ನವದೆಹಲಿ: ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಶುಕ್ರವಾರ ಸೀಶೆಲ್ಸ್ ಮತ್ತು ಮಯನ್ಮಾರ್ ದೇಶಗಳು ಸ್ವೀಕರಿಸಲಿವೆ. ಅಲ್ಲಿನ ಕಾಲಮಾನದ ಪ್ರಕಾರ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೀಶೆಲ್ಸ್ 50,000 ಡೋಸ್ ಲಸಿಕೆಗಳನ್ನು ಪಡೆಯಲಿದ್ದು, ಮ್ಯಾನ್ಮಾರ್‌ಗೆ ಭಾರತ ಕಳುಹಿಸುವ ಲಸಿಕೆಯ 1.5 ಮಿಲಿಯನ್ ಡೋಸ್ ಸಿಗಲಿದೆ.
ಇದನ್ನೂ ಓದಿ: ‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ
ಅಲ್ಲಿನ ಜನಸಂಖ್ಯೆ 97,000 ಆಗಿರುವುದರಿಂದ ಈ ಪ್ರಮಾಣ ಗಮನಾರ್ಹವಾಗಿದೆ ಎನ್ನಲಾಗುತ್ತಿದೆ. ಇನ್ನು, ಸೀಶೆಲ್ಸ್ ಭಾರತೀಯ ಲಸಿಕೆಗಳನ್ನು ಉಡುಗೊರೆಯನ್ನಾಗಿ ಪಡೆದ ಎರಡನೇ ದ್ವೀಪ ರಾಷ್ಟ್ರವಾಗಲಿದೆ.
ನೆರೆಯ ಆರು ದೇಶಗಳಾದ ಭೂತಾನ್,ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್ ಮತ್ತು ಸೀಶೆಲ್ಸ್ ಗಳಿಗೆ ಲಸಿಕೆಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ.ಈಗಾಗಲೇ,ನೇಪಾಳಕ್ಕೆ 1 ಮಿಲಿಯನ್ ಮತ್ತು ಬಾಂಗ್ಲಾದೇಶಕ್ಕೆ 20 ಲಕ್ಷ ಲಸಿಕೆಗಳು ದೊರೆತಿವೆ. ಭೂತಾನ್ ಮತ್ತು ಮಾಲ್ಡೀವ್ಸ್ ಬುಧವಾರ(ಜ.20) ಭಾರತೀಯ ಲಸಿಕೆಗಳ ಉಡುಗೊರೆಯನ್ನು ಪಡೆದ ಮೊದಲ ಎರಡು ದೇಶಗಳಾಗಿವೆ, ಭೂತಾನ್ 150,000 ಡೋಸ್ ಪಡೆದರೆ, ಮಾಲ್ಡೀವ್ಸ್ 100,000 ಡೋಸ್ ಪಡೆಯಿತು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ’ಕೋವಿಶೀಲ್ಡ್’ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ: “ಪ್ರೋಟೀನ್ ಯುಕ್ತ ಆಹಾರ ಸೇವನೆ : ಪಥ್ಯೆಯಿಲ್ಲದೆ ಬೊಜ್ಜು ಕರಗಲು ಸಾಧ್ಯ”