Advertisement

ಕೋವಿಡ್ 19  ದೀರ್ಘ ಕಾಲದ ಶ್ವಾಶಕೋಶ ಸಮಸ್ಯೆಗೆ ಕಾರಣವಾಗಬಹುದು : ಅಧ್ಯಯನ

07:54 PM May 27, 2021 | Team Udayavani |

ವಾಷಿಂಗ್ಟನ್ : ಕೋವಿಡ್ ಸೊಂಕಿಗೆ ಒಳಗಾದವರಿಗೆ ಮುಂದಿನ ದಿನಗಳಲ್ಲಿ ಶ್ವಾಸಕೊಶದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬ ಸಂಶೋಧನಾ ವರದಿಯೊಂದು ಹೊರ ಬಿದ್ದಿದೆ.

Advertisement

ಅಮೇರಿಕಾದ ಶೆಫೀಲ್ಡ್ ಮತ್ತು ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ವರದಿ ಹೊರ ಬಿದ್ದಿದ್ದು, ಅಧ್ಯಯನಕ್ಕೆ ಒಳಪಡಿಸಿದ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.

ಇದನ್ನೂ  ಓದಿ :   ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ ಮುಚ್ಚಿಡಲಾಗಿದೆ? ನ್ಯೂಯಾರ್ಕ್ ಟೈಮ್ಸ್ ವರದಿ ಆಧಾರರಹಿತ

ರೇಡಿಯಾಲಜಿ ಜರ್ನಲ್ ನಲ್ಲಿ ಪ್ರಕಟಗೊಂಡ ಅಮೇರಿಕಾದ ಶೆಫೀಲ್ಡ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ವರದಿಯು ಅಧ್ಯಯನಕ್ಕೆ ಒಳಪಡಿಸಿದವರಲ್ಲಿ ಹೆಚ್ಚಿನವರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದ್ದು, ಆದರೂ ಇದರ ಸತ್ಯಾಸತ್ಯತೆಯನ್ನು ಅವಲೋಕಿಸಲು ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಯಬೇಕು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಹೈಪರ್ ಪೋಲರೈಸ್ಡ್ ಕ್ಸೆನಾನ್ ಎಂಆರ್ ಐ (ಎಕ್ಸ್‌ ಎಂ ಆರ್ ಐ) ಸ್ಕ್ಯಾನ್‌ ಗಳು ಕೆಲವು ಕೋವಿಡ್ -19 ರೋಗಿಗಳ ಶ್ವಾಸಕೋಶದಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಅಸಹಜತೆಯನ್ನು ಉಂಟುಮಾಡಿದೆ.  ಸೋಂಕಿನಿಂದ ಗುಣಮುಖರಾಗಿ ಬಂದಾಗ ಅಡ್ಡ ಪರಿಣಾಮವಾಗಿ  ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದೆ.

Advertisement

ಸೋಂಕಿನಿಂದ ಗುಣಮುಖರಾಗಿ ಮೂರು, ಆರು ಕೆಲವೊಬ್ಬರಿಗೆ ಒಂಬತ್ತು ತಿಂಗಳುಗಳ ತನಕ ಈ­­­­­­ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಇದನ್ನೂ  ಓದಿ :   ಕ್ಯಾಂಟರ್‌ ಡಿಕ್ಕಿ : ಪೆಟ್ಟಿಗೆ ಅಂಗಡಿ ಧ್ವಂಸ

ಆಕ್ಸ್‌ ಫರ್ಡ್‌ ನ ಅಧ್ಯಯನದ ಪ್ರಧಾನ ತನಿಖಾಧಿಕಾರಿ ಪ್ರೊಫೆಸರ್ ಫರ್ಗುಸ್ ಗ್ಲೀಸನ್ ಪ್ರತಿಕ್ರಿಯಿಸಿ,  ಕೋವಿಡ್ ಸೋಂಕಿನ ದೀರ್ಘಕಾಲದ ಪರಿಣಾಮಗಳಿಂದಾಗಿ ಆಮ್ಲಜನಕವನ್ನು ಒಳಗೆ ತೆಗೆದುಕೊಳ್ಳುವ ಸಾಮರ್ಥ್ಯ ದುರ್ಬಲವಾಗುತ್ತದೆ.

“ಅನೇಕ ಕೋವಿಡ್ 19 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಹಲವು ತಿಂಗಳುಗಳ ನಂತರವೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ, ಅವರ ಸಿಟಿ ಸ್ಕ್ಯಾನ್‌ ಗಳು ತಮ್ಮ ಶ್ವಾಸಕೋಶಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸೂಚಿಸುತ್ತದೆ” ಎಂದು ಹೇಳಿದ್ದಾರೆ.

ಇನ್ನು, ನಾವು ಅಧ್ಯಯನಕ್ಕೆ ಒಳಪಡಿಸಿದವರೆಲ್ಲರಲ್ಲೂ ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದು ಆರಂಭಿಕ ಸಂಶೋಧನೆಯಾಗಿದ್ದು, ಇದುವರೆಗೆ ನಾವು ಅಧ‍್ಯಯನಕ್ಕೆ ಒಳಪಡಿಸಿದವರ ಪೈಕಿ ಶೇಕಡಾ 70 ರಷ್ಟು ಮಂದಿಯಲ್ಲಿ ಉಸಿರಾಟದ ಸಮಸ್ಯೆ ಹಾಘೂ ಶ್ವಾಸಕೋಶದ ಸಮಸ್ಯೆ ಕಂಡು ಬಂದಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನ ಆಗಬೇಕು. ಆಗ ಮಾತ್ರ ನಿಖರವಾಗಿ ಕೋವಿಡ್ ಸೋಂಕಿಗೆ ಒಳಗಾದವರಲ್ಲಿ ಶ್ವಾಶಕೊಶದ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆ  ಕಂಡು ಬರುತ್ತದೆ ಎಂದು ನಿಖರವಾಗಿ ಹೇಳು ಸಾಧ್ಯ ಎಂದು ಗ್ಲೀಸನ್ ಹೇಳಿದ್ದಾರೆ.

ಇದನ್ನೂ  ಓದಿ :   ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಔಷಧಿ ಆಂಫೊಟೆರಿಸಿನ್ ಬಿ ಪ್ರತಿ ಬಾಟಲಿಗೆ 1200 ರೂ..!

Advertisement

Udayavani is now on Telegram. Click here to join our channel and stay updated with the latest news.

Next