Advertisement

ಬಾಂಗ್ಲಾದ ಮೂವರು ಕ್ರಿಕೆಟಿಗರಿಗೆ ಕೋವಿಡ್-19 ಪಾಸಿಟಿವ್‌

12:32 AM Jun 21, 2020 | Sriram |

ಬಾಂಗ್ಲಾದೇಶದ ಕ್ರಿಕೆಟಿಗರು ಕೋವಿಡ್ ಭೀತಿಗೆ ಸಿಲುಕಿದ್ದಾರೆ. ಮಾಜಿ ನಾಯಕ ಮಶ್ರಫೆ ಮೊರ್ತಜಾ, ಸ್ಪಿನ್ನರ್‌ ನಜ್ಮುಲ್‌ ಇಸ್ಲಾಮ್‌ ಮತ್ತು ಮಾಜಿ ಆರಂಭಕಾರ ನಫೀಸ್‌ ಇಕ್ಬಾಲ್‌ಅವರಿಗೆ ಕೋವಿಡ್-19 ಪಾಸಿಟಿವ್‌ ಇರುವುದು ದೃಢಪಟ್ಟಿದೆ.

Advertisement

ಮೊದಲು ಸ್ವತಃ ನಫೀಸ್‌ ಇಕ್ಬಾಲ್‌ ಅವರೇ ಇದನ್ನು ತಿಳಿಸಿದರು. ಸದ್ಯ ಅವರು ಚಿತ್ತಗಾಂಗ್‌ ನಿವಾಸದಲ್ಲಿ ಐಸೊಲೇಶನ್‌ನಲ್ಲಿದ್ದಾರೆ ಎಂದು “ದ ಡೈಲಿ ಸ್ಟಾರ್‌’ ವರದಿ ಮಾಡಿದೆ.

ಬಳಿಕ ಮಶ್ರಫೆ ಮೊರ್ತಜಾ ಅವರ ಫ‌ಲಿತಾಂಶವೂ ಪಾಸಿಟಿವ್‌ ಬಂದಿ ರುವುದು ದೃಢಪಟ್ಟಿತು. ಅವರೀಗ ಢಾಕಾದಲ್ಲಿರುವ ನಿವಾಸದಲ್ಲಿ ಸೆಲ್ಫ್ -ಐಸೊಲೇಶನ್‌ನಲ್ಲಿದ್ದಾರೆ ಎಂದು ಕಿರಿಯ ಸಹೋದರ ಮೊರ್ಸಲಿನ್‌ ಬಿನ್‌ ಮೊರ್ತಜಾ ತಿಳಿಸಿದರು.

“ಕಳೆದೆರಡು ದಿನಗಳಿಂದ ಅಣ್ಣನ ಆರೋಗ್ಯ ಸರಿ ಇರಲಿಲ್ಲ. ಕೋವಿಡ್ ಟೆಸ್ಟ್‌ಗೆ ಒಳಗಾದಾಗ ಪಾಸಿಟಿವ್‌ ಇರುವುದು ಕಂಡುಬಂತು’ ಎಂಬು ದಾಗಿ ಮೊರ್ಸಲಿನ್‌ ಹೇಳಿದರು.

ತಮಿಮ್‌ ಇಕ್ಬಾಲ್‌ ಸೋದರ
ಬಲಗೈ ಆರಂಭಿಕ ಆಟಗಾರನಾಗಿ ರುವ ನಫೀಸ್‌ ಇಕ್ಬಾಲ್‌ 2003ರಲ್ಲಿ ರಾಷ್ಟ್ರೀಯ ಕ್ರಿಕೆಟ್‌ ತಂಡವನ್ನು ಪ್ರವೇ ಶಿಸಿದ್ದರು. ನಫೀಸ್‌ ಬಾಂಗ್ಲಾದ ಸ್ಟಾರ್‌ ಆರಂಭಕಾರ ತಮಿಮ್‌ ಇಕ್ಬಾಲ್‌ ಅವರ ಸಹೋದರ.

Advertisement

ಕಳೆದ ವಾರ ಬಾಂಗ್ಲಾದೇಶ ತಂಡದ ಡೆವಲಪ್‌ಮೆಂಟ್‌ ಕೋಚ್‌ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗನೂ ಆಗಿರುವ ಆಶಿಕ್‌ ಉರ್‌ ರೆಹಮಾನ್‌ ಅವರಲ್ಲೂ ಕೋವಿಡ್ ಪಾಸಿಟಿವ್‌ ಕಂಡುಬಂದಿತ್ತು. ಈಗ ಇವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಾಂಗ್ಲಾ ಮಂಡಳಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next