ಬೆಂಗಳೂರು: ಕೊವಾಕ್ಸಿನ್ ಕೋವಿಡ್ ಲಸಿಕೆಯು ಇಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನ ಆನಂದ್ ರಾವ್ ವೃತ್ತದ ಆರೋಗ್ಯ ಇಲಾಖೆಯ ಹಳೆ ಕಚೇರಿಯ ರಾಜ್ಯ ಸಂಗ್ರಹಾರದಲ್ಲಿ ಶೇಖರಣೆ ಮಾಡಲಾಗಿದೆ.
ಇಲಾಖೆ ಲಸಿಕಾಕರಣ ವಿಭಾಗದ ಉಪನಿರ್ದೇಶಕಿ ಡಾ.ಬಿ.ಎನ್.ರಜನಿ ಲಸಿಕೆಯನ್ನು ಬರಮಾಡಿಕೊಂಡರು. ನಗರಕ್ಕೆ 20 ಸಾವಿರ ಡೋಸ್ ಬಂದಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಲಸಿಕೆಯಾಗಿ ಕೊವಿಶೀಲ್ಡ್ ನೀಡಲಾಗುತ್ತದೆ. ತುರ್ತು ಲಭ್ಯತೆಗೆ ಕೊವ್ಯಾಕ್ಸಿನ್ ಬಳಸಲಾಗುತ್ತದೆ.
ಇದನ್ನೂ ಓದಿ:ದೂರಿದ್ದರೆ ದೆಹಲಿಗೆ ಹೋಗಿ ಕೊಡಿ, ನನಗೇನು ಅಭ್ಯಂತರವಿಲ್ಲ: ಬಿಎಸ್ ವೈ ಖಡಕ್ ನುಡಿ
ಮಂಗಳವಾರವಷ್ಟೇ ಇದೇ ಸಂಗ್ರಹಾರಕ್ಕೆ ಪುಣೆಯಿಂದ ಕೊವಿಶೀಲ್ಡ್ ಕೊರೊನಾ ಲಸಿಕೆ 6.47 ಲಕ್ಷ ಡೋಸ್ ಬಂದಿತ್ತು. ಅಲ್ಲದೆ, ಬುಧವಾರ ಬೆಳಗಾವಿಗೆ 1.47 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ಬಂದಿತ್ತು.
ಈವರೆಗೂ ರಾಜ್ಯಕ್ಕೆ ಬಂದಿರುವ ಒಟ್ಟು ಲಸಿಕೆ
ಕೊವಿಶೀಲ್ಡ್ – 7.94 ಲಕ್ಷ ಡೋಸ್.
ಕೊವಾಕ್ಸಿನ್ – 20 ಸಾವಿರ.
ಒಟ್ಟು – 8.14 ಲಕ್ಷ ಡೋಸ್ ಲಸಿಕೆ.