Advertisement

Covid ಹಿಮ್ಮೆಟ್ಟಿಸಲು ಯಶಸ್ವಿ ಮಾಕ್‌ಡ್ರಿಲ್‌

01:27 AM Apr 11, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಹೆಚ್ಚುತ್ತಿರುವ ನಡುವೆಯೇ ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಸೌಲಭ್ಯ ಗಳು ಸಿದ್ಧಗೊಂಡಿವೆ. ಸೋಮ ವಾರ ದೇಶಾ ದ್ಯಂತ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮಾಕ್‌ ಡ್ರಿಲ್‌ ನಡೆ ಸುವ ಮೂಲಕ ತಮ್ಮ ಸನ್ನದ್ಧತೆಯನ್ನು ಸ್ಪಷ್ಟಪಡಿಸಿವೆ.

Advertisement

ಕೇಂದ್ರ ಸರಕಾರದ ಸೂಚನೆಯಂತೆ ದೇಶಾ ದ್ಯಂತ ಆಸ್ಪತ್ರೆಗಳು ತಾವು ಸೇವೆಗೆ ಸಜ್ಜಾಗಿರುವುದನ್ನು ತೋರಿಸುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಿವೆ. ಈ ನಿಟ್ಟಿನಲ್ಲಿ ಗುಜರಾತ್‌ನ ಆಸ್ಪತ್ರೆಯಲ್ಲಿ ವಿನೂತನ ರೀತಿಯಲ್ಲಿ ಡ್ರಿಲ್‌ ನಡೆಸಲಾಗಿದ್ದು, ಅಣಕು ರೋಗಿಯನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುವ, ಆಮ್ಲಜನಕ ಪೂರೈಕೆ, ಪಿಪಿಇ ಕಿಟ್‌ ಧರಿಸಿರುವ ವೈದ್ಯರುಗಳ ಚಿತ್ರಣವನ್ನು ಪ್ರದರ್ಶಿಸಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ದಿಲ್ಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ತೆರಳಿ, ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಪರಿಸ್ಥಿತಿ ಹೇಗೆ ಬದಲಾದರೂ ದೇಶ ಅದನ್ನು ಎದುರಿಸಲು ಸಮರ್ಥವಾಗಿದೆ ಎನ್ನುವ ಸಂದೇಶ ಸಾರಿದ್ದಾರೆ. ಮುಂಬಯಿಯ ಎಲ್ಲ ಸರಕಾರಿ ಆಸ್ಪತ್ರೆ ಗಳಲ್ಲಿ ರೋಗಿಗಳು, ಸಿಬಂದಿ ಹಾಗೂ ವೀಕ್ಷಕರಿಗೂ ಮಾಸ್ಕ್ ಧಾರಣೆ ಕಡ್ಡಾಯ ಗೊಳಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಕೊವೊವ್ಯಾಕ್ಸ್‌ ಶೀಘ್ರ ಲಭ್ಯ
ಪ್ರಕರಣಗಳ ಸಂಖ್ಯೆ ಹೆಚ್ಚಳ ಗಮನದಲ್ಲಿಟ್ಟು ಕೊಂಡು ಸೀರಂ ಇನ್‌ಸ್ಟಿಟ್ಯೂಟ್‌ನ ಕೊವೊವ್ಯಾಕ್ಸ್‌ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ಬಳಕೆಗೆ ಅನುಮತಿ ನೀಡಲು ಸರಕಾರ ಯೋಜಿಸಿದೆ. ಶೀಘ್ರದಲ್ಲೇ ಕೋವಿನ್‌ ಪೋರ್ಟಲ್‌ನಲ್ಲಿ ಪ್ರತೀ ಡೋಸ್‌ಗೆ 225 ರೂ.ಗಳಂತೆ ಇದು ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

5,880 ಮಂದಿಗೆ ಸೋಂಕು
ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚು ತ್ತಿದ್ದು, ರವಿವಾರದಿಂದ ಸೋಮ ವಾರದ ವೇಳೆಗೆ ದೇಶದಲ್ಲಿ 5,580 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 35,199ಕ್ಕೆ ಏರಿಕೆಯಾಗಿದೆ. ಇದೇ ದಿನ 14 ಮಂದಿ ಮೃತಪಟ್ಟಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next