ನ್ಯೂಯಾರ್ಕ್: ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆ ಇದೀಗ ಹೊಸದಾಗಿ ಪತ್ತೆಯಾಗಿರುವ ಕೋವಿಡ್ ಸೋಂಕಿನ ರೂಪಾಂತರ ಆಲ್ಫಾ ಮತ್ತು ಡೆಲ್ಟಾ ವಿರುದ್ಧ ಪರಿಣಾಮಕಾರಿ ರಕ್ಷಣೆ ನೀಡುತ್ತದೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!
ಕೋವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಗಳ ರಕ್ತದ ಸೀರಮ್ ಅಧ್ಯಯನದ ಮೂಲಕ ಜನರ ದೇಹದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುವ ರೋಗನಿರೋಧಕ ಶಕ್ತಿಗಳು ಬ್ರಿಟನ್ ಮತ್ತು ಭಾರತದಲ್ಲಿ ಮೊದಲು ಪತ್ತೆಯಾದ ಬಿ.1351 ಮತ್ತು ಬಿ.1.617.2 ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ ಎಂದು ಎನ್ ಐಎಚ್ ವಿವರಿಸಿದೆ.
ಅಮೆರಿಕದ ಉನ್ನತ ಆರೋಗ್ಯ ಸಂಶೋಧನಾ ಸಂಸ್ಥೆ ಭಾರತದ ಜತೆಗೆ ಬಲವಾದ ವೈಜ್ಞಾನಿಕ ಸಹಯೋಗದ ಇತಿಹಾಸ ಹೊಂದಿದೆ. ಅಲ್ಲದೇ ಕೋವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಿ ಅಭಿವೃದ್ದಿಪಡಿಸಲು ಆರ್ಥಿಕ ನೆರವನ್ನು ನೀಡಿದೆ. ಇದರಿಂದಾಗಿ ಭಾರತ ಹಾಗೂ ಇತರ ದೇಶಗಳಲ್ಲಿ ಅಂದಾಜು 25 ಮಿಲಿಯನ್ ಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೋವಿಡ್ ರೂಪಾಂತರಿ ಸೋಂಕು ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಎನ್ ಐಎಚ್ ಪ್ರತಿಪಾದಿಸಿದೆ.