ಬೆಂಗಳೂರು: ಚಿನ್ನದ ಸರ ಕಳವು ಮತ್ತು ಖೋಟಾ ನೋಟು ತಯಾರಿಕಾ ಜಾಲದಲ್ಲಿ ತೊಡಗಿದ್ದ ಇಬ್ಬರು ಕೇರಳ ಮೂಲದ ಆರೋಪಿಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಪ್ರದೀಪ್ ಅಲಿಯಾಸ್ ಉನ್ನಿ (38) ಹಾಗೂ ಸನಲ್ (34) ಬಂಧಿತರು. ಆರೋಪಿಗಳಿಂದ 3.19 ಲಕ್ಷ ರೂ. ಮೌಲ್ಯದ 500 ಮತ್ತು 2 ಸಾವಿರ ಮುಖ ಬೆಲೆಯ ಖೋಟಾ ನೋಟುಗಳು ಮತ್ತು 46 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಆರೋಪಿಗಳು ಬಸವನಪುರ ವಿಲೇಜ್‌ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಜೆ.ಪಿ. ಠಾಣೆ ವ್ಯಾಪ್ತಿ ಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಶಾಂತಿ ಎಂಬುವರು ಮನೆಯ ಕಿಟಕಿ ಪಕ್ಕದ ಟೇಬಲ್ ಮೇಲೆ ಇಟ್ಟಿದ್ದ ಚಿನ್ನದ ಸರವನ್ನ ಕಳವು ಮಾಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ನಕಲಿ ಪೇಮೆಂಟ್ ಸಂದೇಶ ತೋರಿಸಿ ಚಿನ್ನದಂಗಡಿಗಳಿಗೆ ವಂಚನೆ
ಖೋಟಾ ನೋಟುಗಳು ಪತ್ತೆ: ಬಂಧಿತರ ವಿಚಾರಣೆ ವೇಳೆ ಛಾಪಾ ಕಾಗದಗಳ ಮೇಲೆ 500 ಮತ್ತು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಕಲರ್ ಜೆರಾಕ್ಸ್ ಮೂಲಕ ಮುದ್ರಿಸಿ ಅಸಲಿ ನೋಟುಗಳು ಎಂದು ಬದಲಾವಣೆ ಮಾಡುತ್ತಿ ದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಕರ್ನಾಟಕ ಮಾತ್ರವಲ್ಲದೆ, ಕೇರಳ ದಲ್ಲೂ ಕೃತ್ಯ ಎಸಗುತ್ತಿದ್ದರು. ಕಳವು ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಗಳನ್ನಾಗಿ ಮಾಡಿ, ಬಂಗಾರದ ಅಂಗಡಿಗಳು ಮತ್ತು ಫೈನಾನ್ಸ್‌ಗಳಲ್ಲಿ ಅಡಮಾನ ಇಟ್ಟು ಮೋಜಿನ ಜೀವನ ನಡೆಸುತ್ತಿ ದ್ದರು ಎಂದು ಪೊಲೀಸರು ಹೇಳಿದರು. ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.