Advertisement

ಕೋವಿಡ್ 19 ತಲ್ಲಣ: ದೇಶವಾಸಿಗಳ ಸಂಕಷ್ಟಕ್ಕೆ ಕೇಂದ್ರದ ನೆರವು ; ಹೊಸ ಪಡಿತರ ಯೋಜನೆ ಘೋಷಣೆ

11:08 AM Mar 27, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ಕಾಟದಿಂದ ಸಂಕಷ್ಟಕ್ಕೊಳಗಾಗಿ 21 ದಿನಗಳ ಕಾಲ ಲಾಕ್ ಡೌನ್ ಸ್ಥಿತಿಯಲ್ಲಿರಬೇಕಾದ ಅನಿವಾರ್ಯತೆಗೆ ಸಿಲುಕಿರುವ ದೇಶದ ಜನಸಾಮಾನ್ಯರ ನೆರವಿಗೆ ಇದೀಗ ಕೇಂದ್ರ ಸರಕಾರ ನೂತನ ಪಡಿತರ ಯೋಜನೆಯೊಂದನ್ನು ಜಾರಿಗೊಳಿಸಿದೆ.

Advertisement

ಈ ಯೋಜನೆಯ ಅನ್ವಯ 80 ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ 2 ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ 3 ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ದೆಹಲಿಯಲ್ಲಿ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ತಿಳಿಸಿದ್ದಾರೆ

ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ನಿರ್ಧಾರಕ್ಕೂ ಕೇಂದ್ರ ಬಂದಿದೆ. ಇನ್ನು ಕೋವಿಡ್ 19 ಸಂಬಂಧಿತ ಜಿಲ್ಲಾವಾರು ಹೆಲ್ಪ್ ಲೈನ್ ತೆರೆಯಲೂ ಸಹ ನಿರ್ಧರಿಸಲಾಗಿದೆ.

ಆದರೆ ಜನರಿಗೆ ಪಡಿತರವನ್ನು ಸಿಗುವಂತೆ ಮಾಡುವ ಮತ್ತು ಇನ್ನಿತರ ಸವಲತ್ತುಗಳನ್ನು ಜನರಿಗೆ ತಲುಪಿಸುವುದಕ್ಕೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ದಿನದ ಅಂತ್ಯದೊಳಗೆ ಸರಕಾರ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಸಚಿವ ಜಾಬ್ಡೇಕರ್ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

Advertisement

– ಮೂರು ತಿಂಗಳ ಪಡಿತರವನ್ನು ಮುಂಗಡವಾಗಿಯೇ ನೀಡಲಾಗುವುದು.

– ಗುತ್ತಿಗೆ ಕಾರ್ಮಿಕರಿಗೆ ಕಡ್ಡಾಯ ವೇತನ.

– ಕಾಳಸಂತೆಯಲ್ಲಿ ದಿನಸಿ ವಸ್ತುಗಳನ್ನು ಮಾರಾಟ ಮಾಡಿದರೆ ಕಠಿಣ ಕ್ರಮ.

– ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 1340 ಕೋಟಿ ರೂಪಾಯಿಗಳ ಅನುದಾನ.

Advertisement

Udayavani is now on Telegram. Click here to join our channel and stay updated with the latest news.

Next