Advertisement

ಕೋವಿಡ್ 19: ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ: ಜುಲೈ 31ರವರೆಗೂ ವಿಸ್ತರಣೆ

01:21 PM Jun 30, 2021 | Team Udayavani |

ನವದೆಹಲಿ: ಕೋವಿಡ್ 19 ಸೋಂಕು, ಡೆಲ್ಟಾ ಪ್ಲಸ್ ರೂಪಾಂತರಿ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಯಾನ ಸಂಚಾರವನ್ನು ಜುಲೈ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬುಧವಾರ (ಜೂನ್ 30) ಸುತ್ತೋಲೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ರಮೇಶ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ : ಭೈರತಿ ಬಸವರಾಜ್

ಈ ಹಿಂದೆ ನಿಗದಿಯಾದಂತೆ ಸುಮಾರು 15 ತಿಂಗಳ ಬಳಿಕ ವಾಣಿಜ್ಯ ಸಾಗರೋತ್ತರ ವಿಮಾನ ಸಂಚಾರ ನಿಷೇಧ ಜೂನ್ 30ರಂದು
ಕೊನೆಗೊಳ್ಳಬೇಕಿತ್ತು. ಸರಕು ಸಾಗಾಟ ವಿಮಾನ ಮತ್ತು ಆಯ್ದ ದೇಶಗಳ ಜತೆಗಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ವಿಮಾನ ಸಂಚಾರ ಎಂದಿನಂತೆ ಮುಂದುವರಿಯಲಿದೆ ಎಂದು ನಾಗರಿಕ ವಿಮಾನಯಾನ ಕಾವಲು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.

26.06.2020ರ ಸುತ್ತೋಲೆಯ ಭಾಗಶಃ ಮಾರ್ಪಾಡಿನಲ್ಲಿ, ಭಾರತದಿಂದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಯಾನ ಸಂಚಾರ ನಿಷೇಧವನ್ನು ಜುಲೈ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದು ಡಿಜಿಸಿಎ ಸುತ್ತೋಲೆಯಲ್ಲಿ ತಿಳಿಸಿದೆ.

ಕೋವಿಡ್ ಪ್ರಕರಣಗಳ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ ಎಂದು ಡಿಜಿಸಿಎ ಸುತ್ತೋಲೆಯಲ್ಲಿ ವಿವರಿಸಿದೆ. ಕೋವಿಡ್ 19 ಸೋಂಕು ಹರಡಲು ಆರಂಭವಾದ ನಂತರ 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next