Advertisement

ಯುವಜನರಿಗೆ ಕೋವಿಡ್‌ 19 ಬಾಧಿಸದು ಎನ್ನುವುದು ತಪ್ಪು ಕಲ್ಪನೆ

10:07 AM Mar 21, 2020 | Hari Prasad |

ಯುವಜನರಿಗೆ ಕೋವಿಡ್ 19 ವೈರಸ್ ಬಾಧಿಸದು ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಹೆಚ್ಚು ತೊಂದರೆ, ಹೀಗೆಂದು ತಿಳಿದುಕೊಂಡಿದ್ದರೆ ತಪ್ಪು ಎಂದು ಅಧ್ಯಯನವೊಂದು ಹೇಳಿದೆ. ಅಮೆರಿಕದ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌ ನಡೆಸಿದ ಅಧ್ಯಯನದ ಪ್ರಕಾರ, ಕೊರೊನಾದಿಂದ ಯುವ ಜನರಿಗೇ ಹೆಚ್ಚು ಬಾಧಿತವಾಗುತ್ತದೆ.

Advertisement

ಈ ಸಂಸ್ಥೆಯ ಅಧ್ಯಯನದ ಪ್ರಕಾರ, 508 ಆಸ್ಪತ್ರೆಯಲ್ಲಿ ದಾಖಲಾಗಿರುವ ಶೇ.20ರಷ್ಟು ಮಂದಿ ಯುವಕರೇ ಆಗಿದ್ದಾರೆ. ಅಂದರೆ 20-44 ವರ್ಷ ವಯೋಮಿತಿಯವರು. ಶೇ.18ರಷ್ಟು ಮಂದಿ 44-55 ವರ್ಷ ವಯೋಮಿತಿಯವರು. ಅಂದರೆ 55 ವರ್ಷಕ್ಕಿಂತ ಕಡಿಮೆ ವ್ಯಕ್ತಿಗಳೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ಯುವ ಜನರಿಗೆ ಹೆಚ್ಚು ಅಪಾಯ ಉಂಟಾಗಲಾರದು ಎಂದು ನಂಬಿಕೆ ಇದ್ದರೂ, ಸೋಂಕಿನಿಂದ ಬಾಧಿತರಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿರುವವರ ಪೈಕಿ ಸಣ್ಣ ವಯಸ್ಸಿನವರ ಪ್ರಮಾಣವೇ ಹೆಚ್ಚು. ಮಕ್ಕಳಿಗೆ ವಯಸ್ಕರಿಗೆ ಹೋಲಿಕೆ ಮಾಡಿದರೆ ಕಡಿಮೆ ಅಪಾಯ ಉಂಟಾಗುತ್ತದೆ. 0-19 ವಯೋಮಿತಿಯವರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.1ಕ್ಕಿಂತ ಕಡಿಮೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next