Advertisement

ನಿರಾತಂಕವಾಗಿ ನಡೆದ ಮತ ಎಣಿಕೆ

03:19 PM Dec 31, 2020 | Team Udayavani |

ಬ್ಯಾಡಗಿ: ಮತಪತ್ರಗಳಲ್ಲಿ ನೋಟ್‌ ಪ್ರತ್ಯಕ್ಷ್ಯವಾಗಿದ್ದು ಸೇರಿದಂತೆ ಮೂರು ಮತಗಳೊಂದಿಗೆ ಅತ್ತೆಯನ್ನು ಹಿಂದಿಕ್ಕಿದ ಸೊಸೆ ಹೀಗೆ ಇನ್ನಿತರ ಕುತೂಹಲಕಾರಿ ಅಂಶಗಳೊಂದಿಗೆ ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ಪಟ್ಟಣದ ಸೇಂಟ್‌ ಜಾನ್‌ ವಿಯೆನ್ನಾ ಸ್ಕೂಲ್‌ ಆವರಣದಲ್ಲಿ ಬಿಗಿ ಭದ್ರತೆ ನಡುವೆ ನಿರಾತಂಕವಾಗಿ ಸಂಪನ್ನಗೊಂಡಿತು.

Advertisement

ತಹಶೀಲ್ದಾರ್‌ ರವಿ ಕೊರವರ ನೇತೃತ್ವದಲ್ಲಿ ನಡೆದ ಮತ ಎಣಿಕೆ ಕಾರ್ಯವು ನಿಗದಿತ ಅವಧಿಗೆ ಪ್ರಾರಂಭವಾಗಿತಾದರೂ ಸಂಜೆ ಯವರೆಗೂ ಕೇವಲ ಚಿಕ್ಕಬಾಸೂರ, ಮಾಸಣಗಿ, ಕಲ್ಲೇದೇವರ, ಶಿಡೇನೂರ, ಬನ್ನಿಹಟ್ಟಿ, ಹಿರೇಅಣಜಿ ಸೇರಿದಂತೆ ಒಟ್ಟು 6 ಗ್ರಾಮ ಪಂಚಾಯತ್‌ಗಳ ವಿಜೇತರ ಫಲಿತಾಂಶವಷ್ಟೇ ಪ್ರಕಟಗೊಳ್ಳಲು ಸಾಧ್ಯವಾಯಿತು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ವಿಜಯೋತ್ಸವ ಆಚರಿಸಿದರು. ಮೆರವಣಿಗೆ ನಿಷೇಧಿಸಿದ್ದರೂ ಒಬ್ಬರಿಗೊಬ್ಬರೂ ಬಣ್ಣ ಎರಚಿ, ಸಿಹಿ ಹಂಚಿ, ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಇದನ್ನೂ ಓದಿ:ಅಫಜಲಪುರ: ಸಂಭ್ರಮದ ನಡುವೆ ಸೂತಕ

ಮತ ಪೆಟ್ಟಿಗೆಯಲ್ಲಿ ನೋಟು ಪ್ರತ್ಯಕ್ಷ್ಯ

Advertisement

ತಾಲೂಕಿನ ಶಿಡೇನೂರ ಗ್ರಾಪಂ ಹಲವಾರು ಕುತೂಹಲಕಾರಿಅಂಶಗಳಿಗೆ  ಸಾಕ್ಷಿಯಾಯಿತು. ವಾರ್ಡ್‌ ಸಂಖ್ಯೆ 2ರಲ್ಲಿ ಎರಡು ಮತಪತ್ರಗಳಲ್ಲಿ 10 ಹಾಗೂ 20 ರೂ.ಗಳನ್ನಿಟ್ಟು ಮತದಾನ ಮಾಡಿದ್ದು ಬೆಳಕಿಗೆ ಬಂದಿದೆ. ಮತಪತ್ರಕ್ಕೆ ಪಿನ್‌ ಹಾಕಿ ನೋಟ್‌ಗಳನ್ನು ಅಂಟಿಸಲಾಗಿತ್ತು. ಬಳಿಕ ಪರಿಶೀಲಿಸಿದಚುನಾವಣಾಧಿಕಾರಿಗಳು ಎರಡೂ ಮತಗಳನ್ನು ತಿರಸ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next