Advertisement

ಮೊದಲ ವಿಶ್ವಯುದ್ಧ ಮೀರಿಸಿದ ಅಮೆರಿಕ ; ಭಾರೀ ಪ್ರಮಾಣದಲ್ಲಿ ಏರಿದ ಸೋಂಕು ಸಾವಿನ ಸಂಖ್ಯೆ

02:14 AM Jun 18, 2020 | Hari Prasad |

ಬೀಜಿಂಗ್‌/ವಾಷಿಂಗ್ಟನ್: ಚೀನದಲ್ಲಿ ಶುರುವಾದ ಕೋವಿಡ್ ವೈರಸ್‌ ಈಗ ಅಮೆರಿಕದ ವ್ಯವಸ್ಥೆಯನ್ನೇ ತಲೆ ಕೆಳಗೆ ಮಾಡುತ್ತಿದೆ.

Advertisement

ಈಗ ಜಗತ್ತಿನ ಹಲವೆಡೆ ಸೋಂಕಿನ ಎರ­ಡನೇ ಆವೃತ್ತಿ ಶುರುವಾ­ಗಿದೆ ಎಂಬ ಆತಂಕದ ನಡುವೆಯೇ ಜಗತ್ತಿನ ಆಗುಹೋಗು­ಗಳನ್ನು ನಿಯಂತ್ರಿ­ಸುವ ಛಾತಿಯುಳ್ಳ ಅಮೆರಿಕದಲ್ಲಿ ಸೋಂಕಿ­ನಿಂದಾಗಿ ಅಸುನೀಗಿದವರ ಸಂಖ್ಯೆ ಮೊದಲ ವಿಶ್ವ ಮಹಾ­ಯುದ್ಧದಲ್ಲಿ ಅಸುನೀಗಿದವರಿ­­ಗಿಂತ ಹೆಚ್ಚಾ­ಗಿದೆ ಎಂಬ ಆಘಾತ­ಕಾರಿ ಮಾಹಿತಿ ಹೊರಬಿದ್ದಿದೆ.

ಆ ಸಂದರ್ಭದಲ್ಲಿ 1,17,000 ಮಂದಿ ಜೀವ ಕಳೆದುಕೊಂಡಿದ್ದರು. ಸೋಂಕಿ­ನಿಂದಾಗಿ ಅಸುನೀಗಿದವರ ಸಂಖ್ಯೆ 1.19 ಲಕ್ಷವನ್ನು ಮೀರಿಸಿದೆ. ಇದರ ಜತೆಗೆ ಐದು ಪ್ರಾಂತ್ಯಗಳಾಗಿರುವ ಅರಿಜೋನಾ, ಫ್ಲಾರಿಡಾ, ಓಕ್ಲಹಾಮಾ, ಆರೇಗಾನ್‌, ಟೆಕ್ಸಸ್‌­ಗಳಲ್ಲಿ ಹೊಸತಾಗಿ ದಾಖಲೆ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿರು­ವುದು ಆತಂಕಕ್ಕೆ ಕಾರಣವಾಗಿದೆ.

ಸೇನೆ ನಿಯೋಜನೆ
ಮತ್ತೆ ಕೋವಿಡ್ ಸೋಂಕು ಕಾಣಿಸಿ­ಕೊಂಡ ನ್ಯೂಜಿಲೆಂಡ್‌ನ‌ಲ್ಲಿ ಗಡಿ ಪ್ರದೇಶ­ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆಯನ್ನು ಸಮ­ರ್ಪಕವಾಗಿ ನಿರ್ವಹಿಸಲು ಸೇನೆಯನ್ನು ನಿಯೋ­ಜಿಸ­ಲಾ­ಗಿದೆ. ಈ ಬಗ್ಗೆ ಪ್ರಧಾನಿ ಜೆಸಿಡಾ ಆರ್ಡೆನ್‌ ಹಿರಿಯ ಸೇನಾ­ಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧಾರ ಪ್ರಕಟಿಸಿದ್ದಾರೆ.

ಚೀನಾದಲ್ಲಿ ರೈಲು, ವಿಮಾನ ಬಂದ್‌
ಮತ್ತೂಂದೆಡೆ ಚೀನದಲ್ಲಿ 90 ಸಾವಿರ ಮಂದಿಗೆ ಸಾಮೂ­ಹಿಕವಾಗಿ ಸೋಂಕು ಪರೀಕ್ಷೆ ನಡೆಸುತ್ತಿರು­ವಂ­ತೆಯೇ ರೈಲು, ವಿಮಾನಯಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

Advertisement

ರಾಜಧಾನಿ ಬೀಜಿಂಗ್‌ನ ಎರಡು ವಿಮಾನ ನಿಲ್ದಾಣಗಳು 1,255 ಸ್ಥಳೀಯ ವಿಮಾನಗಳ ಹಾರಾಟ ರದ್ದು ಮಾಡಿವೆ. ಇದರ ಜತೆಗೆ ರೈಲು ಪ್ರಯಾಣ­ಕ್ಕಾಗಿ ಟಿಕೆಟ್‌ ಕಾಯ್ದಿರಿಸಿ­ದವರಿಗೆ ಹಣ ವಾಪಸ್‌ ಮಾಡುವ ಪ್ರಕ್ರಿಯೆಯೂ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next