Advertisement

ಪ್ರೇಮ ವಿವಾಹವಾದ ಜೋಡಿಯನ್ನು ನಗ್ನಗೊಳಿಸಿ ಪರೇಡ್‌ ! ವಿಡಿಯೋ ವೈರಲ್‌

02:03 PM Apr 20, 2017 | Team Udayavani |

 ಬನ್ಸ್ವಾರ (ರಾಜಸ್ಥಾನ ): ತಮ್ಮ ಇಚ್ಛೆಗೆ ವಿರುದ್ದವಾಗಿ ಪ್ರೇಮ ವಿವಾಹವಾದ ಬುಡಕಟ್ಟು ಜನಾಂಗಕ್ಕೆ ಸೇರಿದ ಜೋಡಿಯೊಂದನ್ನು ನಗ್ನಗೊಳಿಸಿ ಸಾರ್ವಜನಿಕರ ಎದುರು ಥಳಿಸಿದ ಹೇಯ ಘಟನೆ ಭಾನುವಾರ ಶಂಭುಪುರ ಎಂಬಲ್ಲಿ ನಡೆದಿದೆ. ಘಟನೆಯ ವಿಡಿಯೋ ಚಿತ್ರೀಕರಣ ನಡೆಸಲಾಗಿದ್ದು, ವಿಡಿಯೋವೀಗ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.  

Advertisement

ಮನೆಯಿಂದ ಓಡಿಹೋಗಿ ವಿವಾಹವಾಗಿದ್ದ ಜೋಡಿಯನ್ನು  ಯುವತಿಯ ಕಡೆಯ 20 ಕ್ಕೂ ಹೆಚ್ಚು ಜನರು ಪತ್ತೆ ಹಚ್ಚಿದ್ದಾರೆ. ಇಬ್ಬರನ್ನೂ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next