Advertisement

ಮತ್ತೆ 16 ಪ್ರಕರಣ: ಉಡುಪಿಯಲ್ಲಿ ಶತಕ ಬಾರಿಸಿದ ಕೋವಿಡ್-19 ಸೋಂಕು

05:37 PM May 25, 2020 | keerthan |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಆಯಕಟ್ಟಿನ ಜಾಗಗಳಿಗೆ ದಾಳಿ ಮಾಡುತ್ತಿದೆ. ಪೊಲೀಸ್ ಠಾಣೆ , ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯ ಸಿಬ್ಬಂದಿಗೆ ಸೋಂಕು ತಾಗಿದ ಬಳಿಕ ಸದ್ಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಸೋಂಕು ದೃಢವಾಗಿದೆ.

Advertisement

ಇಂದು ಮಧ್ಯಾಹ್ನದ ಬಳಿಕ ಮತ್ತೆ 16 ಜನರಿಗೆ ಸೋಂಕು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸೋಂಕು ದೃಢವಾದವರ ಸಂಖ್ಯೆ32 ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿದ್ದು 108 ಆಗಿದೆ.

ಇಂದು ಸಂಜೆ ವರದಿಯಾದ 16 ಪ್ರಕರಣಗಳ ಪೈಕಿ 13 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.  ಇದರಲ್ಲಿ ಒಂದು ವರ್ಷದ ಮಗುವೂ ಸೇರಿದೆ. ಸೋಂಕಿತ ಸಂಖ್ಯೆ 1435ರ ಸಂಪರ್ಕದಿಂದ 65 ವರ್ಷದ ಮಹಿಳೆಗೆ ಸೋಂಕು ತಾಗಿದ್ದು, ಕಂಟೈನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಓರ್ವ ಸೋಂಕಿಗೆ ತುತ್ತಾಗಿದ್ದಾರೆ.

ಕಳೆದೆರಡು ವಾರಗಳ ಹಿಂದೆ ಕೇವಲ ಮೂರು ಇದ್ದ ಜಿಲ್ಲೆಯ ಸೋಂಕಿತರ ಸಂಖ್ಯೆ ಇಂದು ನೂರರ ಗಡಿ ದಾಟಿದೆ. ಮೂವರು ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ಮರಳಿದ್ದರೆ, ಓರ್ವ ಸಾವನ್ನಪ್ಪಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next