Advertisement
3ನೇ ಹಂತಕ್ಕೆ 3 ಲಸಿಕೆಗಳು: ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಒಟ್ಟು 19 ಲಸಿಕೆಗಳ ಅಭಿವೃದ್ಧಿ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಆಸ್ಟ್ರಾಝೆನೆಕಾ ಮತ್ತು ಸಿನೋವಾಕೇರ್ ಎಂಬ ಎರಡು ಲಸಿಕೆಗಳು ಮಾನವನ ಮೇಲಿನ ಪ್ರಯೋಗದ ಮೂರನೇ ಹಂತ ತಲುಪಿವೆ. ಈಗ ಚೀನದ ಸಿನೋವ್ಯಾಕ್ ಬಯೋಟೆಕ್ ಕಂಪನಿ ಕೂಡ ಈ ಸಾಧನೆ ಮಾಡಿದ್ದು, ತನ್ನ ಲಸಿಕೆಯನ್ನು ಕೊನೆಯ ಹಂತದ ಪ್ರಯೋಗಕ್ಕೆ ಒಳಪಡಿಸುವ ಪ್ರಕ್ರಿಯೆ ಆರಂಭಿಸಿದೆ. ಇನ್ನು, ಪಿಫಿಜರ್, ನೋವಾವ್ಯಾಕ್ಸ್, ಕ್ಯಾಡಿಲಾ ಹೆಲ್ತ್‌ಕೇರ್ ಸೇರಿದಂತೆ 6 ಸಂಸ್ಥೆಗಳು ಲಸಿಕೆಯ 2ನೇ ಹಂತದ ಪ್ರಯೋಗ ನಡೆಸುತ್ತಿವೆ.
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸೋಮವಾರದಿಂದ ಮಂಗಳವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 22,252 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸತತ 5ನೇ ದಿನವೂ 20 ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ಜತೆಗೆ, ಒಂದೇ ದಿನ 467 ಮಂದಿ ಬಲಿಯಾಗಿ, ಮೃತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟಿನಲ್ಲಿ ಭಾರತದಲ್ಲಿ ಒಂದು ಲಕ್ಷ ಸೋಂಕಿತರು ಪತ್ತೆಯಾಗಲು 110 ದಿನಗಳು ತೆಗೆದುಕೊಂಡರೆ, ಕೇವಲ 49 ದಿನಗಳಲ್ಲಿ ಈ ಸಂಖ್ಯೆ 7 ಲಕ್ಷ ದಾಟಿದೆ. ಇದೇ ವೇಳೆ, 4.39 ಲಕ್ಷ ಮಂದಿ ಗುಣಮುಖರಾಗಿದ್ದು, ಗುಣಮುಖ ಪ್ರಮಾಣ ಶೇ.61.13ಕ್ಕೇರಿಕೆಯಾಗಿದೆ.