Advertisement

Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ

10:59 AM May 08, 2024 | Team Udayavani |

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಡಿಟರ್ಜೆಂಟ್‌, ಲೈಜಾಲ್, ಕೋಲಿನ್‌, ಟೀ ಪುಡಿ ಸೇರಿ ಇತರೆ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಕಾರ್ಖಾನೆ ಮೇಲೆ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ಮಾಡಿ 95 ಲಕ್ಷ ರೂ. ಮೌಲ್ಯದ ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ‌

Advertisement

ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಿದರಹಳ್ಳಿಯ ಶಿವಪಟೇಲ್‌ (40), ಟಿ.ಸಿ.ಪಾಳ್ಯದ ಐಶ್ವರ್ಯ ಬಡಾವಣೆಯ ದವಲತ್‌ ಸಿಂಗ್‌ (32) ಹಾಗೂ ಆಡುಗೋಡಿ ವಿನಾಯಕನಗರದ ಶುಭಂ ಗುಪ್ತಾ (20) ಬಂಧಿತರು.

ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ವಿನಾಯಕನಗದ ಗೋದಾವೊಂದರಲ್ಲಿ ಹಿಂದೂಸ್ತಾನ್‌ ಯುನಿಲಿವರ್‌, ರೆಕಿಟ್‌ ಬೆಂಕಿಸರ್‌, ಇಂಡಿಯಾ ಕಂಪನಿಗೆ ಸೇರಿದ ಉತ್ಪನ್ನಗಳಾದ ಸರ್ಫ್ ಎಕ್ಸೆಲ್, ವಿಮ್‌ ಲಿಕ್ವಿಡ್‌, ಲೈಫ್ ಬಾಯ್‌ ಹ್ಯಾಂಡ್‌ ವಾಶ್‌, ರಿನ್‌, ವೀಲ್‌ ಡಿಟರ್ಜೆಂಟ್‌ ಪುಡಿ, ಬ್ರೂಕ್‌ ಬಾಂಡ್‌ ರೆಡ್‌ ಲೇಬಲ್‌ ಟೀ ಪುಡಿ, ತ್ರಿ ರೋಸಸ್‌ ಟೀ ಪುಡಿ, ಲೈಜೋಲ್‌, ಹಾರ್ಪಿಕ್‌ ಉತ್ಪನ್ನಗಳನ್ನು ನಕಲಿಯಾಗಿ ತಯಾರಿಸಿ ದಾಸ್ತಾನು ಮಾಡಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗೋದಾಮಿನ ಮೇಲೆ ದಾಳಿ ಮಾಡಿ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ‌

ಈ ಸಂಬಂಧ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ನಂತರ ಸಿಸಿಬಿ ಅಧಿಕಾರಿಗಳು ಈ ನಕಲಿ ಉತ್ನನ್ನಗಳನ್ನು ತಯಾರಿಸುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅವಲನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ರಾಮಪುರ ಮತ್ತು ಬಿದರಹಳ್ಳಿಯ ಫ್ಯಾಕ್ಟರಿ ಮತ್ತು ಗೋದಾಮಿನ ಮೇಲೆ ದಾಳಿ ಮಾಡಿ ನಕಲಿ ಉತ್ಪನ್ನಗಳು ಹಾಗೂ ತಯಾರಿಕೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ತನಿಖೆ ಮುಂದುವರಿರೆದಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next