Advertisement
ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡ್- ಕಲ್ಪನೆ ನಿವಾಸಿ ಸಚ್ಚೀಂದ್ರ ಮೇಸ್ತ್ರಿ ಹಾಗೂ ಜಯಲಕ್ಷ್ಮೀ ದಂಪತಿ ಗೆರಟೆಯ ಮೂಲಕ ಕಲಾಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಸಚ್ಚೀಂದ್ರ ಲಾಕ್‌ಡೌನ್ ವೇಳೆ ಮನೆಯಲ್ಲೇ ಕೂತಿದ್ದರು. ಜೀವನ ನಿರ್ವಹಣೆಗಾಗಿ ಯಾವುದಾದರೊಂದು ಉದ್ಯೋಗ ಅನಿವಾ ರ್ಯವಾಗಿತ್ತು. ಹೀಗಾಗಿ ಇಟ್ಟಿಗೆ ಮಾಡುವ ವೃತ್ತಿಯನ್ನು ಆರಂಭಿಸಿದರು. ಇಂತಹ ಉದ್ಯಮಗಳು ದೊಡ್ಡ ಮಟ್ಟದ ಬಂಡವಾಳದೊಂದಿಗೆ ನಡೆಯುವುದರಿಂದ ಅವರಿಗೆ ಇದನ್ನು ನಿರ್ವಹಿಸುವುದು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಸಚ್ಚೀಂದ್ರ ಅವರ ಪತ್ನಿ ಜಯಲಕ್ಷ್ಮೀ ಯೂಟ್ಯೂಬ್‌ನಲ್ಲಿ ಗೆರಟೆಯ ಮೂಲಕ ಕಲಾಕೃತಿ ಮಾಡುವುದನ್ನು ನೋಡಿ ಅಭ್ಯಾಸ ಮಾಡಿಕೊಂಡರು. ಸಜೀಪಮೂಡದ ಕೊಳಕೆಯವರಾದ ಸಚ್ಚೀಂದ್ರ ಪ್ರಸ್ತುತ ಕುಕ್ಕಾಜೆ ಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಪತ್ನಿ, ಪತ್ನಿಯ ತಾಯಿ, ಮತ್ತೂಬ್ಬರು ಸಂಬಂಧಿ ಸೇರಿ ನಾಲ್ಕು ಮಂದಿ ಇದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದೆವು. ಹೀಗಾಗಿ ಇಂತಹ ಕಲಾಕೃತಿಗಳನ್ನು ಮಾಡುವ ಆಲೋಚನೆ ಮಾಡಿದ್ದೇವೆ. ಪ್ರಸ್ತುತ ಮೇಸ್ತ್ರಿ ಕೆಲಸದ ಜತೆಗೆ ಇದನ್ನು ನಿರ್ವಹಿಸುತ್ತೇವೆ. ಸಾಲ ಮಾಡಿ ಯಂತ್ರಗಳನ್ನು ತಂದಿದ್ದು, ಅದನ್ನು ಜೋಡಿಸಬೇಕಷ್ಟೆ. ಜತೆಗೆ ಕಲಾಕೃತಿಗಳಿಗೆ ಮಾರುಕಟ್ಟೆ ವಿಚಾರ ಮುಂದೆ ನಿರ್ಧಾರವಾಗಬೇಕಷ್ಟೆ.
-ಸಚ್ಚೀಂದ್ರ ಮೇಸ್ತ್ರಿ, ಕಲಾಕೃತಿಗಳ ರಚನೆಕಾರ