ಮಾಸ್ಕೋ: ಚೀನಾದ ಹಲವೆಡೆ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಷ್ಯಾದಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲಿ ಹೆಚ್ಚಳವಾದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ತುರ್ತು ಸೇವೆಯನ್ನು ಹೊರತುಪಡಿಸಿ 11 ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಮಂಗಳೂರು : ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್‌ನಿಂದ ಬಿದ್ದು ತಮಿಳುನಾಡು ಮೂಲದ ಯುವಕ ನಾಪತ್ತೆ
ರಷ್ಯಾ ಹಲವು ಲಸಿಕೆಗಳನ್ನು ಸ್ವಯಂ ಆಗಿ ಅಭಿವೃದ್ಧಿಪಡಿಸುತ್ತಿದ್ದರೂ ಕೂಡಾ ಕಡಿಮೆ ಲಸಿಕೆ ವಿತರಣೆ ಭಾರೀ ಕಡಿಮೆ ಪ್ರಮಾಣದಲ್ಲಿ ಆಗುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗತೊಡಗಿದ್ದು, ಗುರುವಾರ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 40,096ರಷ್ಟು ಪತ್ತೆಯಾಗಿದ್ದು, 1,159 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಠಿಣ ವಿಧದ ಲಾಕ್ ಡೌನ್ ಜಾರಿಗೊಳಿಸುವ ನಿರ್ಧಾರದಿಂದ ಅಧಿಕಾರಿಗಳು ದೂರ ಸರಿದಿದ್ದಾರೆ. ಆದರೆ ಗುರುವಾರದಿಂದ (ಅಕ್ಟೋಬರ್ 28) ನವೆಂಬರ್ 7ರವರೆಗೆ ಮಾಸ್ಕೋದಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು, ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಚಿಲ್ಲರೆ ವ್ಯಾಪಾರ ಮಳಿಗೆ, ರೆಸ್ಟೋರೆಂಟ್ ಗಳು, ಕ್ರೀಡೆಗಳು, ಸಿನಿಮಾ ಮಂದಿರಗಳನ್ನು ಬಂದ್ ಮಾಡಿಸಿದೆ. ಅದೇ ರೀತಿ ಶಾಲೆಗಳು, ಪ್ಲೇಯಿಂಗ್ ಸ್ಕೂಲುಗಳು ಬಂದ್ ಆಗಿದ್ದು, ಆಹಾರ ಮತ್ತು ಔಷಧಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ವರದಿ ವಿವರಿಸಿದೆ.