ಈ ನಿಟ್ಟಿನಲ್ಲಿ ಪರಿಹಾರ ಪ್ಯಾಕೇಜ್ ಘೋಷಿಸಬೇಕಾದ ಅಗತ್ಯವಿದೆ. ಜತೆಗೆ ಜಾಗತಿಕ ಆರ್ಥಿಕ ಚೇತರಿಕೆಗೂ ನೆರವಾಗುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಬೇಕಾಗಿದೆ ಎಂದು ಗುಟೇರಸ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next