Advertisement

ಹೈದರಾಬಾದ್‌: ಮಗು ಅಪಹರಿಸಿದ ದಂಪತಿ ಸೆರೆ, ಮಗು ಪಾರು

04:48 PM Oct 04, 2017 | udayavani editorial |

ಹೈದರಾಬಾದ್‌ : ಐದು ತಿಂಗಳ ಹೆಣ್ಣು  ಮಗವನ್ನು ಅಪಹರಿಸಿದ ಆರೋಪದ ಮೇಲೆ ನಗರ ಪೊಲೀಸರು ರಾಜೇಂದ್ರನಗರದ ದಂಪತಿಯನ್ನು ಬಂಧಿಸಿದ್ದಾರೆ.

Advertisement

ಖಚಿತ ಮಾಹಿತಿಯ ಪ್ರಕಾರ ಕಾರ್ಯಪ್ರವೃತ್ತವಾದ ಪೊಲೀಸರ ತಂಡದವರು  ಹಂಸಾ ಅಲಿಯಾಸ್‌ ಉಮಾ (35) ಮತ್ತು ಆಕೆಯ ಪತಿ, ಕ್ಯಾಬ್‌ ಚಾಲಕ, ಜಿ. ಚಂದ್ರಕಾಂತ್‌ ಎಂಬವರನ್ನು ಬಂಧಿಸಿ ಅಪಹರಣಕ್ಕೆ ಈಡಾದ ಮಗವನ್ನು ಪಾರುಗೊಳಿಸಿದರು ಎಂದು ಶಂಶಾಬಾದ್‌ ವಲಯದ ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಪಿ ವಿ ಪದ್ಮಜಾ ಅವರು ತಿಳಿಸಿದರು. 

ಮಗುವನ್ನು ಆರೋಪಿ ದಂಪತಿ ಕಳೆದ ವಾರ ಅಪಹರಿಸಿತ್ತು ಮತ್ತು ಹಣಕ್ಕಾಗಿ ಅದನ್ನು ಮಾರಾಟ ಮಾಡುವ ಉದ್ದೇಶ ಹೊಂದಿತ್ತು ಎಂದು ಪದ್ಮಜಾ ತಿಳಿಸಿದ್ದಾರೆ.

17 ವರ್ಷಗಳ ಹಿಂದೆ ಹಂಸಾ ವ್ಯಕ್ತಿಯೊಬ್ಬನನ್ನು ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳನ್ನು ಪಡೆದಿದ್ದಳು. ಆದರೆ ಅನಂತರದಲ್ಲಿ ಪತಿಯು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದ. 

ಆರು ವರ್ಷಗಳ ಹಿಂದೆ ಹಂಸಾ ಗೆ ಕ್ಯಾಬ್‌ ಚಾಲಕ ಚಂದ್ರಕಾಂತ್‌ ನ ಪರಿಚಯವಾಗಿ ಆತನನ್ನು ಮದುವೆಯಾಗಿದ್ದಳು. ಆದರೆ ಇವರಿಗೆ ಮಗು ಆಗಿರಲಿಲ್ಲ. ಅದಕ್ಕಾಗಿ ಇವರು ಸಾಕಲು ಇಲ್ಲವೇ ಮಾರಲು ಮಗುವನ್ನು ಅಪಹರಿಸಲು ನಿರ್ಧರಿಸಿದ್ದರು ಎಂದು ಡಿಸಿಪಿ ಹೇಳಿದರು. 

Advertisement

ಕಳೆದ ಸೆ.29ರಂದು ಹಂಸಾ ತನಗೆ ಪರಿಚಯವಿರುವ ಹೆಂಗಸೊಬ್ಬಳ ಮನೆಗೆ ತೆರಳಿ “ಮನೆಯಿಂದ ಸ್ವಲ್ಪ ದೂರದಲ್ಲಿ ಕಾಯುತ್ತಿರುವ ನರ್ಸ್‌ಗೆ ಮಗುವನ್ನು ತೋರಿಸಲಿಕ್ಕಿದೆ’ ಎಂಬ ಕಾರಣ ಹೇಳಿ ಮಗವನ್ನು ಹೊರತರಲು ಸೂಚಿಸಿದ್ದಳು. ಆ ಪ್ರಕಾರ ಮಗುವಿನ ತಾಯಿ, ಹಂಸಾ ಳ  ಕೈಗೆ ಮಗವನ್ನು ಒಪ್ಪಿಸಿ, ಆಕೆಯೊಂದಿಗೆ ತನ್ನ ಸಹೋದರಿಯನ್ನು ಕಳುಹಿಸಿಕೊಟ್ಟಿದ್ದಳು. ಬಳಿಕ ಹಂಸಾ ಮಗುವಿನ ಚಿಕ್ಕಮ್ಮಳ ಗಮನವನ್ನು ಬೇರೆಡೆಗೆ ಹರಿಸಿ ಮಗವನ್ನು ಅಪಹರಿಸಿದ್ದಳು.

ಮಗುವಿನ ತಾಯಿ ಕೊಟ್ಟ ದೂರನ್ನು ಅನುಸರಿಸಿ ಪೊಲೀಸರು ಇಂದು ಬುಧವಾರ ಆರೋಪಿ ಹಂಸಾ ಮತ್ತು ಆಕೆಯ ಪತಿ ಚಂದ್ರಕಾಂತ್‌ನನ್ನು ಬಂಧಿಸಿ ಮಗುವನ್ನು ಪಾರುಗೊಳಿಸಿ ಅದನ್ನು ಅದರ ತಾಯಿಗೆ ಒಪ್ಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next