Advertisement
ಶುಕ್ರವಾರ ತಾಲ್ಲೂಕಿನ ಕುಡುಮಲ್ಲಿಗೆ ಹಾಗೂ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ l ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ತರಬೇಕಿದೆ. ಇಲ್ಲಿ ಕಾಂಗ್ರೆಸ್ ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ, ರೀತಿ ಆ ಯೋಜನೆಗಳನ್ನು ಎಲ್ಲಾ ಜಾತಿ ಧರ್ಮದ ಜನರಿಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಬೇಕಿದೆ ಎಂದರು.
Related Articles
Advertisement
ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಬೆನ್ನೆಲುಬಾಗಿ ನಿಂತಿದೆ. ಇಲ್ಲಿ ಪಕ್ಷಾತೀತವಾಗಿ ಸಮಾಜದ ಎಲ್ಲ ವರ್ಗದ ಜನರಿಗೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಅದೇ, ರೀತಿ ಜಿಲ್ಲೆಯಲ್ಲಿ ಸರ್ಕಾರದ ಆಶಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಬಿಜೆಪಿಯ ಕಪಿ ಮುಷ್ಠಿಯಿಂದ ದೇಶವನ್ನು ಉಳಿಸಬೇಕಿದೆ. ಇಲ್ಲಿ ಬದಲಾವಣೆಯ ಉದ್ದೇಶದಿಂದ ಈ ಚುನಾವಣೆ ನಡೆಯುತ್ತಿದೆ. ಹತ್ತು ವರ್ಷಗಳ ಕಾಲ ದೇಶವನ್ನು ಬಿಜೆಪಿ ಆಳಿದೆ. ಅದರೆ, ರೈತರಿಗೆ ನೀಡಿದ ಕೊಡುಗೆ ಹಾಗೂ ಸುಳ್ಳು ಭರವಸೆಗಳ ಬಗ್ಗೆ ಜನರು ಯೋಚಿಸಬೇಕು ಎಂದರು.
ದೇಶದಲ್ಲಿಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ಕೇಂದ್ರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನ ಸಮಾನ್ಯರಿಗೆ ತಲುಪಲಿವೆ. ಅದೇ, ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಬೇಕು ಎಂದರು.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ, ಜನರು ಕಿವಿಕೊಡಕೂಡದು ಎಂದರು.
ನಟ ಶಿವರಾಜ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ ಮತ್ತು ಕಡ್ತೂರು ದಿನೇಶ್, ಟಿ.ಎಲ್.ಸುಂದರೇಶ್, ಜಿನಾ ವಿಕ್ಟರ್, ಬಂಡೆ ವೆಂಕಟೇಶ, ಅಮರನಾಥ್ ಶೆಟ್ಟಿ, ಸುಶೀಲ ಶೆಟ್ಟಿ, ಬಿ.ಗಣಪತಿ, ಪುಟೊಡ್ಲು ರಾಘವೇಂದ್ರ, ಕೃಷ್ಣಮೂರ್ತಿ, ಚಂದ್ರಶೇಖರ್, ಸಂದೀಪ, ಸಂಜಯ್, ಬಿ.ಟಿ.ನಾಗರಾಜ, ಡಿ.ಮಂಜುನಾಥ, ನಾಗರಾಜ ಶೆಟ್ಟಿ, ನಾಗರಾಜ ಆಚಾರ್ಯ, ಕೆ.ಎಲ್.ರವೀಂದ್ರ, ಸಂಜಯ್ ಶ್ರೀನಿವಾಸ ಹುಣಸೆಬೈಲು, ರಾಜೇಂದ್ರ ತಲವಡಗ, ರಮೇಶ್ ತಲವಡಗ ಇದ್ದರು.